Advertisement

ಚಿನೂಕ್‌ ಕಾಪ್ಟರ್‌ ಭಾರತಕ್ಕೆ

12:30 AM Feb 11, 2019 | |

ಹೊಸದಿಲ್ಲಿ: ಅಮೆರಿಕದ ವಿಮಾನ ತಯಾರಿಕೆ ಕಂಪೆನಿ ಬೋಯಿಂಗ್‌ ಭಾರತೀಯ ವಾಯುಪಡೆಗೆ ಮೊದಲ ಸುತ್ತಿನ ನಾಲ್ಕು ಚಿನೂಕ್‌ ಕಾಪ್ಟರ್‌ಗಳನ್ನು ಒದಗಿಸುತ್ತಿದೆ. ಈ ಕಾಪ್ಟರ್‌ಗಳು ಗುಜರಾತ್‌ನ ಮುಂದ್ರಾ ಬಂದರಿಗೆ ಆಗಮಿಸಿವೆ ಎಂದು ಬೋಯಿಂಗ್‌ ಖಚಿತಪಡಿಸಿದೆ. ಇವುಗಳನ್ನು ಚಂಡೀಗಢಕ್ಕೆ ಸಾಗಿಸಿ, ಅಲ್ಲಿ ವಾಯುಪಡೆಗೆ ಅಧಿಕೃತವಾಗಿ ನಿಯೋಜನೆ ಮಾಡಲಾಗುತ್ತದೆ. ಈ ಪ್ರಕ್ರಿಯೆ ವರ್ಷಾಂತ್ಯದಲ್ಲಿ ನಡೆಯಲಿದೆ. ಈ ಕಾಪ್ಟರ್‌ಗಳನ್ನು ಸೈನಿಕರು, ಶಸ್ತ್ರಾಸ್ತ್ರಗಳ ಸಾಗಣೆಗೆ ಬಳಸಲಾಗುತ್ತದೆ. ಅಲ್ಲದೆ ಇದನ್ನು ರಕ್ಷಣಾ ಕಾರ್ಯಾಚರಣೆಯಲ್ಲೂ ಬಳಸಲಾಗುತ್ತದೆ. 2015ರಲ್ಲಿ ಭಾರತ ಸರಕಾರ ಒಪ್ಪಂದ ಮಾಡಿಕೊಂಡಿದ್ದು, 15 ಚಿನೂಕ್‌ ಕಾಪ್ಟರ್‌ಗಳನ್ನು ಖರೀದಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next