ಚಿಂತಾಮಣಿ: ಬಡವರು ಸೇರಿದಂತೆ ಅರ್ಹರಿಗೆ ಸೇರಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕ್ಯಾಂಟರ್ ಮೂಲಕ ಖಾಸಗಿ ವ್ಯಕ್ತಿಗಳಿಗೆ ಸರಬರಾಜು ಮಾಡಿದ್ದ ವೇಳೆ ನಿವೃತ್ತ ಸೈನಿಕರೊಬ್ಬರು ಪಡಿತರ ಅಕ್ಕಿ ಸಮೇತ ಟ್ಯಾಂಕರನ್ನು ರೆಡ್ ಹ್ಯಾಂಡಾಗಿ ಹಿಡಿದುಕೊಟ್ಟಿರುವ ಘಟನೆ ಮಂಗಳವಾರ ರಾತ್ರಿ ಚಿಂತಾಮಣಿನಗರದ ಎಪಿಎಂಸಿ ಮಾರುಕಟ್ಟೆ ಬಳಿ ನಡೆದಿದೆ.
200ಕ್ಕೂ ಹೆಚ್ಚು ಮೂಟೆ?: ಖಚಿತ ಮಾಹಿತಿ ಆಧಾರ¨ ಮೇಲೆ ಚಿಂತಾಮಣಿ ತಾಲೂಕು ರಾಯಪ್ಪಲ್ಲಿ ಗ್ರಾಮದ ನಿವೃತ್ತ ಸೈನಿಕ ಶಿವಾನಂದರೆಡಿ ಮಂಗಳವಾರ ರಾತ್ರಿ 7 ಗಂಟೆ ಸಮಯದಲ್ಲಿ ಅಕ್ರಮವಾಗಿ ಎಪಿಎಂಸಿ ಮಾರುಕಟ್ಟೆ ಬಳಿಯ ಖಾಸಗಿ ವ್ಯಕ್ತಿಯೊಬ್ಬರ ಗೋಡೌನ್ ಗೆ ಪಡಿತರ ಅಕ್ಕಿ ಸಾಗಿಸುತ್ತಿರುವುದನ್ನು ಕಂಡು ಕೂಡಲೇ ತಹಶೀಲ್ದಾರ್ ಹಾಗೂ ಮಾಧ್ಯಮದವರಿಗೆ ಸುದ್ದಿ ಮುಟ್ಟಿಸಿ ತಹಶೀಲ್ದಾರ್ ಹನುಮಂತರಾಯಪ್ಪ ಅವರಿಗೆ ಅಕ್ಕಿ ಮೂಟೆ ಇದ್ದ ಕ್ಯಾಂಟರ್ ಸಮೇತ ರೆಡ್ ಹ್ಯಾಂಡಾಗಿ ಹಿಡಿದುಕೊಟ್ಟಿದ್ದಾರೆ.
ಯಾರಿಗೆ ಸೇರಿದ್ದು, ಎಲ್ಲಿಂದ ಬಂತು?: ಸ್ಥಳಕ್ಕೆ ಬಂದ ತಹಶೀಲ್ದಾರ್, ಕೂಡಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರೂ ಕೂಡ ಸ್ಥಳಕ್ಕೆ ಒಂದು ಗಂಟೆ ನಂತರ ಆಹಾರ ನಿರೀಕ್ಷಕ ಪ್ರಕಾಶ್ ಆಗಮಿಸಿ, ಕ್ಯಾಂಟರ್ ನಲ್ಲಿನ ಪಡಿತರ ಅಕ್ಕಿ ಪರಿಶೀಲಿಸಿ ಚಿಂತಾಮಣಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕ್ಯಾಂಟರ್ ಸಮೇತ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ಅಕ್ಕಿ ಯಾರಿಗೆ ಸೇರಿದ್ದು, ಎಲ್ಲಿಂದ ಬಂತು ಎಂಬುದರ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ:ಡಿಕೆಶಿ ಪುತ್ರಿ ಐಶ್ವರ್ಯ- ಸಿದ್ದಾರ್ಥ ಹೆಗಡೆ ಪುತ್ರ ಅಮರ್ಥ್ಯ ನಿಶ್ಚಿತಾರ್ಥ ಸಂಭ್ರಮ
ಮೂಟೆ ಪರಿಶೀಲನೆ: ಪಡಿತರ ಅಕ್ಕಿ ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಸರಬರಾಜು ಮಾಡುತ್ತಿರುವ ಬಗ್ಗೆ ಮಂಗಳವಾರ ರಾತ್ರಿ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಸವಿತಾ ಹಾಗೂ ಆಹಾರ ಶಿರಸ್ತೇದಾರ್ ಸುಧಾರಾಣಿರವರು ಆಹಾರ ಮತ್ತು ನಾಗರಿಕರ ಸರಬರಾಜು ಉಗ್ರಾಣಕ್ಕೆ ಭೇಟಿ ನೀಡಿ ಉಗ್ರಾಣದಲ್ಲಿ ಅಕ್ಕಿ ಮೂಟೆಗಳ ದಾಸ್ತಾನನ್ನು ಪರಿಶೀಲನೆ ನಡೆಸಿದರು.