Advertisement
ಈ ಸಂಸ್ಥೆಯು ದೇಶಕ್ಕೆ ಭವ್ಯ ಪ್ರಜೆಗಳನ್ನು ನಿರ್ಮಿಸಿ ಕೊಡುತ್ತಿದೆ. ಹಾಗಾಗಿ ಮುಂಬಯಿ ಮಾತ್ರವಲ್ಲ ಮಹಾರಾಷ್ಟ್ರದಾದ್ಯಂತ ಎಲ್ಲೆಲ್ಲಿ ತುಳು-ಕನ್ನಡಿಗರು ನೆಲೆಸಿದ್ದಾರೋ ಅಲ್ಲಲ್ಲಿ ಚಿಣ್ಣರ ಬಿಂಬದ ಶಾಖೆಗಳು ಸ್ಥಾಪನೆಯಾಗಬೇಕು. ಆಗ ಮಾತ್ರ ಚಿಣ್ಣರ ಬಿಂಬದ ಶ್ರಮ ಸಾರ್ಥಕವಾಗುತ್ತದೆ ನ. 25 ರಂದು ಸಂಜೆ ಐರೋಲಿಯ ಜ್ಞಾನ ವಿಕಾಸ ಮಂಡಳ ಪದವಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಚಿಣ್ಣರ ಬಿಂಬ ನಾರ್ಥ್-ಈಸ್ಟ್ ವಲಯದ ಮಕ್ಕಳ ಪ್ರತಿಭಾ ಸ್ಪರ್ಧೆಯ ಸಮಾರೋಪ ಮತ್ತು ಬಹುಮಾನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿಣ್ಣರ ಬಿಂಬದ ರೂವಾರಿಗಳ ಜೊತೆ ಕಾರ್ಯಕರ್ತರು, ಪಾಲಕರು, ಪೋಷಕರು, ಹಳೆವಿದ್ಯಾರ್ಥಿಗಳು ಒಟ್ಟಾಗಿ ಒಮ್ಮತದಿಂದ ಕೈಜೋಡಿಸಿ, ಸಹಕಾರ, ಪ್ರೋತ್ಸಾಹ ನೀಡಿದಾಗ ಸಂಸ್ಥೆಯ ಮುಖಾಂತರ ಮತ್ತಷ್ಟು ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಿದೆ ಎಂದು ನುಡಿದು ಶುಭಹಾರೈಸಿದರು.
Related Articles
Advertisement
ತೀರ್ಪುಗಾರರಾಗಿ ಆಗಮಿಸಿದ ರಮಾ ಉಡುಪ ಅವರು ಮಾತನಾಡಿ, ಇಂದು ರಜಾದಿವಾದರೂ ಬೆಳಗ್ಗೆ 8 ಗಂಟೆಯಿಂದ ಸಂಜೆಯವರೆಗೆ ನಡೆದ ಎಲ್ಲಾ ಸ್ಪರ್ಧೆಗಳಲ್ಲಿ ಯಾವುದೇ ರೀತಿಯ ಆಯಾಸವಿಲ್ಲದೆ ಲವಲವಿಕೆಯಿಂದ ಮಕ್ಕಳು ಸ್ಪರ್ಧಿಸಿರುವುದನ್ನು ನೋಡಿ ಆಶ್ಚರ್ಯವಾಯಿತು. ಅದರಲ್ಲೂ ಭಜನೆ, ಶ್ಲೋಕಗಳನ್ನು ಸ್ಪಷ್ಟವಾಗಿ ಯಾವುದೇ ರೀತಿಯ ತಪ್ಪಿಲ್ಲದೆ ಹಾಡಿದ್ದನ್ನು ಕೇಳಿ ಆನಂದವಾಯಿತು ಎಂದರು.
ಇನ್ನೋರ್ವೆ ತೀರ್ಪುಗಾರ್ತಿ ತಾರಾ ಬಂಗೇರ ಅವರು ಮಾತನಾಡಿ, ಮಕ್ಕಳು ಕನ್ನಡವನ್ನು ಕಲಿತು ಇಂದು ಸ್ಪರ್ಧೆಯಲ್ಲಿ ಸ್ಪಷ್ಟವಾದ ಉಚ್ಚಾರದೊಂದಿಗೆ ಉತ್ತಮ ಅಭಿನಯದೊಂದಿಗೆ ಭಾಗವಹಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸಣ್ಣ ಸಣ್ಣ ಮಕ್ಕಳ ಉತ್ಸಾಹವನ್ನು ಕಂಡು ಸಂತೋಷವಾಯಿತು ಎಂದು ನುಡಿದರು.
ಇತರ ತೀರ್ಪುಗಾರರಾದ ಸುಜಾತಾ ಶೆಟ್ಟಿ, ಶೋಭಾ ಶೆಟ್ಟಿ, ಜಗದೀಶ್ ರೈ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಮಕ್ಕಳಿಗೆ ಶುಭಹಾರೈಸಿದರು. ವೇದಿಕೆಯಲ್ಲಿ ಹೊಟೇಲ್ ಉದ್ಯಮಿಗಳಾದ ಅರುಣ್ ಶೆಟ್ಟಿ, ಭಾಸ್ಕರ ಶೆಟ್ಟಿ ತಾಳಿಪಾಡಿಗುತ್ತು, ಗೀತಾ ಹೇರಾಳ, ಬಾಲಕೃಷ್ಣ ಆದ್ಯಪಾಡಿ, ಹರೀಶ್ ಪಡುಬಿದ್ರೆ, ರಾಜೇಶ್ವರಿ ಶೆಟ್ಟಿ, ಶಾಂತಾ ಅಮೀನ್, ದೀಪಾ ಶೆಟ್ಟಿ, ಶಶಿಕಲಾ ಶೆಟ್ಟಿ, ಅನಿತಾ ಶೆಟ್ಟಿ, ಉಷಾ ಶೆಟ್ಟಿ, ವೀಣಾ ಭಟ್, ಸುಮತಿ ಶೆಟ್ಟಿ ಉಪಸ್ಥಿತರಿದ್ದರು. ತೀರ್ಪುಗಾರರನ್ನು ದೀಪಾ ಶೆಟ್ಟಿ ಪರಿಚಯಿಸಿದರು.ಚಿಣ್ಣರ ಬಿಂಬದ ವಿನಯಾ ಶೆಟ್ಟಿ, ಸುಮಿತ್ರಾ ದೇವಾಡಿಗ, ಜ್ಯೋತಿ ಶೆಟ್ಟಿ, ವಿಜಯಾ ಕೋಟ್ಯಾನ್ ಅವರು ತೀರ್ಪುಗಾರರನ್ನು ಗೌರವಿಸಿದರು. ಎಚ್‌ಎಸ್‌ಸಿ, ಎಸ್‌ಎಸ್‌ಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಚಿಣ್ಣರ ಬಿಂಬದ ಮಕ್ಕಳನ್ನು ಗೌರವಿಸಲಾಯಿತು. ಪ್ರತಿಭಾವಂತ ಮಕ್ಕಳ ಯಾದಿಯನ್ನು ಕುಮುದಾ ಕೆ. ಆಳ್ವ ವಾಚಿಸಿದರು. ಶೀರ್ಷಿಕಾ ಶೆಟ್ಟಿ, ದೀಕ್ಷಿತಾ ಶೆಟ್ಟಿ, ಅದಿತಿ ಶೆಟ್ಟಿ, ಮಂಥನ್ ಶೆಟ್ಟಿ, ಶ್ರೇಯಾ ಕಾಂಚನ್, ನಿಧಿ ಶೆಟ್ಟಿ, ವೈಷ್ಣವಿ ಶೆಟ್ಟಿ, ಹಂಸಿರಿ ರಾವ್, ಸಾಥ್ವಿಶ್ರೀ ಭಟ್, ಪ್ರಶೂಲ್ ಶೆಟ್ಟಿ, ಶ್ರೇಯಾ ಶೆಟ್ಟಿ, ಸನತ್ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು. ನೆರೂಲ್ ಶಿಬಿರದ ಮಕ್ಕಳು ಪ್ರಾರ್ಥನೆಗೈದರು. ನವ್ಯಶ್ರೀ ಭಟ್, ಪ್ರತೀಕ್ಷಾ ಭಟ್, ಶ್ರೇಯಸ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಬಹುಮಾನ ವಿತರಣ ಕಾರ್ಯಕ್ರಮವನ್ನು ಹರೀಶ್ ಪಡುಬಿದ್ರೆ ಅವರು ನೆರವೇರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳನ್ನು ಗೌರವಿಸಲಾಯಿತು. ಮಕ್ಕಳು-ಪಾಲಕರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಚಿಣ್ಣರ ಬಿಂಬದ ಮಕ್ಕಳು ಪ್ರತಿಭಾನ್ವಿತರು. ಚಿಣ್ಣರ ಬಿಂಬದ ಮಕ್ಕಳಿಗೆ ಪ್ರತೀ ವರ್ಷ ದಕ್ಷಿಣ ಕನ್ನಡ ಸಾಧಕ ಪ್ರತಿಭಾ ಪುರಸ್ಕಾರ ಸಿಗುತ್ತಿರು ವುದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ. ಪಾಲಕರು ಕೆಲಸನ ನಿಮಿತ್ತ ತಲ್ಲೀನರಾದರೂ ತಮ್ಮ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಲು ಈ ಸಂಸ್ಥೆಗೆ ಕಳುಹಿಸಿಕೊಡುತ್ತಿರುವುದು
ಸಂತೋಷದ ವಿಷಯ.
– ಡಾ| ಶಿವ ಮೂಡಿಗೆರೆ,
ಕಾರ್ಯಾಧ್ಯಕ್ಷರು: ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘ ಕಟ್ಟಡ ಸಮಿತಿ ಚಿಣ್ಣರ ಬಿಂಬ ಸ್ಥಾಪನೆಯಾಗಿ 16 ವರ್ಷಗಳು ಕಳೆದಿವೆ. ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ಇಂತಹ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಬಹುಮಾನ ಗಳಿಸುವುದಕ್ಕಿಂತ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಚಿಣ್ಣರ ಬಿಂಬ ಇಂದು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಪಾಲಕರು ಕಾರಣ. ಮಕ್ಕಳನ್ನು ಒಳ್ಳೆಯ ನಾಗರಿ ಕರನ್ನಾಗಿ ಮಾಡುವ ಕೆಲಸವನ್ನು ಪಾಲಕರು ಮಾಡುತ್ತಿರುವುದು ಸಂತೋಷವಾಗುತ್ತಿದೆ.
– ಪ್ರಕಾಶ್ ಭಂಡಾರಿ,
ಚಿಣ್ಣರ ಬಿಂಬದ ರೂವಾರಿ