Advertisement

China V/s Taiwan: ತೈವಾನ್‌ ಸಮೀಪ ಚೀನಾ ಯುದ್ಧ ಹಡಗುಗಳು

08:20 PM Apr 07, 2023 | Team Udayavani |

ಬೀಜಿಂಗ್‌: ತೈವಾನ್‌ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಅವರು ಅಮೆರಿಕ ಸಂಸತ್‌ ಸ್ಪೀಕರ್‌ ಕೆವಿನ್‌ ಮೆಕಾರ್ಥಿ ಅವರೊಂದಿಗೆ ಸಭೆ ನಡೆಸಿದ್ದಕ್ಕೆ ಬದಲಿಯಾಗಿ ಚೀನಾ ತನ್ನ ಯುದ್ಧ ಹಡಗುಗಳು ಮತ್ತು ಯುದ್ಧ ವಿಮಾನಗಳನ್ನು ಎರಡನೇ ದಿನವಾದ ಶುಕ್ರವಾರವೂ ತೈವಾನ್‌ ಸಮೀಪ ಕಳುಹಿಸಿದೆ. ಇದೇ ವೇಳೆ ಸಭೆ ನಡೆಸಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕದ ರೊನಾಲ್ಡ್‌ ರೇಗನ್‌ ಪ್ರಸಿಡೆನ್ಶಿಯಲ್‌ ಲೈಬ್ರರಿ ಹಾಗೂ ಏಷ್ಯಾ ಮೂಲದ ಹಲವು ಸಂಸ್ಥೆಗಳಿಗೆ ಚೀನಾ ನಿರ್ಬಂಧ ವಿಧಿಸಿದೆ. ಸಭೆ ನಡೆದರೆ ದಿಟ್ಟ ಪ್ರತ್ಯುತ್ತರ ನೀಡುವುದಾಗಿ ಚೀನಾ ಪದೇಪದೆ ಎಚ್ಚರಿಕೆ ನೀಡಿದ ಹೊರತಾಗಿಯೂ ತೈವಾನ್‌ ಅಧ್ಯಕ್ಷೆ ಮತ್ತು ಅಮೆರಿಕ ಸಂಸತ್‌ ಸ್ಪೀಕರ್‌ ನಡುವೆ ಗುರುವಾರ ಸಭೆ ನಡೆದಿತ್ತು. ತೈವಾನ್‌ ಮತ್ತು ಯಾವುದೇ ವಿದೇಶಿ ಸರ್ಕಾರಗಳ ನಡುವಿನ ಮಾತುಕತೆಯು ದೇಶದ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ ಎಂದು ಚೀನಾ ಪ್ರತಿಪಾದಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next