Advertisement

ವಿಜೃಂಭಣೆಯ ಚಿನ್ನಾಪುರದಯ್ಯ ಸ್ವಾಮಿ ರಥೋತ್ಸವ

05:30 PM Feb 24, 2021 | Team Udayavani |

ಸೊಂಡೂರು: ತಾಲೂಕಿನ ಬಂಡ್ರಿ ಗ್ರಾಮದ ಹೊರ ವಲಯ ಹಾಗೂ ಜೋಗಿಕಲ್ಲು ಗ್ರಾಮದ ಹತ್ತಿರದ ಶ್ರೀ ಚಿನ್ನಾಪುರದಯ್ಯ ರಥೋತ್ಸವ ಸೋಮವಾರ ಸಂಜೆ ಅದ್ಧೂರಿಯಾಗಿ ನಡೆಯಿತು.

Advertisement

ಈ ಸಂದರ್ಭದಲ್ಲಿ ರಥೋತ್ಸವವಕ್ಕೆ ಒಂದು ತಿಂಗಳಿಂದಲೂ ಭಕ್ತರು ವಿಶೇಷ ತಯಾರಿ ನಡೆಸಿದ್ದರು. ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರಿನಿಂದಲೂ ಭಕ್ತರು ಆಗಮಿಸಿ ಪೌಳಿಯನ್ನು ಹಾಕುತ್ತಾರೆ. ಬಹಳಷ್ಟು ಭಕ್ತರು ರಥೋತ್ಸವಕ್ಕೂ ಮುನ್ನ ಉಪವಾಸ ವ್ರತ ಆಚರಿಸುವ ಮೂಲಕ ತಮ್ಮ ಭಕ್ತಿ ಸಮರ್ಪಿಸುವುದು ವಾಡಿಕೆಯಾಗಿದೆ.

ರಥೋತ್ಸವಕ್ಕೂ ಪೂರ್ವದಲ್ಲಿ ರಥದ ಗಾಲಿಗಳನ್ನು ಹೊರ ಹಾಕುವ, ವಿಶೇಷ ಪೂಜಾ ಕಾರ್ಯಕ್ರಮ, ರಥದ ಸಿಂಗಾರ, ಅಲ್ಲದೆ ವಿಶೇಷವಾದ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ರಥೋತ್ಸವವದ ದಿನದಂದು ಶ್ರೀ ಚಿನ್ನಾಪುರದಯ್ಯ ಸ್ವಾಮಿಗೆ ವಿಶೇಷ ಅಭಿಷೇಕ ಕಾರ್ಯಕ್ರಮಗಳು ನಡೆದು ನಂತರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ರಥದ ಹತ್ತಿರಕ್ಕೆ ತಂದು ಪ್ರದಕ್ಷಿಣೆ ಮಾಡುವ ಮೂಲಕ ಪೂಜೆ ಸಲ್ಲಿಸಿ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು.

ಈ ಸಂದರ್ಭದಲ್ಲಿ ಭಕ್ತರ ಜಯಕಾರ ಮುಗಿಲು ಮುಟ್ಟಿರುತ್ತದೆ. ರಥೋತ್ಸವದ ಸಂದರ್ಭದಲ್ಲಿ ಸಾವಿರಾರು ಭಕ್ತರು ವಿಶೇಷವಾಗಿ ನೈವೇದ್ಯ ಸಮರ್ಪಿಸಿದರೆ ಮತ್ತೆ ಕೆಲ ಭಕ್ತರು ಹಣ್ಣು, ತೆಂಗಿನಕಾಯಿಗಳನ್ನು ಗಾಲಿಗೆ ಹೊಡೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಥೋತ್ಸವ ಪಾದಗಟ್ಟೆಯವರೆಗೆ ಸಾಗಿ ಮರಳಿ ಸ್ವಸ್ಥಳದಲ್ಲಿ ಪ್ರತಿಷ್ಠಾಪನೆಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next