Advertisement
ಸಾಹುಕಾರನಿಗೆ ಇದ್ದಕ್ಕಿದ್ದಂತೆ ಕೆಟ್ಟ ಬುದ್ಧಿ ಬರತೊಡಗಿತು. ಇಷ್ಟೆಲ್ಲ ವ್ಯವಹಾರ ಮಾಡುವ ನಾನೇಕೆ ಕಡಿಮೆ ಹಣದಲ್ಲಿ ಕೆಲಸ ಮಾಡಿಕೊಡಬೇಕು? ಊರವರು ಕೊಡೋ ಒಂದೆರಡು ಬಳ್ಳ ಬತ್ತ ರಾಗಿಗೇಕೆ ತಾನು ತೃಪ್ತನಾಗಬೇಕು. ಹಸಿವೆ ನಿದ್ದೆ ಎನ್ನದೆ ಇವರಿಗೆಲ್ಲ ಸಹಕಾರ ನೀಡ್ತೀನಿ. ಹಾಗಿರುವಾಗ ತಾನೇಕೆ ಇನ್ನೂ ಹೆಚ್ಚಿಗೆ ಸಂಭಾವನೆ ತೆಗೆದುಕೊಳ್ಳಬಾರದೆಂಬ ಆಲೋಚನೆ ಬಂದಿದ್ದೇ ತಡ, ಅವನ ನಡೆ ನುಡಿಯಲ್ಲಿ ವ್ಯತ್ಯಯ ಕಾಣತೊಡಗಿತು. ಸುತ್ತಲ ಎಂಟು ಹಳ್ಳಿಯೂ ಇವರ ಕೈಕೆಳಗಿತ್ತು. ಆ ಜನಗಳ ಎಲ್ಲ ವ್ಯವಹಾರಿಕೆಗೂ ಕೈ ಜೋಡಿಸತೊಡಗಿದನು. ದಿನೇ ದಿನೇ ಇವನ ಉಪಟಳ ಹೆಚ್ಚಾಗ ತೊಡಗಿತು. ಒಂದೆರಡು ಬಳ್ಳದಲ್ಲಿ ಮುಗಿಯುತ್ತಿದ್ದ ಕೆಲಸ ಈಗ ಗುಂಟೆಗಳಿಗೆ ಹೋಗಿದೆ. ನೀಡಲಾಗದವರು ಅದಕ್ಕೆ ಸಮನಾದ ಹಣವನ್ನೋ ವಸ್ತುವನ್ನೋ ಹಸು ಎತ್ತುಗಳನ್ನೋ ನೀಡಬೇಕೆಂದು ಕರಾರು ಹಾಕುತ್ತಿದ್ದ. ಜನ ಬೇಸತ್ತರು, ನೊಂದರು. ಹೀಗೇ ತನ್ನ ದುರಾಸೆಯಿಂದ ಸಾಹುಕಾರ ಇನ್ನೂ ಸಾಹುಕಾರನಾಗತೊಡಗಿದ.
Related Articles
Advertisement
ಈ ಪತ್ರವನ್ನೋದಿದ ಮುದುಕ ಎಂಟು ಹಳ್ಳಿ ಮುಖಂಡರ ಸಮೇತ ಸಾಹುಕಾರನಲ್ಲಿಗೆ ಹೊರಟ. ಅವನಿಗೆ ನಡೆದದ್ದನ್ನೆಲ್ಲಾ ವಿವರಿಸಿದ. ಸಾಹುಕಾರನಿಗೆ ಕೋಪ ಬಂದರೂ ಮೌನಿಯಾದ. ದೇವರು… ಅವನ ಪತ್ರ… ಜೊತೆಗೆ ಊರ ಹಿರಿಯನ ಕನಸಲ್ಲಿ ಬಂದ ಆ ದೇವರ ಮಾತು… ಇವೆಲ್ಲವನ್ನೂ ಕೇಳಿ ಸಾಹುಕಾರ ಹೆದರಿದ. ಆ ಪತ್ರದಲ್ಲಿರುವಂತೆ ಎಲ್ಲವನ್ನೂ ಊರಜನರಿಗೆ ಹಂಚಿದ. ಎಲ್ಲರೂ ಖುಷಿಯಾದರು. ಮನೆಗೆ ಬಂದ ಯಜಮಾನರಿಗೆ ಧರ್ಮಪತ್ನಿ ನುಡಿದಳು. “ಹೇಳಲಿಲ್ಲವೇ ನಾನು ಊರ ಜನರಿಗೆ ಬಡವರಿಗೆ ಮೋಸ ಮಾಡಿ ಹೆಚ್ಚು ಕಾಲ ನಾವು ಸುಖವಾಗಿರಲಾರೆವು ಎಂದು. ನಮ್ಮಲ್ಲಿನ ಒಳ್ಳೆತನ ನಮ್ಮನ್ನ, ನಮ್ಮ ಮಕ್ಕಳನ್ನ ಕಾಪಾಡುತ್ತೆ. ನಿಮ್ಮ ದುರಾಸೆಯೇ ದುಃಖಕ್ಕೆ ಕಾರಣ. ಈಗಲಾದರೂ ಅರಿವಾಯಿತೇ? ಇನ್ನು ಮುಂದಾದರೂ ಪ್ರಾಮಾಣಿಕವಾಗಿ, ಇನ್ನೊಬ್ಬರಿಗೆ ನೋವು ಕೊಡದಂತೆ ಬದುಕೋಣ.’ ಎಂದಳು. ಸಾಹುಕಾರನಿಗೆ ಪತ್ನಿಯ ಮಾತು ನಿಜ ಎಂದು ತೋರಿತು. ಆತನಿಗೆ ತನ್ನ ತಪ್ಪಿನ ಅರಿವಾಯಿತು. ಅಂದಿನಿಂದ ಸಾಹುಕಾರ ಜನಾನುರಾಗಿಯಾಗಿ ಬದುಕಿದ.
– ಸವಿತಾ ನಾಗೇಶ್
**ಪ್ರಿಯಂವದೆಯ ಸ್ವಯಂವರ! ಇದ್ದ ಒಬ್ಬಳೇ ಮಗಳು ಪ್ರಿಯಂವದೆಯನ್ನು ಬಹಳ ಮುದ್ದಾಗಿ ಪ್ರೀತಿಯಿಂದ ಬೆಳೆಸಿದ್ದರು ತಂದೆ ಮಾರ್ತಾಂಡ ಮತ್ತು ತಾಯಿ ರತ್ನಾವತಿ. ಅವಳ್ಳೋ ಅತಿಲೋಕಸುಂದರಿ. ಮನೆಯಲ್ಲಿ ದುಡ್ಡು ಒಡವೆಗಳಿಗೇನೂ ಕಮ್ಮಿ ಇರಲಿಲ್ಲ. ಅವಳು ನಡೆದರೂ ಕಾಲೆಲ್ಲಿ ಸವೆಯುತ್ತೋ ಎನ್ನುವಷ್ಟು ಸುಖವಾಗಿ ಬೆಳೆಸಿದ್ದರು. ಅವಳು ಕೇಳಿದ್ದೆಲ್ಲವನ್ನೂ ಕೊಡಿಸುತ್ತಿದ್ದರು. ಊರಿನವರಿಗೂ ಈ ಕುಟುಂಬವೆಂದರೆ ಪ್ರೀತಿ ಆದರ. ಇವರೂ ಸಹಾ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದರು. ಮಗಳ ಸಂಗೀತ ನೃತ್ಯಭ್ಯಾಸ ಮನೆಯಲ್ಲೇ ಸಾಂಗವಾಗಿ ನಡೆಯುತಿತ್ತು. ಗುರುಗಳು ಮನೆಗೆ ಬಂದು ಹೋಗುತ್ತಿದ್ದರು. ವಯಸ್ಸಿಗೆ ಬಂದ ಮಗಳು ನೋಡಲು ಇನ್ನೂ ಮುದ್ದಾಗಿ ಕಾಣತೊಡಗಿದಳು. ಆತ್ಮೀಯರೊಬ್ಬರು “ಸ್ವಾಮಿ, ಮಗಳನ್ನ ಏನು ಮನೇಲೇ ಇಟ್ಕೊಂಡಿರಬೇಕು ಅಂತಿದ್ದೀರಾ ಹೇಗೆ?’ ಎಂದಾಗ ಮಾರ್ತಾಂಡ ಪ್ರಶ್ನಾರ್ಥಕವಾಗಿ ನೋಡಿದ! ಮಗಳು ಮದುವೆಯ ವಯಸ್ಸಿಗೆ ಬಂದೇಬಿಟ್ಟಿದ್ದಾಳಾ? ಅವನು ಇಲ್ಲಿಯವರೆಗೆ ಆ ಯೋಚನೆಯನ್ನೇ ಮಾಡಿರಲಿಲ್ಲ. ಮನೆಗೆ ಓಡಿಬಂದವನೇ ಪತ್ನಿಗೆ ಮಗಳ ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದ. ತಾಯಿಗೂ ಹೌದಲ್ಲಾ ಎನಿಸಿತು. ವಿಷಯ ತಲೆಗೆ ಬಂದದ್ದೇ ತಡ ಮಗಳಿಗಾಗಿ ರಾಜಕುಮಾರನನ್ನೇ ಹುಡುಕುತ್ತ ಸಾಗಿದರು. ಜ್ಯೋತಿಷ್ಯರ ಬಳಿ ತೆರಳಿ ಜಾತಕ ತೋರಿಸಿದರು. ಅವರೂ “ತಕ್ಕನಾದ ಒಳ್ಳೆಯ ರಾಜಕುಮಾರನೇ ಸಿಗುವನು. ಆದರೆ ಮಧ್ಯೆ ಸ್ವಲ್ಪ ತೊಂದರೆಯಾಗುತ್ತೆ, ಮುಂದೆ ಚೆನ್ನಾಗಿರ್ತಾಳೆ’ ಎಂದರು. ತಂದೆತಾಯಿಗೆ ಆ ತೊಂದರೆ ಯಾವುದಪ್ಪಾ ಎಂದು ಚಿಂತೆಗೀಡಾದರು! ಆದರೂ ಮನೆಯ ಹಿರಿಯರ ಸಾಂತ್ವನದ ಮಾತುಗಳಿಂದ ವರಾನ್ವೇಷಣೆಯಲ್ಲಿ ನಿರತರಾದರು. ಎಷ್ಟು ಹುಡುಕಿದರೂ ತಕ್ಕನಾದ ವರ ಸಿಗುತ್ತಲೇ ಇಲ್ಲ. ದಂತದ ಬೊಂಬೆಯಂತಿರುವ ಇವಳಿಗೆ ವರ ಸಿಗುತ್ತಿಲ್ಲವೇ? ಏನಿದು… ಏಕಾಗಿ ಹೀಗಾಗ್ತಿದೆ? ಏನೊಂದೂ ತೋಚದೆ ಕಂಗಾಲಾದರು. ಮಗಳೂ ಸಹಾ ತಂದೆತಾಯಿ ಕಷ್ಟ ಪಡುತ್ತಿರುವುದನ್ನು ಗಮನಿಸಿದಳು. ಅವಳು ನಗುನಗುತ್ತಾ “ಅಪ್ಪಾ, ಇಷ್ಟೊಂದು ಚಿಂತೆಯಾಕೆ? ಎಲ್ಲೋ ಇರ್ತಾನೆ, ಬರ್ತಾನೆ ಬಿಡಿ, ಚಿಂತಿಸಬೇಡಿ.’ ಎಂದಾಗಲಂತೂ ತಂದೆತಾಯಿ ಮಂಕಾದರು. ಜೋಯಿಸರು ಪೂಜೆ ಮಾಡಿಸುವಂತೆ ತಿಳಿಸಿದರು. ಅದರಂತೆ ಪೂಜೆ ಮಾಡಿಸಿ ಊರಿನ ಜನರಿಗೆಲ್ಲ ಊಟ ಹಾಕಿಸಿದರು. ಸಂತೃಪ್ತಗೊಂಡ ಜನರೆಲ್ಲ ಶುಭಹಾರೈಸಿದರು. ದಿನಗಳುರುಳಿತೇ ಹೊರತು ವರ ಮಾತ್ರ ಸಿಗಲಿಲ್ಲ! ತಂದೆತಾಯಿ ಚಿಂತೆ ಹೆಚ್ಚಾಯಿತು. ಇವರನ್ನು ಕಂಡ ಮಗಳೂ ಸಹಾ ಕೊರಗಿದಳು. ಕಡೆಗೊಂದು ದಿನ ಅದೇನು ತೋಚಿತೋ ಮಗಳಿಗೆ… “ಅಪ್ಪಾ, ಅಮ್ಮ, ನೀವು ಚಿಂತಿಸೋದು ಬೇಡ. ನೀವು àಗೆ ಮಂಕಾಗಿ ಕೂತರೆ ನನಗೆ ಬೇಜಾರಾಗುತ್ತೆ. ನಾ ಹೇಳ್ಳೋ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಿ. ಇದುವರೆಗೂ ನಾ ಕೇಳಿದ್ದನ್ನು ನೀವು ಇಲ್ಲಾ ಅಂದಿಲ್ಲ. ಈಗಲೂ ಅಷ್ಟೇ ಇಲ್ಲಾ ಅನ್ನೋ ಹಾಗೇ ಇಲ್ಲ’ ಎಂದು ಕರಾರು ವಿಧಿಸಿದಳು. ತಂದೆತಾಯಿಗೆ ಇನ್ನೂ ಆತಂಕವಾಯಿತು ಏನು ಕೇಳುತ್ತಾಳ್ಳೋ ಪ್ರಿಯಂವದೆ ಅಂತ. “ಅಮ್ಮ ನಾಳೆ ಬೆಳಿಗ್ಗೆ ಬಾಗಿಲು ತೆರೆಯೋ ಹೊತ್ತಿಗೆ ಯಾವ ವ್ಯಕ್ತಿ ಮೊದಲು ಕಣ್ಣಿಗೆ ಬೀಳುತ್ತಾನೋ ಅವನೇ ನನ್ನ ಗಂಡ’ ಎಂದುಬಿಟ್ಟಳು. ಹೆತ್ತವರಿಗೆ ಆಘಾತವಾಯಿತು. “ಏನಮ್ಮಾ ಮಗಳೇ ಇದು ಪರೀಕ್ಷೆ?’ ಎಂದಾಗ. ಪ್ರಿಯಂವದೆ “ಮರುಮಾತನಾಡಬೇಡಿ’ ಎನ್ನುತ್ತಾ ಥಟ್ಟನೆ ಎದ್ದು ತನ್ನ ಕೊಠಡಿಗೆ ಓಡಿಬಿಟ್ಟಳು. ಊರಿನಲ್ಲಿ ಈ ಸುದ್ದಿ ಹರಡಿತು. ಎಲ್ಲರಲ್ಲೂ ಆತಂಕ ಭಯ. ರಾತ್ರಿ ಊಟವಿಲ್ಲ ಕಣ್ಣಿಗೆ ನಿದ್ದೆ ಇಲ್ಲ. ಏನಾಗುತ್ತೋ ಎಂಬ ಕುತೂಹಲ ಎಲ್ಲರಲ್ಲೂ!
ಬೆಳಕು ಹರಿಯಿತು. ಎಂತಹ ಗಂಡ ಸಿಗುವನೋ ಎಂದು ಆತಂಕದಿಂದಲೇ ಪ್ರಿಯಂವದೆ ಮುಂಬಾಗಿಲನ್ನು ತೆರೆದಳು. ಅವಳ ಎದೆ ಹೊಡೆದೇ ಹೋಯಿತು. ಕುರೂಪಿಯೊಬ್ಬ ಹಲ್ಲು ಗಿಂಜುತ್ತಾ ನಿಂತಿದ್ದ ಅಲ್ಲಿ. ತಾಯಿ ರತ್ನಾವತಿ ಕುಸಿದು ಬಿದ್ದರು. ತಂದೆ ಕಂಗಾಲಾದನು. ಮಗಳು ಮಾತ್ರ ಸಾವರಿಸಿಕೊಂಡು ಹಸನ್ಮುಖೀಯಾಗಿ “ಇವರೇ ನನ್ನ ಗಂಡ’ ಎಂದು ಒಪ್ಪಿಕೊಂಡುಬಿಟ್ಟಳು! ಊರವರ ಬೇಸರದ ನುಡಿಯ ನಡುವೆ ಮದುವೆ ಸಿದ್ಧತೆಗಳು ಪ್ರಾರಂಭವಾದವು. ಸೂರ್ಯ ನೆತ್ತಿಗೇರುತ್ತಿದ್ದಂತೆ ರಾಜಭಟರು ಇವರ ಮನೆಮುಂದೆ ನೆರೆದರು. ಅವರು ಆ ಕುರೂಪಿಯನ್ನು ತೋರಿಸಿ “ಇವರು ಬೇರೆ ಯಾರೂ ಅಲ್ಲ ಈ ರಾಜ್ಯದ ರಾಜಕುಮಾರ’ ಎಂದರು. ಮಾರ್ತಾಂಡ, ರತ್ನಾವತಿ ಮತ್ತು ಪ್ರಿಯಂವದೆ ತಮ್ಮ ಕಣ್ಣನ್ನು ನಂಬಲೇ ಆಗಲಿಲ್ಲ. ಮಾರುವೇಷದಲ್ಲಿದ್ದ ರಾಜಕುಮಾರ ತನ್ನ ಕುರೂಪಿ ವೇಷವನ್ನು ತೆಗೆದ. ರಾಜಕುಮಾರನ ಸು#ರದ್ರೂಪನ್ನು ನೋಡಿ ಪ್ರಿಯಂವದೆ ನಾಚಿದಳು. ಪ್ರಿಯಂವದೆಯ ಮೊಗದಲ್ಲಿ ಸಂತಸ ತುಂಬಿ ತುಳುಕುತ್ತಿತ್ತು.