Advertisement

ಚಿಣ್ಣರ ಬಿಂಬ:ಡೊಂಬಿವಲಿ-ಕಲ್ಯಾಣ್‌ ಶಿಬಿರಗಳ ಪ್ರತಿಭಾ ಸ್ಪರ್ಧೆ

05:04 PM Dec 06, 2018 | |

ಮುಂಬಯಿ: ಮಕ್ಕಳಿಗೆ ನಮ್ಮ ನಾಡಿನ ರೀತಿ-ನೀತಿಗಳನ್ನು, ಕಟ್ಟುಕಟ್ಟಳೆಗಳನ್ನು, ಧಾರ್ಮಿಕ ವಿಧಿ-ವಿಧಾನಗಳನ್ನು ಮುಖ್ಯವಾಗಿ ನಮ್ಮ ಪುರಾತನ ಹಾಗೂ ಸನಾತನ ಸಂಸ್ಕೃತಿಯನ್ನು ತಿಳಿಸಿ, ಅವರು ಇವೆಲ್ಲವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸುಸಂಸ್ಕೃತ ಬಾಳಿಗೆ ಭದ್ರ ಬುನಾದಿಯನ್ನು ಹಾಕಿಕೊಳ್ಳುವಂತೆ ಪ್ರೇರೇಪಿಸಬೇಕು. ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಕಲಾಜಗತ್ತು ಚಿಣ್ಣರ ಬಿಂಬ ಸಂಸ್ಥೆಯು 25ಕ್ಕೂ ಅಧಿಕ ಶಿಬಿರಗಳ ಮುಖಾಂತರ ಐದು ಸಾವಿರಕ್ಕೂ ಅಧಿಕ ಮಕ್ಕಳನ್ನು ಹೊಂದಿ ಹೆಮ್ಮರವಾಗಿ ಬೆಳೆದು ನಿಂತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಡೊಂಬಿವಲಿ ಶ್ರೀ ಜಗದಂಬಾ ಮಂದಿರ ಯಕ್ಷಕಲಾ ಸಂಸ್ಥೆಯ ಅಧ್ಯಕ್ಷ ಹರೀಶ್‌ ಶೆಟ್ಟಿ ನುಡಿದರು.

Advertisement

ಇತ್ತೀಚೆಗೆ  ಡೊಂಬಿವಲಿ ಪಶ್ಚಿಮದ ಹೊಟೇಲ್‌ ಸಾಯಿ ಸಾಮ್ರಾಟ್‌ ಸಭಾಗೃಹದಲ್ಲಿ ನಡೆದ ಚಿಣ್ಣರ ಬಿಂಬ ಡೊಂಬಿವಲಿ-ಕಲ್ಯಾಣ್‌ ಶಿಬಿರಗಳ ಪ್ರತಿಭಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಿಣ್ಣರ ಬಿಂಬದ ಮುಖಾಂತರ ಮಕ್ಕಳು ಪ್ರತಿಭಾವಂತರಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.

ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಚಿಣ್ಣರ ಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ ಅವರು, ನಮ್ಮ ಮಕ್ಕಳಲ್ಲಿ ತುಂಬಾ ಪ್ರತಿಭೆಯಿದೆ. ಇವರೆಲ್ಲರೂ ನಮ್ಮ ಮುಂಬರುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿ ಸುವಂತಾಗಬೇಕು ಎಂದು ನುಡಿದರು. ವೇದಿಕೆಯಲ್ಲಿ ಧರ್ಮದರ್ಶಿ ಅಶೋಕ್‌ ಶೆಟ್ಟಿ, ಸುಧಾಕರ ಶೆಟ್ಟಿ, ಅನಂತ ಮೇಘರಾಜ್‌ ಮತ್ತು ಚಿಣ್ಣರ ಬಿಂಬದ ವಲಯದ ಮುಖ್ಯಸ್ಥೆ ಮಂಜುಳಾ ಎಸ್‌. ಶೆಟ್ಟಿ ಅವರು ಮಾತನಾಡಿ ಶುಭ ಹಾರೈಸಿದರು.

ಪ್ರತಿಭಾ ಸ್ಪರ್ಧೆಯ ತೀರ್ಪುಗಾರ ರಾಗಿ ಶಾಂತಾ ಶಾಸ್ತಿÅà ಮತ್ತು ಅಮರೇಶ್‌ ಪಾಟೀಲ್‌ ಅವರು ಸಹಕರಿಸಿದರು. ಕಲ್ವಾ ಶಿಬಿರದ ಜಯಪ್ರಕಾಶ್‌ ಶೆಟ್ಟಿ, ಜಗಜ್ಯೋತಿ ಕಲಾವೃಂದದ ಸಂಘಟನ ಕಾರ್ಯದರ್ಶಿ ಸಂತೋಷ್‌ ಡಿ. ಶೆಟ್ಟಿ, ಶಿಬಿರದ ಶಿಕ್ಷಕಿ ಸಪ್ನಾ ಪೂಜಾರಿ ಅವರು ಸಹಕರಿಸಿದರು. ಶಿಬಿರದ ಮುಖ್ಯಸ್ಥೆ ಅನಿತಾ ಎಸ್‌. ಶೆಟ್ಟಿ ಸ್ವಾಗತಿಸಿದರು. ದೀಪಾ ಉಮೇಶ್‌ ರಾವ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಋತ್ವಿಜ್‌ ಮೊಗವೀರ, ಸಾಧ್ವಿಶ್ರೀ ಕೆ. ಭಟ್‌, ಅಕ್ಷತಾ ಎಸ್‌. ಶೆಟ್ಟಿ ಅವರು ಅತಿಥಿಗಳನ್ನು ಮತ್ತು ತೀರ್ಪುಗಾರರನ್ನು ಪರಿಚಯಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿವಿಧ ಶಿಬಿರಗಳ ಮಾಜಿ ಹಾಗೂ ಹಾಲಿ ಮುಖ್ಯಸ್ಥೆಯರು, ಶಿಕ್ಷಕಿಯರು, ಇನ್ನಿತರ ಗಣ್ಯರು, ಚಿಣ್ಣರಿಗೆ ನೃತ್ಯ ನಿರ್ದೇಶನಗೈದ ಕು| ಸುಕನ್ಯಾ ಎಸ್‌. ಶೆಟ್ಟಿ ಅವರನ್ನು ಗೌರವಿಸಲಾಯಿತು. ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಚಿಣ್ಣರ ಬಿಂಬದ ಹಳೆವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.

Advertisement

ಪಾಲಕರಾದ ಸುಜಲಾ ಕೆ. ಭಟ್‌, ಪ್ರಮೀಳಾ ಜೆ. ಶೆಟ್ಟಿ, ಮೀನಾಕ್ಷೀ ಶೆಟ್ಟಿ, ಕವಿತಾ ಶೆಟ್ಟಿ, ವಿಮಲಾ ಶೆಟ್ಟಿ, ಸುಜಾತಾ ಆರ್‌. ಶೆಟ್ಟಿ, ರವಿ ಎ. ಶೆಟ್ಟಿ ಅವರು ಸಹಕರಿಸಿದರು. ಸ್ಪರ್ಧೆಯ ವಿಜೇತರ ಯಾದಿಯನ್ನು ಶಿಬಿರದ ಶಿಕ್ಷಕಿ ಪ್ರಶಾಂತಿ ಪೂಜಾರಿ ವಾಚಿಸಿದರು. ಗಣ್ಯರು ವಿಜೇತ ಮಕ್ಕಳನ್ನು ಗೌರವಿಸಿದರು. ಮೈನಾ ಪಿ. ಶೆಟ್ಟಿ ವಂದಿಸಿದರು. ಶಿಮುಂಜೆ ಪರಾರಿ ಪದ್ಮನಾಭ ಎಸ್‌. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಕಿರಿಯರ ವಿಭಾಗದ ಸ್ಪರ್ಧಾ ಫಲಿತಾಂಶ 
ಕಿರಿಯರ ವಿಭಾಗದ ಶ್ಲೋಕ ಪಠಣದಲ್ಲಿ ಸಾಂಚಿ ಯು. ರಾವ್‌ ಪ್ರಥಮ, ನಿಶಿಕಾ ಪಿ. ಶೆಟ್ಟಿ ದ್ವಿತೀಯ, ಪ್ರಾಪ್ತಿ ಎಂ. ಶೆಟ್ಟಿ ತೃತೀಯ, ಭಾವಗೀತೆ ಸ್ಪರ್ಧೆಯಲ್ಲಿ ಸಾಂಚಿ ಯು. ರಾವ್‌ ಪ್ರಥಮ, ಹರ್ಷಲ್‌ ಪೂಜಾರಿ ದ್ವಿತೀಯ, ಅಪೇಕ್ಷಾ ಶೆಟ್ಟಿ ತೃತೀಯ ಬಹುಮಾನ ಗಳಿಸಿದರು. ಜನಪದ ಗೀತೆ ಸ್ಪರ್ಧೆಯಲ್ಲಿ ಅಕಿಲ್‌ ಮೊಗವೀರ ಪ್ರಥಮ, ನಿಶಿಕಾ ಪಿ. ಶೆಟ್ಟಿ ದ್ವಿತೀಯ, ಮಾನ್ಯಾ ಎಸ್‌. ಶೆಟ್ಟಿ ತೃತೀಯ, ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಸಾಂಚಿ ಯು. ರಾವ್‌ ಪ್ರಥಮ, ಪ್ರಾಪ್ತಿ ಎಂ. ಶೆಟ್ಟಿ ದ್ವಿತೀಯ, ಹೃದಯ್‌ ಪೂಜಾರಿ ತೃತೀಯ, ಭಾಷಣ ಸ್ಪರ್ಧೆಯಲ್ಲಿ  ನಿಶಿಕಾ ಪಿ. ಶೆಟ್ಟಿ ಪ್ರಥಮ, ಹಾರ್ದಿಕ್‌ ಚಂದನ್‌ ದ್ವಿತೀಯ, ಶಾನ್‌ ಶೆಟ್ಟಿ ತೃತೀಯ ಬಹುಮಾನ ಪಡೆದರು.

ಹಿರಿಯರ ವಿಭಾಗದ ಸ್ಪರ್ಧಾ ಫಲಿತಾಂಶ 
ಹಿರಿಯರ ವಿಭಾಗದ ಶ್ಲೋಕ ಪಠಣ ಸ್ಪರ್ಧೆಯಲ್ಲಿ ಹಂಸಿನಿ ಯು. ರಾವ್‌ ಪ್ರಥಮ, ಋತ್ವಿಜ್‌ ಮೊಗವೀರ ದ್ವಿತೀಯ, ಸಾಧ್ವಿಶ್ರೀ ಕೆ. ಭಟ್‌ ತೃತೀಯ, ಭಾವಗೀತೆ ಸ್ಪರ್ಧೆಯಲ್ಲಿ ಹಂಸಿನಿ ಯು. ರಾವ್‌ ಪ್ರಥಮ, ಋತ್ವಿಜ್‌ ಮೊಗವೀರ ದ್ವಿತೀಯ, ಭುವನೇಶ್‌ ಶೆಟ್ಟಿ ತೃತೀಯ, ಜನಪದ ಗೀತೆ ಸ್ಪರ್ಧೆಯಲ್ಲಿ 
ಶ್ರೇಯಾ ಆರ್‌. ಶೆಟ್ಟಿ ಪ್ರಥಮ, ಮನೀಶ್‌ ಪೂಜಾರಿ ದ್ವಿತೀಯ, ಸಾಧ್ವಿಶ್ರೀ ಕೆ. ಭಟ್‌ ತೃತೀಯ, ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಮನೀಶ್‌ ಪೂಜಾರಿ ಪ್ರಥಮ, ಭುವನೇಶ್‌ ಶೆಟ್ಟಿ ದ್ವಿತೀಯ, ಸಾಧ್ವಿಶ್ರೀ ಕೆ. ಭಟ್‌ ತೃತೀಯ, ಭಾಷಣ ಸ್ಪರ್ಧೆಯಲ್ಲಿ ಹಂಸಿನಿ ರಾವ್‌ ಪ್ರಥಮ, ಸಾಧ್ವಿಶ್ರೀ ಭಟ್‌ ದ್ವಿತೀಯ ಹಾಗೂ ಋತ್ವಿಜ್‌ ಮೊಗವೀರ ತೃತೀಯ ಬಹುಮಾನ ಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next