ನವದೆಹಲಿ: ಭಾರತ-ಬಾಂಗ್ಲಾದೇಶ ಗಡಿಭಾಗದಲ್ಲಿ 35 ವರ್ಷದ ಚೀನಾ ಪ್ರಜೆಯನ್ನು ಗಡಿ ಭದ್ರತಾ ಪಡೆ(ಬಿಎಸ್ ಎಫ್) ಗುರುವಾರ (ಜೂನ್ 10) ಬಂಧಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಅನುಮಾನಾಸ್ಪದ ಚಟುವಟಿಕೆಯ ಹಿನ್ನೆಲೆಯಲ್ಲಿ ಚೀನಾ ಪ್ರಜೆಯನ್ನು ಪಶ್ಚಿಮಬಂಗಾಳದ ಮಾಲ್ಡಾ ಜಿಲ್ಲೆ ಸಮೀಪದ ಗಡಿಯಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಕೋವಿಡ್ ಗೆದ್ದು ಬಂದ ದಾಸನೂರ ಕುಟುಂಬದ ಹನ್ನೊಂದು ಸದಸ್ಯರು
ಬಂಧಿತ ವ್ಯಕ್ತಿಯಿಂದ ಲ್ಯಾಪ್ ಟಾಪ್ ಮತ್ತು ಪಾಸ್ ಪೋರ್ಟ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪ್ಯಾರಾಮಿಲಿಟರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಚೀನಾ ಪ್ರಜೆಯನ್ನು ಸಂಬಂಧಿದ ತನಿಖಾ ಸಂಸ್ಥೆ ವಿಚಾರಣೆ ನಡೆಸುತ್ತಿದೆ ಎಂದು ವರದಿ ವಿವರಿಸಿದೆ.
ಸೂಕ್ಷ್ಮ ಪ್ರಕರಣವಾದ ನಿಟ್ಟಿನಲ್ಲಿ ಬಂಧಿತ ಚೀನಾ ಪ್ರಜೆಯ ಹೆಸರು ಮತ್ತು ವಿವರಗಳನ್ನು ಬಹಿರಂಗಪಡಿಸಲು ಬಿಎಸ್ ಎಫ್ ಹಿರಿಯ ಅಧಿಕಾರಿಗಳು ನಿರಾಕರಿಸಿದ್ದಾರೆ. ವಿಚಾರಣೆಯ ನಂತರ ಸತ್ಯಾಸತ್ಯತೆ ಬಯಲಾದ ನಂತರ ಕೂಡಲೇ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಭದ್ರತಾ ವ್ಯವಸ್ಥೆಯ ವಿರುದ್ಧ ಅನುಮಾನಾಸ್ಪದ ಚಟುವಟಿಕೆಯಲ್ಲಿ ತೊಡಗಿದ್ದ ಚೀನಾ ಪ್ರಜೆಯನ್ನು ಗಮನಿಸಿದ ನಂತರ ಬಂಧಿಸಿ ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಮೂಲಗಳು ಹೇಳಿವೆ.