Advertisement

2014ರ ಬಳಿಕ ಕನಿಷ್ಠ ಮಟ್ಟಕ್ಕೆ ಕುಸಿದ ಚೀನೀ ಶೇರು ಮಾರಕಟ್ಟೆ

03:34 PM Oct 11, 2018 | |

ಶಾಂಘೈ : ಚೀನ ಶೇರು ಮಾರಕಟ್ಟೆ ಇಂದು ಗುರುವಾರ ಕಳೆದ ನಾಲ್ಕು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಚೀನದ ಸುಮಾರು 1,000 ಕಂಪೆನಿಗಳ ಶೇರು ಧಾರಣೆ ದಿನದ ಶೇ.10ರ ಕುಸಿತದ ಮಿತಿಯನ್ನು ತಲುಪಿವೆ. 

Advertisement

ಜಾಗತಿಕ ಶೇರು ಮಾರುಕಟ್ಟೆಗಳಲ್ಲಿನ ಭಾರೀ ಕುಸಿತ, ಅಮೆರಿಕ – ಚೀನ ನಡುವಿನ ವಾಣಿಜ್ಯ ಸಮರ ಮುಂತಾಗಿ ಹಲವು ಕಾರಣಗಳಿಂದ ಚೀನೀ ಶೇರು ಮಾರುಕಟ್ಟೆ ಕುಸಿದಿದೆ ಎಂದು ವರದಿಗಳು ತಿಳಿಸಿವೆ. 

ಶಾಂಘೈ ಶೇರು ಮಾರುಕಟ್ಟೆ ಇಂದು  ಶೇ.5.22ರ ಅಥವಾ 142.38 ಅಂಕಗಳ ಭಾರೀ ಕುಸಿತವನ್ನು ಕಂಡು 2014ರ ನವೆಂಬರ್‌ ಬಳಿಕದ ಆತ್ಯಂತ ಕನಿಷ್ಠ ಮಟ್ಟವಾಗಿ 2,583.46 ಅಂಕಗಳ ಮಟ್ಟಕ್ಕೆ ಜಾರಿತು. 

Advertisement

Udayavani is now on Telegram. Click here to join our channel and stay updated with the latest news.

Next