Advertisement

ಗಡಿಯಲ್ಲಿ ಚೀನಾ ಕ್ಯಾತೆ: ಪ್ಯಾಂಗಾಂಗ್ ತ್ಸೋನ ಫಿಂಗರ್ 4 ಪ್ರದೇಶ ಭಾರತೀಯ ಸೇನೆಯ ವಶಕ್ಕೆ?

06:16 PM Sep 02, 2020 | Nagendra Trasi |

ನವದೆಹಲಿ/ಜಮ್ಮು-ಕಾಶ್ಮೀರ: ಲಡಾಖ್ ನ ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಭಾರತದ ಗಡಿಯೊಳಗಿನ ಪ್ರದೇಶವನ್ನು ವಶಕ್ಕೆ ತೆಗೆದುಕೊಳ್ಳಲು ರಾತ್ರಿ ದುಸ್ಸಾಹಸಕ್ಕೆ ಕೈಹಾಕಿ ಚೀನಾ ವಿಫಲವಾಗಿತ್ತು. ಅಲ್ಲದೇ ಸೋಮವಾರವೂ ಕೂಡಾ ಚೀನಾ ಉದ್ಧಟತನ ತೋರಿ ಪ್ರಚೋದನಕಾರಿ ವರ್ತನೆ ತೋರಿಸಿತ್ತು. ಏತನ್ಮಧ್ಯೆ ಭಾರತೀಯ ಪ್ಯಾಂಗಾಂಗ್ ತ್ಸೋ ಪ್ರದೇಶದ ಫಿಂಗರ್ 4 ಅನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

Advertisement

ಭಾರತೀಯ ಸೇನೆ ಅತೀ ಎತ್ತರದ ಫಿಂಗರ್ 4 ಪ್ರದೇಶಕ್ಕೆ ತಲುಪುವಲ್ಲಿ ಒಂದು ತಂಡ ಯಶಸ್ವಿಯಾಗಿದೆ ಎಂದು ದ ಪ್ರಿಂಟ್ ವರದಿ ಮಾಡಿದೆ. ಪ್ಯಾಂಗಾಂಗ್ ತ್ಸೋನ ಉತ್ತರ ನದಿ ದಂಡೆ ಪ್ರದೇಶದ ಎದುರು ಭಾಗದಲ್ಲಿ ಪಹರೆ ಕಾಯಲಾಗುತ್ತಿದೆ ಎಂದು ತಿಳಿಸಿದೆ.

ಪ್ಯಾಂಗಾಂಗ್ ತ್ಸೋನ ಫಿಂಗರ್ 4 ಪ್ರದೇಶವನ್ನು ಚೀನಾ ಪಡೆ ಅಚ್ಚರಿಗೊಳ್ಳುವಂತೆ ಭಾರತೀಯ ಸೇನೆ ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಟೈಮ್ಸ್ ನೌ ವರದಿ ಪ್ರಕಾರ, ಭಾರತೀಯ ಸೇನೆಯ ಉನ್ನತ ಮೂಲಗಳು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದೆ ಎಂದು ಹೇಳಿದೆ.

ಸದ್ಯ ಲಡಾಖ್ ನ ಪ್ಯಾಂಗಾಂಗ್ ಪ್ರದೇಶದಲ್ಲಿ ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಪ್ಯಾಂಗಾಂಗ್ ತ್ಸೋ ಪ್ರದೇಶದಲ್ಲಿ ಭಾರತೀಯ ಸೇನೆ ಎಲ್ಲ ರೀತಿಯಿಂದಲೂ ಸರ್ವ ಸನ್ನದ್ಧವಾಗಿದೆ. ಅಲ್ಲದೇ ಉಭಯ ದೇಶಗಳ ಕಮಾಂಡರ್ ಮಟ್ಟದ ಮಾತುಕತೆ ಮುಂದುವರಿದಿದೆ ಎಂದು ತಿಳಿಸಿದೆ.

Advertisement

ಫಿಂಗರ್ 4 ಪ್ರದೇಶದಲ್ಲಿ ಚೀನಾ ಸೈನಿಕರು ಬೀಡು ಬಿಟ್ಟಿದ್ದು, ಅವರು ಒಳ ನುಸುಳದಂತೆ ತಡೆಯಲು ಭಾರತೀಯ ಸೇನೆ ಕೂಡಾ ಸಜ್ಜಾಗಿ ನಿಂತಿದೆ ಎಂದು ಮೂಲಗಳು ಹೇಳಿವೆ.

ವಿವಾದಿತ ಸ್ಥಳ ಭಾರತದಲ್ಲಿ ನಿಯಂತ್ರಣದಲ್ಲಿ:

ಪ್ಯಾಂಗಾಂಗ್ ಸರೋವರದ ದಂಡೆ ಪ್ರದೇಶವನ್ನು ಚೀನಾ ಸೈನಿಕರು ವಶಪಡಿಸಿಕೊಳ್ಳಲು ಯತ್ನಿಸಿದ್ದ ಪ್ರದೇಶ ಭಾರತೀಯ ಸೇನೆಯ ವಶದಲ್ಲಿದೆ. ಈ ಪ್ರದೇಶದ ಎತ್ತರದ ಸ್ಥಳಗಳ ಮೇಲೆ ಭಾರತ ತನ್ನ ಹಿಡಿಯ ಸಾಧಿಸಿದ್ದು, ಚೀನಾ ಯಾವುದೇ ರೀತಿಯ ಆಕ್ರಮಣಕ್ಕೆ ಮುಂದಾದರೂ ಕೂಡಾ ಅದನ್ನು ವಿಫಲಗೊಳಿಸಲಾಗುವುದು ಎಂದು ಸೇನಾ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next