Advertisement

ಪಾಕ್‌ಗೆ ಚೀನ ಉಪ ಪ್ರಧಾನಿ ಭೇಟಿ

11:55 PM Jul 29, 2023 | Team Udayavani |

ಇಸ್ಲಾಮಾಬಾದ್‌: ಭಾರತದ ಪಾಲಿಗೆ ಅಪಾಯಕಾರಿಯಾಗಿರುವ ಚೀನ-ಪಾಕಿ­ಸ್ಥಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ)ನ 10ನೇ ವಾರ್ಷಿಕೋತ್ಸವಕ್ಕೆ ಸಿದ್ಧತೆ ನಡೆಯು­ತ್ತಿದೆ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸಾಗುವ ಒನ್‌ ಬೆಲ್ಟ್-ಒನ್‌ ಕಾರಿಡಾರ್‌ ಯೋಜನೆಯ ವಾರ್ಷಿಕೋತ್ಸವ ಜು.30ರಿಂದ ಆ.1ರವರೆಗೆ ನಡೆಯಲಿದೆ.

Advertisement

ಇದರಲ್ಲಿ ಮುಖ್ಯ ಅತಿಥಿಯಾಗಿ ಚೀನ ಉಪಪ್ರಧಾನಿ ಹೆ ಲೈಪೆಂಗ್‌ ಮೂರೂ ದಿನ ಇಸ್ಲಾಮಾಬಾದ್‌ನಲ್ಲಿರಲಿದ್ದಾರೆ. ಸಿಪಿಇಸಿ, ಪಾಕಿಸ್ಥಾನದ ಬಲೂಚಿಸ್ಥಾನದ ಗ್ವಾದರ್‌ ಬಂದರನ್ನು ಚೀನದ ಕ್ಸಿಜಾಂಗ್‌ನೊಂದಿಗೆ ಸಂಪರ್ಕಿಸುತ್ತದೆ. ಇದು ಚೀನ ಅಧ್ಯಕ್ಷ ಕ್ಷಿ ಜಿನ್‌ಪಿಂಗ್‌ ಅವರ ಮಹತ್ವಾಕಾಂಕ್ಷೆಯ ಶತಕೋಟಿ ಡಾಲರ್‌ ವೆಚ್ಚದ “ಒನ್‌ ಬೆಲ್ಟ್, ಒನ್‌ ರೋಡ್‌’ನ ಪ್ರಮುಖ ಯೋಜನೆಯಾಗಿದೆ. ಇದನ್ನು ಭಾರತ ಆರಂಭದಿಂದಲೂ ವಿರೋಧಿಸಿಕೊಂಡೇ ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next