Advertisement

Chiranjeevi: ಮೆಗಾಸ್ಟಾರ್‌ ವೃತ್ತಿ ಜೀವನದಲ್ಲೇ ದುಬಾರಿ ಸಿನಿಮಾ ʼMega 157′ ಪೋಸ್ಟರ್‌ ಔಟ್

12:25 PM Aug 22, 2023 | Team Udayavani |

ಹೈದರಾಬಾದ್: ಮೆಗಾಸ್ಟಾರ್‌ ಚಿರಂಜೀವಿ ಅವರಿಗಿಂದು ಹುಟ್ಟು ಹಬ್ಬದ ಸಂಭ್ರಮ. ಸಿನಿಮಾರಂಗದ ಕಲಾವಿದರು ಹಾಗೂ ಅಭಿಮಾನಿಗಳು ಮೆಚ್ಚಿನ ನಟನಿಗೆ ಬರ್ತ್‌ ಡೇ ವಿಶ್‌ ಮಾಡುತ್ತಿದ್ದಾರೆ. ಅಭಿಮಾನಿಗಳಿಗೆ ಮೆಗಾ ಸ್ಟಾರ್‌ ಅವರ ಹೊಸ ಚಿತ್ರದ ಪೋಸ್ಟರ್‌ ಬರ್ತ್‌ ಡೇ ಗಿಫ್ಟ್‌ ಆಗಿ ಸಿಕ್ಕಿದೆ.

Advertisement

ಕಳೆದ ಕೆಲ ಸಮಯದಿಂದ ಒಂದು ಬಿಗ್‌ ಹಿಟ್‌ ನೀಡಲು ಚಿರಂಜೀವಿ ವಿಫಲರಾಗಿದ್ದಾರೆ. ಈ ಬಾರಿ ಫ್ಯಾಂಟಸಿ ಎಂಟರ್ಟೈನರ್ ಎಂದು ಹೇಳಲಾಗುತ್ತಿರುವ ಸಿನಿಮಾವೊಂದನ್ನು ಅನೌನ್ಸ್‌ ಆಗಿದೆ. ಚಿರಂಜೀವಿ ಅವರ ʼವಾಲ್ಟೇರ್ ವೀರಯ್ಯʼ, ‘ಭೋಲಾ ಶಂಕರ್’ ಬಾಕ್ಸ್‌ ಆಫೀಸ್‌ ನಲ್ಲಿ ಅಷ್ಟಾಗಿ ಸದ್ದು ಮಾಡಿಲ್ಲ. ಇದಲ್ಲದೇ ಚಿರಂಜೀವಿ ಸತತ ರಿಮೇಕ್‌ ಚಿತ್ರಗಳನ್ನೇ ನೀಡುತ್ತಿರುವುದರಿಂದ ಅವರ ಕೆಲ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಚಿರಂಜೀವಿ ಹುಟ್ಟುಹಬ್ಬಕ್ಕೆ ಅವರ 157ನೇ ಚಿತ್ರದ ಪೋಸ್ಟರ್‌ ರಿಲೀಸ್‌ ಆಗಿದೆ. ವಸಿಷ್ಠ ನಿರ್ದೆಶನದ ಸಿನಿಮಾದ ಪೋಸ್ಟರ್‌ ರಿಲೀಸ್‌ ಆಗಿದೆ. ಈ ಸಿನಿಮಾದ ಅಪ್ಡೇಟ್‌ ಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದರು. ಅದರಂತೆ ಇಂದು ಈ ಸಿನಿಮಾದ ಪೋಸ್ಟರ್‌ ರಿಲೀಸ್‌ ಆಗಿದೆ.

ಪೋಸ್ಟರ್‌ ನಲ್ಲಿ ಪ್ರಕೃತಿಯ 5 ಅಂಶಗಳಾದ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶದಂತಹ ಪಂಚಭೂತಗಳನ್ನು ತೋರಿಸಲಾಗಿದೆ. ಇದೊಂದು ಫ್ಯಾಂಟಸಿ ಎಂಟರ್ಟೈನರ್ ಸಿನಿಮಾವೆಂದು ಹೇಳಲಾಗುತ್ತಿದೆ. ಪೋಸ್ಟರ್‌ ರಿಲೀಸ್‌ ಮಾಡಿ ಮೆಗಾ ಸ್ಟಾರ್‌ ಅವರಿಗೆ ಚಿತ್ರತಂಡ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದೆ.

ಯುವಿ ಕ್ರಿಯೇಷನ್ಸ್‌ನ ಬ್ಯಾನರ್ ಅಡಿಯಲ್ಲಿ ವಿ ವಂಶಿ ಕೃಷ್ಣಾ ರೆಡ್ಡಿ, ಪ್ರಮೋದ್ ಉಪ್ಪಲಪತಿ ಮತ್ತು ವಿಕ್ರಮ್ ರೆಡ್ಡಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿರಂಜೀವಿ ಅವರ ವೃತ್ತಿಜೀವನದಲ್ಲಿ ಈ ಸಿನಿಮಾ ಅತ್ಯಂತ ದುಬಾರಿಯಾಗಲಿದೆ ಎಂದು ವರದಿ ತಿಳಿಸಿದೆ.

Advertisement

ಸದ್ಯಕ್ಕೆ ಪೋಸ್ಟರ್‌ ಮಾತ್ರ ರಿಲೀಸ್‌ ಆಗಿದ್ದು, ಇದರ ಟೈಟಲ್‌ ಹಾಗೂ ಪಾತ್ರವರ್ಗಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹೊರಬೀಳಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next