Advertisement
ಅ. 22ರಂದು ಎಸ್‌ಎಂ ಶೆಟ್ಟಿ ಶಿಕ್ಷಣ ಸಂಕುಲದ ಸಭಾಂಗಣದಲ್ಲಿ ನಡೆದ ಚಿಣ್ಣರ ಬಿಂಬ ಮುಂಬಯಿ ಇದರ ಪೊವಾಯಿ ವಲಯದ ಚಿಣ್ಣರ ಸಾಂಸ್ಕೃತಿಕ ಉತ್ಸವದ ಸಮಾರೋಪ ಮತ್ತು ಬಹುಮಾನ ವಿತರಣ ಸಮಾರಂಭದ ಅಧ್ಯಕ್ಷತೆ ವಹಿಸಿ, ಹಿಂಗಾರ ಅರಳಿಸಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಿಣ್ಣರ ಬಿಂಬದ ಮಕ್ಕಳನ್ನು ಕಂಡಾಗ ಸಂತೋಷವಾಗುತ್ತಿದೆ. ಪ್ರಕಾಶ್ ಭಂಡಾರಿ ಅವರು ಚಿಣ್ಣರ ಬಿಂಬದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರಿಗೆ ಎಲ್ಲರೂ ಸಹಕರಿಸ ಬೇಕಾದ ಅನಿವಾರ್ಯ ಇದೆ ಎಂದು ನುಡಿದರು.
Related Articles
Advertisement
ವೇದಿಕೆಯಲ್ಲಿ ಪ್ರಕಾಶ್ ಭಂಡಾರಿ, ರೇಣುಕಾ ಭಂಡಾರಿ, ರಮೇಶ್ ರೈ, ಸವಿತಾ ಕೆ. ಶೆಟ್ಟಿ, ಪ್ರಶಾಂತಿ ಡಿ. ಶೆಟ್ಟಿ, ಪ್ರೇಮಾ ಶೆಟ್ಟಿ, ಅನಿತಾ ಎಸ್. ಶೆಟ್ಟಿ, ಆಶಾ ಶೆಟ್ಟಿ, ವಿಜಯ ಕೋಟ್ಯಾನ್, ಜಯಪ್ರಕಾಶ್ ಶೆಟ್ಟಿ, ಅಮಿತ್ ಶೆಟ್ಟಿ ಉಪಸ್ಥಿತರಿದ್ದರು.
ಈ ಪ್ರತಿಭಾ ಸ್ಪರ್ಧೆಯಲ್ಲಿ ಚಿಣ್ಣರಿಗಾಗಿ ಛದ್ಮವೇಷ ಸ್ಪರ್ಧೆ, ಏಕಪಾತ್ರಾಭಿನಯ, ಚರ್ಚಾಸ್ಪರ್ಧೆ, ಭಾವಗೀತೆ, ಜಾನಪದಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಡಾ| ಕರುಣಾಕರ ಶೆಟ್ಟಿ, ಪಣಿಯೂರು, ಗೀತಾ ಎಲ್. ಭಟ್, ನಾಗರಾಜ ಗುರುಪುರ ಹಾಗೂ ಬಾಬಾ ಪ್ರಸಾದ್ ಅರಸ ಅವರು ತೀರ್ಪುಗಾರರಾಗಿ ಸಹಕರಿಸಿದರು.
ಉಮಾಮಹೇಶ್ವರಿ ಹಾಗೂ ಎಸ್. ಎಂ. ಶೆಟ್ಟಿ ಶಿಬಿರದ ಕಳೆದ ಶೆ„ಕ್ಷಣಿಕ ವರ್ಷದ ಎಸ್‌ಎಸ್‌ಸಿ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಚಿಣ್ಣರ ಬಿಂಬದ ಹಳೆ ವಿದ್ಯಾರ್ಥಿಗಳಾದ ಕುಮಾರಿ ಅಂಕಿತಾ ರಮೆಶ್ ರೈ ಹಾಗೂ ಅಶ್ವಿನಿ ಸಂಜೀವ ಪೂಜಾರಿ ಅವರ ನಿರ್ದೇಶನದಲ್ಲಿ ಎಸ್. ಎಂ. ಶೆಟ್ಟಿ ಶಿಬಿರ ಹಾಗೂ ಉಮಾಮಹೇಶ್ವರಿ ಶಿಬಿರದ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಏರ್ಪಟ್ಟಿತು. ಚಿಣ್ಣರಾದ ಶ್ರೀಕೃಷ್ಣ ಉಡುಪ ಹಾಗೂ ಅಂಕಿತಾ ಪೂಜಾರಿ ಅವರು ಅಭಿನಯಿಸಿದ ರಾವಣನ ಜನ್ಮ ರಹಸ್ಯ ಎಂಬ ಪ್ರಹಸನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ವಿಶೇಷ ಆಕರ್ಷಣೆಯಾಗಿ ಪಾಲಕರಿಗಾಗಿ ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಚರ್ಚೆಯ ಸಮನ್ವಯಕರಾಗಿ ಸತೀಶ್ ಸಾಲ್ಯಾನ್ ಅವರು ಸಹಕರಿಸಿದರು.
ಕುಮಾರಿ ಜೀವಿಕಾ ಶೆಟ್ಟಿ, ಶೈನಿ ಶೆಟ್ಟಿ, ಭೂಮಿಕಾ ಸಾಲ್ಯಾನ್ ಅತಿಥಿಗಳನ್ನು ಪರಿಚಯಿಸಿದರು. ಆಯುಷ್ ಶೆಟ್ಟಿ, ಮಾನಸ ದೇವಾಡಿಗ, ನಿರೀûಾ ರಾವ್ ಹಾಗೂ ಜೀವಿಕಾ ಶೆಟ್ಟಿ ಪ್ರಾರ್ಥನೆಗೈದರು. ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸತೀಶ್ ಸಾಲ್ಯಾನ್ ಸ್ಪರ್ಧಾ ವಿಜೇತರ ಯಾದಿಯನ್ನು ಓದಿ ವಂದಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಪ್ರಕಾಶ್ ಭಂಡಾರಿ ಅವರ ನೇತೃತ್ವದಲ್ಲಿ ಸಂಜೀವ ಪೂಜಾರಿ ತೋನ್ಸೆ, ಅನಿತಾ ಯು. ಶೆಟ್ಟಿ, ಸರಸ್ವತಿ ದೇವಾಡಿಗ, ಪದ್ಮಿನಿ ಶೆಟ್ಟಿ, ಸರೋಜಾ ಶೆಟ್ಟಿ, ಅನಿತಾ ಎಸ್. ಶೆಟ್ಟಿ, ಸವಿತಾ ಶೆಟ್ಟಿ, ಅರುಣಾ ಶೆಟ್ಟಿ, ಪ್ರಶಾಂತಿ ಶೆಟ್ಟಿ, ಶಾಂತಿಲಕ್ಷ್ಮಿ ಉಡುಪ, ಶೋಭಾ ಶೆಟ್ಟಿ, ಕವಿತಾ ಶೆಟ್ಟಿ, ಶ್ವೇತಾ ಶೆಟ್ಟಿ, ಪೇತ್ರಿ ವಿಶ್ವನಾಥ ಶೆಟ್ಟಿ, ಭಾಸ್ಕರ ಸುವರ್ಣ ಸಸಿಹಿತ್ಲು, ರವಿ ಹೆಗ್ಡೆ, ವಿಜಯ ಸಂಜೀವ ಪೂಜಾರಿ, ಶೋಭಾ ರಮೇಶ್ ರೈ, ಪ್ರವೀಣಿ ಸಾಲ್ಯಾನ್, ಪುಷ್ಪಾ ಶೆಟ್ಟಿ, ಪ್ರೇಮಾ ಶೆಟ್ಟಿ, ರೇಖಾ ಶೆಟ್ಟಿ, ಚಿತ್ರಾ ಪೇತ್ರಿ ವಿಶ್ವನಾಥ ಶೆಟ್ಟಿ, ಶಕುಂತಳಾ ಶೆಟ್ಟಿ, ಕುಮಾರಿ ಸುವರ್ಣ, ಶೈಲಜಾ ಪೂಜಾರಿ, ಶೈಲಾ ಶೆಟ್ಟಿ, ಅಮಿತ್ ಶೆಟ್ಟಿ, ನಾರಾಯಣ ದೇವಾಡಿಗ, ಮಂಜುನಾಥ್ ದೇವಾಡಿಗ, ಉಮೇಶ್ ದೇವಾಡಿಗ, ರಾಜೇಶ್ ಶೆಟ್ಟಿ, ನಾಗರಾಜ್ ಪೂಜಾರಿ ಮೊದಲಾದವರು ಸಹಕರಿಸಿದರು.
ಚಿಣ್ಣರ ಬಿಂಬದ ಮಕ್ಕಳ ಪ್ರತಿಭೆಯನ್ನು ಕಂಡು ಆನಂದವಾಗಿದೆ. ನಾವು ಚಿಕ್ಕವರಿದ್ದಾಗ ನಮಗೆ ಇಂತಹ ಯಾವುದೇ ಶಿಕ್ಷಣ ದೊರೆತಿರಲಿಲ್ಲ. ನಮ್ಮಲ್ಲಿ ಪ್ರತಿಭೆ ಇತ್ತೋ ಇಲ್ಲವೋ ಅದನ್ನು ತೋರ್ಪ ಡಿಸಲು ನಮಗೆ ವೇದಿಕೆ ದೊರೆತಿರಲಿಲ್ಲ. ಶಾಲಾ ಕಾಲೇಜಿನಲ್ಲಿ ದೊರೆಯದ ಅವಕಾಶಗಳು ಚಿಣ್ಣರಿಗೆ ಇಲ್ಲಿ ದೊರೆಯುತ್ತಿವೆೆ. ಒಳ್ಳೆಯ ವೇದಿಕೆಗಳನ್ನು ಪ್ರಕಾಶ್ ಭಂಡಾರಿ ಅವರು ಕಲ್ಪಿಸಿಕೊಡುತ್ತಿದ್ದಾರೆ. ಚಿಣ್ಣರ ಬಿಂಬ ಸಂಸ್ಥೆ ಎಲ್ಲಾ ಸಂಸ್ಥೆಗಳಿಗಿಂತ ಒಂದು ಭಿನ್ನವಾದ ಸಂಸ್ಥೆ. ಅದರ ಸದುಪಯೋಗವನ್ನು ಎಲ್ಲ ತುಳು-ಕನ್ನಡಿಗರು ಪಡೆದುಕೊಳ್ಳಬೇಕು. ಮಕ್ಕಳು ಇಂತಹ ಶಿಬಿರಗಳ ಪ್ರಯೋಜನವನ್ನು ಪಡೆದುಕೊಂಡು ಸುಸಂಸ್ಕೃತರಾಗಿ ಬೆಳೆಯಬೇಕು – ಸತೀಶ್ ಶೆಟ್ಟಿ (ಆಡಳಿತ ನಿರ್ದೇಶಕರು, ಹೊಟೇಲ್ ಪೆನಿನ್‌ಸುಲಾ ಗ್ರ್ಯಾಂಡ್ ).