Advertisement
ಬೀಜಿಂಗ್ ಕಾಲಮಾನದ ಪ್ರಕಾರ ಬೆಳಗ್ಗೆ 10.24ರ ವೇಳೆಗೆ ಲಾಂಗ್ ಮಾರ್ಚ್ 5ಬಿ ರಾಕೆಟ್‌ನ ಭಗ್ನಾವಶೇಷವು ಭೂ ವಾತಾ ವರಣ ವನ್ನು ಪ್ರವೇ ಶಿಸಿತ್ತು. ಇದು ಜನವಸತಿ ಪ್ರದೇಶದ ಮೇಲೆ ಬಿದ್ದಿ ದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.
ಭೂ ವಾತಾವರಣ ಪ್ರವೇ ಶಿ ಸುವ ಮುನ್ನವೇ ಈ ಅವ ಶೇಷದ ಬಹುತೇಕ ಭಾಗ ಗಳು ಸುಟ್ಟು ಹೋಗಿದ್ದವು. ಅದು 108 ಅಡಿ ಎತ್ತರ ಮತ್ತು 20 ಸಾವಿರ ಕೆ.ಜಿ. ತೂಕವಿದ್ದು, ಭೂ ವಾತಾವರಣವನ್ನು ಮರುಪ್ರವೇಶಿಸಿದ 6ನೇ ಅತೀ ದೊಡ್ಡ ಅವಶೇಷ ಎಂದು ಕ್ಯಾಲಿಫೋರ್ನಿಯಾದ ಏರೋಸ್ಪೇಸ್ ಕಾರ್ಪೊರೇಷನ್ ಹೇಳಿದೆ. ಚೀನದ ಬಗ್ಗೆ ಆಕ್ರೋಶ
ರಾಕೆಟ್‌ಗಳ ಮರುಪ್ರವೇಶವನ್ನು ಸಮರ್ಪಕ ವಾಗಿ ನಡೆಸದೆ ನಿರ್ಲಕ್ಷ್ಯ ವಹಿಸುತ್ತಿರುವ ಚೀನದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ಷೇಪ ವ್ಯಕ್ತ ವಾಗಿದೆ. ಕಳೆದ ವರ್ಷವೂ ಚೀನದ ರಾಕೆಟ್ ಇದೇ ರೀತಿ ಆತಂಕ ಸೃಷ್ಟಿಸಿತ್ತು. 2016, 2019ರಲ್ಲೂ ಇಂಥದೇ ಘಟನೆಗಳು ನಡೆದಿದ್ದವು.