Advertisement
ಹೆಸರು ಬ್ರಹ್ಮಚೈತನ್ಯ. ಇವರ ವಯಸ್ಸೇನು ಕಡಿಮೆ ಇಲ್ಲ. 73. ಬದುಕಿನ ಮುಸ್ಸಂಜೆ ಇದು. ಸರ್ಕಾರಿ ಸೇವೆಯಿಂದ ನಿವೃತ್ತಿ. ಮಕ್ಕಳೆಲ್ಲರೂ ಸರ್ಕಾರಿ ನೌಕರರಾಗಿದ್ದರೂ ತನ್ನ ಎಲ್ಲಾ ಐಶಾರಾಮಿ ಬದುಕನ್ನು ಬದಿಗಿಟ್ಟು, ನಗರದ ಹೊರವಲಯದಲ್ಲಿರುವ ಕಾಡು ಮಲ್ಲೇಶ್ವರ ಬೆಟ್ಟದಲ್ಲಿ ಗಿಡ-ಮರಗಳನ್ನು ನೆಟ್ಟು ಪೋಷಿಸುತ್ತಿರುವುದನ್ನು ಕಂಡಾಗ ಅವರ ಹೆಸರಿನಂತೆ ಅವರಲ್ಲಿ ಚೈತನ್ಯ ತುಂಬಿ ಹರಿಯುತ್ತಿರುವುದರ ದ್ಯೋತಕದಂತಿದೆ.ತಪ್ಪುಗಳನ್ನು ತೊಳೆದು ಹಾಕಲು ಗುಡಿ ಗೋಪುರಗಳಿಗೆ ತೆರಳಿ ಪೂಜೆ ಪುನಸ್ಕಾರಗಳನ್ನು ಮಾಡಿಸುತ್ತಾರೆ. ಆದರೆ ಯಾವೊಬ್ಬ ವ್ಯಕ್ತಿಯು ಒಳ್ಳೆಯ ಕಾರ್ಯಗಳನ್ನು ಮಾಡಿ ತಮ್ಮ ಜೀವನವನ್ನು ಸ್ಪೂರ್ತಿ ಮಯಗೊಳಿಸಲು ಮುಂದಾಗುವುದಿಲ್ಲ. ಆದ್ದರಿಂದಲ್ಲೆ ನಾನ್ನುಗಿಡ ಮರಗಳ ಪೋಷಣೆಗಿಂತ ಬೆರೊಂದು ಉತ್ತಮ ಕಾರ್ಯವಿಲ್ಲ ಎಂದು ಭಾವಿಸಿದ್ದೇನೆ ಎನ್ನುತ್ತಾರೆ ಬ್ರಹ್ಮಚೈತನ್ಯ.
Related Articles
Advertisement
ಬಿಸಿಲಿನ ಬೇಗೆಗೆ ಭೂಮಿಯ ತೇವಾಂಶ ಕಡಿಮೆಯಾಗುತ್ತದೆ. ಅದಕ್ಕೆ ಬ್ರಹ್ಮಚೈತನ್ಯ ಹೊಸ ಐಡಿಯಾ ಹುಡುಕಿದ್ದಾರೆ. ಗಿಡಿದ ಬುಡದಿಂದ ಆರ್ಧ ಅಡಿ ದೂರದಲ್ಲಿ ರಂಧ್ರಗಳನ್ನು ಕೊರೆದ ಪ್ಲಾಸ್ಟಿಕ್ ಡಬ್ಬವನು ಹೂತಿಟ್ಟಿದ್ದಾರೆ. ಒಂದೊಂದೆ ಹನಿಯಾಗಿ ಸೋರುವುದರಿಂದ ಪ್ರತಿ ದಿನ ಗಿಡದ ಬೇರುಗಳಿಗೆ ತೇವಾಂಶ ಸಿಗುವುದರಿಂದ ಗಿಡವು ಬೆಳವಣಿಗೆ ಉತ್ತಮವಾಗುತ್ತದೆ ಎನ್ನುವುದು ತಂತ್ರ. ಏನೇ ಆಗಲೀ ರಾಮಾ ಕೃಷ್ಣ ಅನ್ನೋ ವಯಸ್ಸಲ್ಲಿ ಮರೆಯದ ಸೇವೆ.
ಕೆ. ಶ್ರೀನಿವಾಸ