Advertisement

Chang’e 6: ಚಂದ್ರನ ಅಗೋಚರ ಭಾಗದಿಂದ ಶಿಲೆ ತಂದ ಚೀನಾ ನೌಕೆ

09:30 PM Jun 25, 2024 | Team Udayavani |

ಬೀಜಿಂಗ್‌: ಚಂದ್ರನ ದಕ್ಷಿಣ ಧ್ರುವದಲ್ಲಿನ ಕಣ್ಣಿಗೆ ಕಾಣದ ಭಾಗಕ್ಕೆ ತೆರಳಿದ್ದ ಚೀನಾದ ಚಾಂಗ್‌ ಇ-6 ಅಂತರಿಕ್ಷ ನೌಕೆ ಯಶಸ್ವಿಯಾಗಿ ಭೂಮಿಗೆ ಮರಳಿದೆ. ಮೇ 3ರಂದು ಚಂದ್ರನಲ್ಲಿಗೆ ಹಾರಿದ್ದ ಅದು, ಜೂ.25ಕ್ಕೆ ಮರಳಿದೆ ಎಂದು ಸಿಎನ್‌ಸಿಎ (ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ) ತಿಳಿಸಿದೆ. ಚಂದ್ರನ ಅತಿದೂರದ ಭಾಗಕ್ಕೆ ತೆರಳಿ ಮಾದರಿಗಳನ್ನು ಸಂಗ್ರಹಿಸಿ ವಾಪಸ್‌ ಮರಳಿದ ಮೊದಲ ನೌಕೆ ಎಂಬ ಹೆಗ್ಗಳಿಕೆಯನ್ನು ಚಾಂಗ್‌ ಇ-6 ಪಡೆದುಕೊಂಡಿದೆ.

Advertisement

ಚೀನಾದ ಅಂತರಿಕ್ಷ ಸಂಶೋಧನೆಯಲ್ಲೇ ಇದೊಂದು ಮಹತ್ವದ ಸಾಹಸವಾಗಿ ದಾಖಲಾಗಿದೆ. 2023, ಆಗಸ್ಟ್‌ನಲ್ಲಿ ಚಂದ್ರನ ದಕ್ಷಿಣ ಭಾಗದಲ್ಲಿ ಭಾರತದ ಚಂದ್ರಯಾನ-3 ನೌಕೆ ಯಶಸ್ವಿಯಾಗಿ ನೆಲಕ್ಕಿಳಿದಿತ್ತು. ಅದರ ಬೆನ್ನಲ್ಲೇ ಚೀನಾ ಈ ಸಾಹಸವನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿದೆ.

ಭೂಮಿಗೆ ಮರಳಿರುವ ಚಾಂಗ್‌ ಇ-6 ತನ್ನೊಂದಿಗೆ ಒಟ್ಟು 2 ಕೆಜಿಯಷ್ಟು ಚಂದ್ರನಲ್ಲಿನ ಮಣ್ಣು, ಕಲ್ಲುಗಳನ್ನು ಹೊತ್ತು ಉತ್ತರ ಚೀನಾದ ಸಿಜಿವಾಂಗ್‌ ಬ್ಯಾನರ್‌ (ಮಂಗೋಲಿಯದ ಒಳಭಾಗದಲ್ಲಿರುವ ಸ್ವಾಯುತ್ತ ಪ್ರದೇಶ) ಪ್ರದೇಶದಲ್ಲಿಳಿದಿದೆ. ಪ್ರಸ್ತುತ ಚಾಂಗ್‌ ಇ ಪ್ರವೇಶಿಸಿರುವ ಸ್ಥಳ ಅತ್ಯಂತ ಭಾರೀ ತಗ್ಗುಗಳಿಂದ ಕೂಡಿದ, ಸಮತಟ್ಟು ಪ್ರದೇಶ ಸ್ವಲ್ಪ ಮಾತ್ರ ಇರುವ ಅಪಾಯಕಾರಿ ಜಾಗ. ಅಲ್ಲಿಗೆ ತೆರಳಿ ವಾಪಸ್‌ ಮರಳಿದ್ದು ವಿಜ್ಞಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next