ಅದರಲ್ಲೂ ಪಿ.ಸಿ.ಆರ್. ಕಾಂಪ್ಲೆಕ್ಸ್‌ನಿಂದ ನಗರದ ಕನ್ನಂಪಲ್ಲಿಯವರೆಗಿನ ರಸ್ತೆ ಜನ ಜಂಗುಳಿಯಿಂದ ಕೂಡಿರುತ್ತೆ. ಇಂತಹ ರಸ್ತೆಯಲ್ಲೇ ಬೀದಿ ದ್ವೀಪಗಳು ಬೆಳಗುತ್ತಿಲ್ಲ, ಇದು ಜನ ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
Advertisement
ನಗರದಲ್ಲಿ ಇತ್ತೀಚಿಗೆ ಕಳ್ಳರ ಕಾಟ ಹೆಚ್ಚಾಗಿ ಸರಗಳ್ಳತನ, ಮನೆ, ಅಂಗಡಿ ಮಳಿಗೆಗಳ ದರೋಡೆ ಹೆಚ್ಚಾಗಿದೆ. ಚಿಂತಾಮಣಿ ನಗರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಪೊಲೀಸ್ ಇಲಾಖೆ ನಗರದ ಹಲವೆಡೆ ಸಿಸಿ ಕ್ಯಾಮೆರಾ ಸಹ ಅಳವಡಿಸಿದೆ. ಸಂಜೆ ವೇಳೆ ಬೀದಿ ದ್ವೀಪ ಬೆಳಗದ ಪರಿಣಾಮ ಅಪರಾಧ ಕೃತ್ಯಗಳು ಮತ್ತೆ ಪ್ರಾರಂಭ ಆಗುವ ಸಾಧ್ಯತೆ ಹೆಚ್ಚಿದೆ.
ನಗರದಲ್ಲಿ ಎಲ್ಲವೂ ಸರಿ ಇದೆ ಎಂದು ಬೀಗುವ ನಗರಸಭೆ ಅಧಿಕಾರಿಗಳು ಮುಖ್ಯರಸ್ತೆಯಲ್ಲಿ 20 ದಿನಗಳಿಂದ ಬೀದಿ ದ್ವೀಪಗಳು ಬೆಳಗದಿದ್ದರೂ ಅದರ ಕಡೆ ಗಮನ ಹರಿಸಿಲ್ಲ. ಇದು ಅಧಿಕಾರಿಗಳ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ರಾತ್ರಿ ವೇಳೆ ಬೆಂಗಳೂರು ವೃತ್ತದಿಂದ ತಾಲೂಕು ಕಚೇರಿವರೆಗೂ ಸಂಚರಿಸಲು ಬಹಳ ಕಷ್ಟವಾಗಿದೆ.ಸಂಬಂಧಪಟ್ಟಅಧಿಕಾರಿಗಳು ಶೀಘ್ರ ಬೀದಿ ದ್ವೀಪ ದುರಸ್ತಿ ಮಾಡಬೇಕು. ಮೂರು ದಿನಗಳಿಂದ ದುರಸ್ತಿ ಕಾರ್ಯ ಪ್ರಾರಂಭಿಸಿದರೂ ಅಲ್ಲಲ್ಲಿ ಮಾತ್ರ ದೀಪಗಳು ಹುರಿಯುತ್ತಿದ್ದು, ಉಳಿದ ಕಡೆ ಕತ್ತಲು ಆವರಿಸಿದೆ.