Advertisement
ಸೆ. 24 ರಂದು ಭಾಯಂದರ್ ಪೂರ್ವದ ಮದರ್ ಮೇರೀಸ್ ಇಂಗ್ಲೀಷ್ ಹೈಸ್ಕೂಲ್ ಸಭಾಗೃಹದಲ್ಲಿ ನಡೆದ ಚಿಣ್ಣರ ಬಿಂಬ ಮೀರಾರೋಡ್-ಭಾಯಂದರ್- ವಸಾಯಿ -ನಲಸೋಪರ ಶಿಬಿರಗಳ ಮಕ್ಕಳ ವಾರ್ಷಿಕ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಚಿಣ್ಣರ ಬಿಂಬದ ಮಕ್ಕಳ ಪ್ರತಿಯೊಂದು ಕಾರ್ಯಕ್ರಮಗಳನ್ನು ಸಮೀಪದಿಂದ ಬಲ್ಲವನಾಗಿದ್ದೇನೆ. ಇಂತಹ ಶಿಬಿರಗಳಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿ, ತುಳು-ಕನ್ನಡಿಗರ ಮಕ್ಕಳು ಸಂಸ್ಕೃತಿ-ಸಂಸ್ಕಾರಗಳೊಂದಿಗೆ ಅರಳಬೇಕು ಎಂದು ನುಡಿದು, ಮಕ್ಕಳ ಮುಂದಿನ ಭವಿಷ್ಯಕ್ಕೆ ಶುಭಹಾರೈಸಿದರು.
Related Articles
Advertisement
ಮೀರಾರೋಡ್ ಸಾಯಿಬಾಬಾ ಆಸ್ಪತ್ರೆಯ ಮುಖ್ಯ ಆಡಳಿತ ಅಧಿಕಾರಿ ಡಾ| ಎನ್. ಅಂಬರೀಷ್ ಹೆಗ್ಡೆ ಅವರು ಮಾತನಾಡಿ, ಚಿಣ್ಣರಿಗೆ ಸೂಕ್ತ ಸಲಹೆಗಳನ್ನು ನೀಡುತ್ತಿರುವ ಚಿಣ್ಣರ ಬಿಂಬದ ಕಾರ್ಯ ಅಭಿನಂದನೀಯ. ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಬೆಳೆಯಲು ಮಕ್ಕಳು ತಾಳ್ಮೆ ಮತ್ತು ಶಿಸ್ತನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರು, ಚಿಣ್ಣರ ಬಿಂಬದ ಚಿಣ್ಣರು ಉತ್ತಮವಾಗಿ ಬೆಳೆಯಲು ಅವರ ಪಾಲಕರ ಶ್ರಮ ಅಪಾರವಾಗಿದೆ. ನಲಸೋಪರ ಮತ್ತು ವಿರಾರ್‌ನಲ್ಲಿ ಶಿಬಿರ ಮತ್ತೆ ಪ್ರಾರಂಭವಾಗಲಿದೆ. ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಮೀರಾ- ಭಾಯಂದರ್ ಮಹಾನಗರ ಪಾಲಿಕೆಗೆ ನಗರ ಸೇವಕರಾಗಿ ಆಯ್ಕೆಗೊಂಡ ಹೊಟೇಲ್ ಉದ್ಯಮಿ, ಮೀರಾ-ಡಹಾಣೂ ಬಂಟ್ಸ್‌ನ ಅಧ್ಯಕ್ಷ ಅರವಿಂದ ಎ. ಶೆಟ್ಟಿ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಿ ಸಮ್ಮಾನಿಸಲಾಯಿತು. ಆಶ್ರಿತಾ ಕೊಠಾರಿ, ಹಸ್ತಾ ಶೆಟ್ಟಿ, ಸುವಿದಾ ಶೆಟ್ಟಿ ಮತ್ತು ಶ್ರೀ ರಕ್ಷಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ದಿನಪೂರ್ತಿ ನಡೆದ ಶಿಬಿರದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು. ವಿಜೇತ ಸ್ಪರ್ಧಿಗಳಿಗೆ ಗಣ್ಯರು ಬಹುಮಾನ ವಿತರಿಸಿ ಶುಭಹಾರೈಸಿದರು.
ಮಕ್ಕಳ ಸಾಂಸ್ಕೃತಿಕ ಉತ್ಸವದ ನಡುವೆ ಪಾಲಕರಿಗೆ ಇಂದಿನ ಗಂಡಸರು ಮನೆಯಲ್ಲಿ ಕೆಲಸ ಮಾಡಬೇಕೋ ಬೇಡವೋ ಎಂಬ ವಿಷಯದ ಮೇಲೆ ಚರ್ಚಾ ಕಾರ್ಯಕ್ರಮ ನಡೆಯಿತು. ಚರ್ಚಾ ಕೂಟವನ್ನು ಅಶೋಕ್ ಪಕ್ಕಳ ಅವರು ನಡೆಸಿಕೊಟ್ಟರು.