ನವದೆಹಲಿ: ಈಗಾಗಲೇ ಚಿಪ್ ಕೊರತೆಯಿಂದ ಸಂಕಷ್ಟಕ್ಕೀಡಾಗಿರುವ ಜಾಗತಿಕ ಚಿಪ್‌ಮೇಕರ್‌ಗಳಿಗೆ ಈಗ ಹೊಸ ತಲೆನೋವು ಶುರುವಾಗಿದೆ.
ಸೆಮಿಕಂಡಕ್ಟರ್ ಉತ್ಪಾದನಾ ಸ್ಥಾವರಗಳಲ್ಲಿ ಕೆಲಸ ಮಾಡಬಲ್ಲಂತಹ ಪರಿಣತ ಹಾಗೂ ಕೌಶಲ್ಯಯುಕ್ತ ಕಾರ್ಮಿಕರ ಅಭಾವ ಉಂಟಾಗಿದೆ. ಇದು ಮತ್ತೆ ಚಿಪ್ ಪೂರೈಕೆ ಸರಪಳಿಯ ಮೇಲೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ.
ಎಲೆಕ್ಟ್ರಾನಿಕ್ಸ್‌ನ ಬೇಡಿಕೆ ಏಕಾಏಕಿ ಹೆಚ್ಚಿರುವುದು, ಚಿಪ್ ತಯಾರಿಕಾ ಸಾಮರ್ಥ್ಯ ಹೆಚ್ಚಿಸುವಲ್ಲಿ ಸರ್ಕಾರಗಳ ನಡುವೆಯೇ ಪೈಪೋಟಿ ಸೇರಿದಂತೆ ಹಲವು ಕಾರಣಗಳಿಂದಾಗಿ ಕೌಶಲ್ಯಯುಕ್ತ ಕಾರ್ಮಿಕರಿಗೆ ಕೊರತೆ ಉಂಟಾಗಿದೆ.
ಇದನ್ನೂ ಓದಿ:ಚಳಿಯನ್ನೂ ಲೆಕ್ಕಿಸದೇ ಪತ್ರಿಕೆ ವಿತರಿಸುವ ಹುಡುಗರಿಗೆ ಸ್ವಿಟರ್ ನೀಡಿದ ಶುಕರಾಜ್ ತಾಳಕೇರಿ
ಚಿಪ್ ತಯಾರಿಕಾ ಸೌಲಭ್ಯಗಳು ಆಟೋಮೇಟೆಡ್ ಆಗಿದ್ದು, ಸೆಮಿಕಂಡಕ್ಟರ್‌ಗಳ ತಯಾರಿಕಾ ಪ್ರಕ್ರಿಯೆಯಲ್ಲಿ ಹೈಟೆಕ್ ಸಲಕರಣೆಗಳನ್ನು ಬಳಸಲಾಗುತ್ತದೆ. ಅದನ್ನು ನಿರ್ವಹಿಸಲು ಕೌಶಲ್ಯಯುಕ್ತ ಕಾರ್ಮಿಕರೇ ಬೇಕು.