Advertisement
200 ಶಿಬಿರಾರ್ಥಿಗಳು
ಸುಳ್ಯದ ರೋಟರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಶ್ರೀಹರಿ ಪೈಂದೋಡಿ (ಚಿತ್ರಕಲೆ, ಪೇಪರ್‌ಕಟ್ಟಿಂಗ್), ಗ್ರೇಸಿ ಪಿಂಟೋ (ಅಭಿನಯ ಗೀತೆ, ಮೋಜಿನ ಗಣಿತ), ಚಿತ್ರಕಲಾ ಶಿಕ್ಷಕ ಸತೀಶ್ ಪಂಜ (ಮೇಕಪ್ ಕಲೆ, ಚಿತ್ರಕಲೆ) ಯೋಗ ಶಿಕ್ಷಕಿ ಕುಸುಮಾವತಿ (ಯೋಗ ತರಬೇತಿ), ಪ್ರಸನ್ನ ಐವರ್ನಾಡು (ಚಿತ್ರಕಲೆ), ಜಯಪ್ರಕಾಶ ಮೋಂಟಡ್ಕ (ನಾಟಕ, ರಂಗಕಲೆ) ಶೈಲಿ ಪ್ರಭಾಕರ್ (ಪೇಪರ್ ಕ್ರಾಫ್ಟ್), ಪಿ.ಎನ್.ಭಟ್ (ಸುಲಭ ಗಣಿತ, ವಿಜ್ಞಾನ ಪ್ರಯೋ), ಪಟ್ಟಾಭಿರಾಮ ಸುಳ್ಯ (ಮಿಮಿಕ್ರಿ, ಶ್ಯಾಡೋ ಪ್ಲೇ), ಪುರುಷೋತ್ತಮ ಎಂ.ಎಸ್.(ವಿಜ್ಞಾನ ಮಾದರಿ ತಯಾರಿ), ಜಾನ್‌ವೇಗಸ್ (ಕೃಷಿ, ಕಸಿ ಕಟ್ಟುವುದು) ಮುಂತಾದ ಪ್ರತಿಭಾನ್ವಿತರು ಸಂಪನ್ಮೂಲವ್ಯಕ್ತಿಗಳಾಗಿ ಆಗಮಿಸಿ ಶಿಬಿರವನ್ನು ನಡೆಸಿಕೊಟ್ಟರು. ಪರಿಸರದ ವಿವಿಧ ಶಾಲೆಗಳ ಸುಮಾರು 200 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದರು.
ಶಿಕ್ಷಣ ಎನ್ನುವುದು ಕೇವಲ ತರಗತಿ ಕೊಠಡಿಗಳಿಗಷ್ಟೇ ಸೀಮಿತಗೊಳ್ಳಬಾರದು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯಪೂರಕ ಚಟುವಟಿಕೆಗಳ ಅತ್ಯಂತ ಅಗತ್ಯ ಎನ್ನುವ ದೃಷ್ಟಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಪರಿಸರದ ಸುಮಾರು 8 ಶಾಲೆಗಳ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ. ಮಕ್ಕಳ ಪ್ರತಿಭೆಗಳಿಗೆ ನೀರೆರೆದು ಪೋಷಿಸುವ ಈ ರೀತಿಯ ಶಿಬಿರವನ್ನು ಪ್ರತಿ ವರ್ಷ ಹಮ್ಮಿಕೊಳ್ಳುವ ಉದ್ದೇಶ ಇದೆ.
– ವಂ| ವಂ|ರೋನಾಲ್ಡ್ ಲೋಬೋ, ಸಂಚಾಲಕರು, ಸೈಂಟ್ ಜೋಕಿಮ್ಸ್ ಸಮೂಹ ಶಿಕ್ಷಣ ಸಂಸ್ಥೆಗಳು, ಕಡಬ