Advertisement
ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್‌ನಲ್ಲಿ ಬುಧವಾರ ಯಕ್ಷರಂಗಾಯಣ ಕೇಂದ್ರದ ಕಾರ್ಯಾಲಯ ಉದ್ಘಾಟಿಸಿ, ಮಕ್ಕಳ ಚಿಣ್ಣರ ಮೇಳದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
Related Articles
Advertisement
ಜೂನ್ ಮೊದಲ ವಾರ 3 ಜಿಲ್ಲೆಗಳ ರಂಗಭೂಮಿ ಕಲಾವಿದರ ಸಭೆರಾಜ್ಯದ ಆರನೇ ರಂಗಾಯಣ ಕೇಂದ್ರ ಉಡುಪಿ ಜಿಲ್ಲೆಯಲ್ಲಿ ಅಧಿಕೃತವಾಗಿ ಕಾರ್ಯಾರಂಭಿಸಿದೆ. ಮುಂದೆ ಯಕ್ಷರಂಗಾಯಣ ಕೇಂದ್ರವನ್ನು ಯಾವ ರೀತಿ ನಡೆಸಬೇಕು ಎನ್ನುವ ಕುರಿತು ದ.ಕ. ಉಡುಪಿ, ಉ.ಕ. ಜಿಲ್ಲೆಗಳ ಯಕ್ಷಗಾನ, ರಂಗಭೂಮಿಯ ಹಿರಿಯ ಕಿರಿಯ ಕಲಾವಿದರ ಸಮಾಲೋಚನೆ ಸಭೆಯನ್ನು ಜೂನ್ ಮೊದಲ ವಾರದಲ್ಲಿ ನಡೆಸಲಾಗುವುದು ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಮೂರು ಜಿಲ್ಲೆಗಳ ಕಲಾ ಚಟುವಟಿಕೆ
ಯಕ್ಷರಂಗಾಯಣ ಕಾರ್ಯಾಲಯ ಉದ್ಘಾಟನೆಯ ಬಳಿಕ ಮಾತನಾ ಡಿದ ಅವರು, ಕಾರ್ಕಳದ ಯಕ್ಷರಂಗಾಯಣ ಕೇಂದ್ರವು 3 ಜಿಲ್ಲೆಗಳ ಕಲಾ ಚಟುವಟಿಕೆಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಯಕ್ಷಗಾನ, ನಾಟಕ ಸಹಿತ ಕಲೆ ಚಟುವಟಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯವೆಸಗಲಿದೆ. ವಿಶೇಷವಾಗಿ ಮಕ್ಕಳು, ಯುವ ಸಮೂಹವನ್ನು ಸಾಂಸ್ಕೃತಿಕವಾಗಿ ಬೆಳೆಸಿ, ಪ್ರೋತ್ಸಾಹಿಸುವ ಕಾರ್ಯ ಇಲ್ಲಿ ನಡೆಯಲಿದೆ ಎಂದರು. ಸಚಿವರ ಪ್ರಶ್ನೆ, ಚಿಣ್ಣರ ಉತ್ತರ
ಚಿಣ್ಣರ ಮೇಳಕ್ಕೆ ಭೇಟಿ ನೀಡಿದ ಸಚಿವರು ಮಕ್ಕಳೊಂದಿಗೆ ಬೆರೆತರು. ನನ್ನ ಪರಿಚಯ ಇದೆಯಾ ಎಂದು ಪ್ರಶ್ನಿಸಿದಾಗ ಮಕ್ಕಳೆಲ್ಲರೂ “ಗೊತ್ತು ಸಾರ್ ನೀವು ಸುನಿಲ್ ಕುಮಾರ್ ಸಾರ್’ ಎಂದು ಸಾಮೂಹಿಕವಾಗಿ ಹೇಳಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು.