Advertisement
ಸೆ. 24ರಂದು ಬೆಳಗ್ಗೆ 9ರಿಂದ ಭಾಯಂದರ್ ಪೂರ್ವ, ನವಘರ್‌ರೋಡ್‌ನಲ್ಲಿರುವ ಮದರ್ ಮೇರಿಸ್ ಇಂಗ್ಲಿಷ್ ಹೈಸ್ಕೂಲ್‌ನ ಉತ್ಸವ್ ಸಭಾಗೃಹದಲ್ಲಿ ಚಿಣ್ಣರ ಬಿಂಬ ಮುಂಬಯಿ ಇದರ ಮೀರಾ ಭಾಯಂದರ್-ವಸಾಯಿ- ನಲಸೋಪರ- ವಿರಾರ್ ಪ್ರಾದೇಶಿಕ ಶಾಖೆಗಳ ಸಾಂಸ್ಕೃತಿಕ ಉತ್ಸವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಿಣ್ಣರ ಬಿಂಬದಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಜೀವನದಲ್ಲಿ ಸಾಂಸ್ಕೃತಿಕವಾಗಿ ಸಮೃದ್ಧತೆಯನ್ನು ಮೈಗೂಡಿಸಿಕೊಂಡು ಪ್ರಾದೇಶಿಕವಾಗಿ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಬಿತ್ತರಿಸುವ ಕಾರ್ಯ ಮಾಡುತ್ತಿದ್ದಾರೆ. ಇದು ನಮ್ಮ ಸಂಸ್ಕೃತಿಯನ್ನು ಮೂಲ ಬೇರನ್ನು ಉಳಿಸುವಂತೆ ಮಾಡುತ್ತದೆ ಎಂದು ನುಡಿದು ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಾಧ್ಯಕ್ಷ ಅರುಣ್ ರೈ ಅವರು ಮಾತನಾಡಿ, ಮಕ್ಕಳಿಂದ, ಮಕ್ಕಳಿಗಾಗಿ ಮಕ್ಕಳಿಂದಲೇ ಸ್ಥಾಪನೆಗೊಂಡ ಸಂಸ್ಥೆ ಚಿಣ್ಣರ ಬಿಂಬವಾಗಿದೆ. ಚಿಣ್ಣರ ಬಿಂಬದ ರೂವಾರಿಗಳ ಕನಸು ಇಂದು ಸಾಕಾರಗೊಂಡಿದೆ ಎಂದರೆ ತಪ್ಪಾಗಲಾರದು. ನಿಸ್ವಾರ್ಥವಾಗಿ ಮಾಡುತ್ತಿರುವ ಇಂತಹ ಸೇವೆ ನಿಜವಾಗಿಯೂ ಶ್ಲಾಘನೀಯ ಎಂದರು.
Related Articles
Advertisement
ಸಮಾರಂಭದ ವೇದಿಕೆಯಲ್ಲಿ ಮೀರಾರೋಡ್ ಹೊಟೇಲ್ ಉದ್ಯಮಿ ಶಿವರಾಮ ಶೆಟ್ಟಿ, ಚಿಣ್ಣರ ಬಿಂಬ ಮೀರಾ ಭಾಯಂದರ್-ವಸಾಯಿ-ನಲಸೋಪರ- ವಿರಾರ್ ಪ್ರಾದೇಶಿಕ ಶಾಖೆಯ ಮುಖ್ಯಸ್ಥೆ ಪೂರ್ಣಿಮಾ ಪೂಜಾರಿ, ವಿವಿಧ ಶಿಬಿರಗಳ ಮುಖ್ಯಸ್ಥರಾದ ಸುಕನ್ಯಾ ಸಫಲಿಗ, ವಿನಯಾ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥರಾದ ಮಮತಾ ಭಂಡಾರಿ, ವಿಶಾಲಕ್ಷ್ಮೀ ಶೆಟ್ಟಿ, ಭಜನೆ ಶಿಕ್ಷಕಿಯರಾದ ಸರೋಜಿನಿ ಪೂಜಾರಿ, ಶಾಂತಾ ಆಚಾರ್ಯ, ಶಿಬಿರಗಳ ಶಿಕ್ಷಕಿಯರಾದ ಮಲ್ಲಿಕಾ ಶೆಟ್ಟಿ, ಸುಲೋಚನಾ ಶೆಟ್ಟಿ, ಸುರೇಖಾ ಮೂಲ್ಯ, ಅನಸೂಯಾ ಕೋಟ್ಯಾನ್, ಮಮತಾ ಶೆಟ್ಟಿ, ಮಂಜುಳಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಅತಿಥಿ-ಗಣ್ಯರನ್ನು ಚಿಣ್ಣರು ಗೌರವಿಸಿದರು. ಇದೇ ಸಂದರ್ಭದಲ್ಲಿ ಶಾಖೆಯ ಚಿಣ್ಣರ ಬಿಂಬದ ಮಕ್ಕಳಿಗೆ ಭಜನೆ, ಭಾಷಣ, ಭಾವಗೀತೆ, ಏಕಪಾತ್ರಾಭಿನಯ, ಛದ್ಮವೇಷ, ಜಾನಪದ ನೃತ್ಯ ಹಾಗೂ ಸಮೂಹ ಗಾನ ಸ್ಪರ್ಧೆಗಳು ನಡೆದವು. ಪಾಲಕರಿಗೆ ಚರ್ಚಾಕೂಟವನ್ನು ಆಯೋಜಿಸಲಾಗಿತ್ತು. ಶಾಖೆಯ ವಿದ್ಯಾರ್ಥಿ ಗಳಾದ ಅಶ್ರಿತಾ ಕೊಠಾರಿ, ಹಸ್ತಾ ಶೆಟ್ಟಿ, ಶ್ರೀರಕ್ಷಾ ಶೆಟ್ಟಿ, ಸುವಿಧಾ ಶೆಟ್ಟಿ ಅವರು ಕ್ರಮವಾಗಿ ಕಾರ್ಯಕ್ರಮ ನಿರ್ವಹಿಸಿದರು. ಸಾಕ್ಷೀ ಶೆಟ್ಟಿ ಅವರು ವಂದಿಸಿದರು. ಸೌಮ್ಯಾ ಶೆಟ್ಟಿ, ಸುಜಾತಾ ಶೆಟ್ಟಿ, ಆಶಾಲತಾ ಕೊಠಾರಿ, ಸುಚರಿತಾ ಶೆಟ್ಟಿ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಕರ್ನಾಟಕ ಸರಕಾರ ಬೆಂಗಳೂರು ನಿರ್ದೇಶಕ ಎನ್. ಆರ್. ವಿಶುಕುಮಾರ್ ಇವರ ಪ್ರಾಯೋಜಕತ್ವದಲ್ಲಿ ನಡೆದ ಸಮಾರಂಭದಲ್ಲಿ ತುಳು-ಕನ್ನಡಿಗರು, ಸಂಸ್ಥೆಯ ರೂವಾರಿಗಳು, ಆಡಳಿತ ಮಂಡಳಿಯವರು, ಕಾರ್ಯಕಾರಿ ಸಮಿತಿಯ, ವಿವಿಧ ಉಪ ವಿಭಾಗಗಳ ಪದಾಧಿಕಾರಿಗಳು, ಕಾರ್ಯಕರ್ತರು, ಪಾಲಕ-ಪೋಷಕರು, ಶಿಕ್ಷಕರು, ಚಿಣ್ಣರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.