Advertisement

Chintamani: ಒಂದು ವರ್ಷದ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ಮಹಿಳೆ… ದೃಶ್ಯ ಸೆರೆ

10:33 PM Jul 03, 2024 | Team Udayavani |

ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ವರ್ಷದ ಮಗುವನ್ನು ಮಹಿಳೆಯೊಬ್ಬಳು ಬಿಟ್ಟು ಹೋಗಿರುವ ಘಟನೆ ಇಂದು ಮಧ್ಯಾಹ್ನದ ವೇಳೆ ನಡೆದಿದೆ.

Advertisement

ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನದ ವೇಳೆ ಒಂದು ವರ್ಷದ ಮಗುವನ್ನು ಎತ್ತಿಕೊಂಡು ಬಂದ ಮಹಿಳೆಯೊಬ್ಬಳು ಆಸ್ಪತ್ರೆ ಕೊಠಡಿ ಒಂದರ ತೊಟ್ಟಿಲಿನಲ್ಲಿ ಬಿಟ್ಟು ಹೋಗಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು.

ಕರ್ತವ್ಯದಲ್ಲಿದ್ದ ನರ್ಸುಗಳು ಒಂದು ವರ್ಷದ ಬಾಲಕನನ್ನು ಗಮನಿಸಿ ಆಸ್ಪತ್ರೆಯಲ್ಲಿರುವ ತಾಯಂದಿರಿಂದ ವಿಚಾದಿಸಿದರೆ ಆ ಒಂದು ವರ್ಷದ ಮಗು ಯಾರದಿರಬಹುದು ಎಂದು ತಿಳಿದು ಬಂದಿಲ್ಲ.

ಆಸ್ಪತ್ರೆಯಲ್ಲಿ ಬಿಟ್ಟು ಹೋಗಿರುವ ಮಗು ತಂದೆ ತಾಯಿ ಯಾರಿರಬಹುದು ಪತ್ತೆ ಹಚ್ಚಲು ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ಸಂತೋಷ್ ರವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಗೊತ್ತಾಗಿದೆ.

ಇದನ್ನೂ ಓದಿ: Yellapur: ಪ್ರವಾಸಿಗರ ಗಮನಕ್ಕೆ; ಸಾತೋಡ್ಡಿ ಜಲಪಾತಕ್ಕೆ ನಿಷೇಧ

Advertisement
Advertisement

Udayavani is now on Telegram. Click here to join our channel and stay updated with the latest news.

Next