Advertisement

ಚಳೀಲೂ ಚೀನ ಸಮರ ಚಾಳಿ; ಅಕ್ಸಾಯ್‌ಚಿನ್‌ನಲ್ಲಿ ಮಿಲಿಟರಿ ಕಾಮಗಾರಿ

12:46 AM Oct 24, 2020 | mahesh |

ಹೊಸದಿಲ್ಲಿ: ಎಲ್‌ಎಸಿಗೆ ರೌದ್ರ ಚಳಿಗಾಲ ಕಾಲಿಟ್ಟಿದೆ. ದುರ್ಗಮ ಹಿಮಕಣಿವೆಗಳಲ್ಲಿ ಪಿಎಲ್‌ಎ ಸೈನಿಕರು ಜೀವ ಕೈಯಲ್ಲಿ ಹಿಡಿದು ನಿಂತಿದ್ದರೂ, ಚೀನ ಕಿಂಚಿತ್‌ ದಯೆ ತೋರದೆ ಮತ್ತೆ ತುಕಡಿಗಳನ್ನು ನಿಯೋಜಿಸಿದೆ. ಹೊಸ ಮಿಲಿಟರಿ ಕಾಮಗಾರಿ ಆರಂಭಿಸಿ, ಉದ್ಧಟತನ ಮುಂದುವರಿಸಿದೆ.

Advertisement

ಹೌದು! ಚಳಿಗಾಲದಲ್ಲೂ ಅಕ್ಸಾಯ್‌ ಚಿನ್‌ನಿಂದ ಚೀನ ಹಿಂದೆ ಸರಿಯುವ ಸಾಧ್ಯತೆ ತೀರಾ ಕಡಿಮೆ. ತುಕಡಿಗಳನ್ನು ಮರು ನಿಯೋಜಿಸಿದ್ದಲ್ಲದೆ, 3 ಲಕ್ಷ ಚ. ಅಡಿ ಪ್ರದೇಶದಲ್ಲಿ ಮಿಲಿಟರಿ ಸಂಬಂಧಿತ ಬೃಹತ್‌ ನಿರ್ಮಾಣ ಕೈಗೊಂಡಿದೆ. ಅಕ್ಸಾ ಯ್‌ಚಿನ್‌ನ ಎಲ್‌ಎಸಿಯ 10 ಕಿ.ಮೀ. ವ್ಯಾಪ್ತಿಯಲ್ಲಿ 4 ಫ‌ುಟ್ಬಾಲ್‌ ಮೈದಾನದಷ್ಟು ಜಾಗದಲ್ಲಿ ಕಾಮಗಾರಿ ಆರಂಭಿಸಿದೆ ಎಂದು “ಹಿಂದೂಸ್ತಾನ್‌ ಟೈಮ್ಸ್‌’ಗೆ ಹಿರಿಯ ಮಿಲಿಟರಿ ಅಧಿಕಾರಿ ತಿಳಿಸಿದ್ದಾರೆ.

ಆಸ್ಪತ್ರೆ ನಿರ್ಮಾಣ: ಸೈನಿಕರಿಗೆ ವಸತಿ ಸೌಲಭ್ಯ, ಫಿರಂಗಿದಳ, ರಾಕೆಟ್‌ ರೆಜಿಮೆಂಟ್‌ಗೆ ಸಕಲ ವ್ಯವಸ್ಥೆ ಸಿದ್ಧಗೊಳಿಸುತ್ತಿದೆ. ಅತ್ಯುನ್ನತ ಶಿಖರಗಳಲ್ಲಿ ಕೆಲಸ ಮಾಡುವ ಸೈನಿಕರಿಗೆ ಶ್ವಾಸಕೋಶ ತೊಂದರೆ, ಇನ್ನಿತರ ಆರೋಗ್ಯ ಸಮಸ್ಯೆಗಳಾದರೆ ಚಿಕಿತ್ಸೆ ನೀಡಲು ಸೇನಾ ಆಸ್ಪತ್ರೆಗಳನ್ನು ನಿರ್ಮಿಸುತ್ತಿದೆ.

“ಹೊಸ ತುಕಡಿಗಳು, ಸೇನಾ ವಾಹನಗಳು, ಯುದೊœàಪಕರಣಗಳನ್ನು ಎಲ್‌ಎಸಿ ಯಿಂದ 82 ಕಿ.ಮೀ. ದೂರದ ಕ್ಸಿನ್‌ಜಿಯಾಂಗ್‌ನಿಂದ ಸ್ಥಳಾಂತರಿಸಲಾಗಿದೆ. ಅಲ್ಲಿಂದ ಅಕ್ಸಾಯ್‌ಚಿನ್‌ಗೆ ಚಳಿಗಾಲಕ್ಕಾಗಿ ಪರ್ಯಾಯ ಮಾರ್ಗ ನಿರ್ಮಿಸುತ್ತಿರುವ ಪಿಎಲ್‌ಎ, ಹೊತಾನ್‌, ಕಾಂಕ್ಸಿವರ್‌ನಲ್ಲಿ ರಸ್ತೆ ಕಾಮಗಾರಿ ಆರಂಭಿಸಿದೆ’ ಎಂದಿದ್ದಾರೆ.

ಚೀನ ಸೈನಿಕನ ಬಳಿ ಇತ್ತು ಪೆನ್‌ಡ್ರೈವ್‌
ಲಡಾಖ್‌ನ ಡೆಮ್ಚ್ ಕ್‌ನಲ್ಲಿ ಭಾರತದ ಭೂಪ್ರದೇಶಕ್ಕೆ ಅಕ್ರಮವಾಗಿ ಬಂದು ಸಿಕ್ಕಿಬಿದ್ದಿದ್ದ ಚೀನ ಯೋಧನ ಬಳಿ ಖಾಲಿ ಪೆನ್‌ ಡ್ರೈವ್‌ ಮತ್ತು ಸ್ಲಿಪಿಂಗ್‌ ಬ್ಯಾಗ್‌ ಇತ್ತು ಎಂಬ ಅಂಶ ದೃಢಪಟ್ಟಿದೆ. ಜತೆಗೆ ಮೊಬೈಲ್‌ ಫೋನ್‌ ಕೂಡ ಪತ್ತೆಯಾಗಿತ್ತು ಎಂದು ಸೇನೆಯ ಮೂಲಗಳನ್ನು ಉಲ್ಲೇಖೀಸಿ “ಇಂಡಿಯಾ ಟುಡೇ’ ವರದಿ ಮಾಡಿದೆ. ಅ.19ರಂದು ಅಕ್ರಮವಾಗಿ ಭಾರತದ ಪ್ರದೇಶಕ್ಕೆ ನುಸುಳಿದ್ದ ಚೀನ ಸೈನಿಕನನ್ನು ಬುಧವಾರ ಹಸ್ತಾಂತರಿಸಲಾಗಿದೆ.

Advertisement

ಚೀನ ಅಕ್ರಮ ಮೀನು ಶಿಕಾರಿ
ತನ್ನ ಪ್ರಜೆಗಳ ಹೊಟ್ಟೆ ತುಂಬಿಸಲು ಚೀನ, ಬಡರಾಷ್ಟ್ರಗಳ ಆಹಾರ ಕಸಿದು ಪರಿಸರ ನಾಶಕ್ಕಿಳಿದಿದೆ. ಉತ್ತರ ಮತ್ತು ದಕ್ಷಿಣ ಕೊರಿಯಾ, ಜಪಾನ್‌ ಸಮುದ್ರ ವ್ಯಾಪ್ತಿಯಲ್ಲಿ ಚೀನ ಈಗಾಗಲೇ ಅಕ್ರಮ “ದೂರ ನೀರಿನ ಮಿನುಗಾರಿಕೆ’ (ಡಿಡಬ್ಲ್ಯುಎಫ್) ನಡೆಸುತ್ತಿದೆ. ಈಗ ಲ್ಯಾಟಿನ್‌ ಅಮೆರಿಕ, ಪಶ್ಚಿಮ ಆಫ್ರಿಕದ ಸಾಗರ ಸೀಮೆಗಳಿಗೂ ಚೀನ ಮೀನುಗಾರಿಕಾ ಹಡಗುಗಳು ಲಗ್ಗೆ ಇಟ್ಟಿವೆ. ಇಲ್ಲಿನ ಬಡರಾಷ್ಟ್ರಗಳ ವಿಶೇಷ ಆರ್ಥಿಕ ವಲಯಗಳಲ್ಲಿ ಕಣ್ಗಾವಲು ದುರ್ಬಲವಿರುವುದು ಚೀನಾಕ್ಕೆ ಲಾಭ ತಂದುಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next