Advertisement

ಪೇಟಿಎಂ, ಪೇಯು ಕಚೇರಿಗಳ ಮೇಲೆ ದಾಳಿ?

10:33 PM Sep 14, 2022 | Team Udayavani |

ನವದೆಹಲಿ: ಚೀನ ಲೋನ್‌ ಆ್ಯಪ್‌ ಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಪೇಮೆಂಟ್‌ ಗೇಟ್‌ವೇಗಳಾದ ಪೇಟಿಎಂ ಮತ್ತು ಪೇಯು ಗೆ ಸೇರಿದ ವಿವಿಧ ಕಚೇರಿಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ.

Advertisement

ಕೆಲವು ಮಾಧ್ಯಮ ವರದಿಗಳ ಪ್ರಕಾರ ಮುಂಬೈ, ದೆಹಲಿ, ಗುರುಗ್ರಾಮ, ಲಕ್ನೋ ಮತ್ತು ಕೋಲ್ಕತ್ತಾದಲ್ಲಿರುವ ಕಚೇರಿಗಳ ಮೇಲೆ ನಡೆಸಲಾಗಿದೆ. ಆದರೆ ಈ ಕುರಿತು ಇಡಿ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿಲ್ಲ.

ಚೀನಾ ಲೋನ್‌ ಆ್ಯಪ್‌ ಗಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆ.3ರಂದು ಆನ್‌ಲೈನ್‌ ಪೇಮೆಂಟ್‌ ಗೇಟ್‌ವೇಗಳಾದ ರೇಜರ್‌ಪೇ ಪ್ರೈ. ಲಿ., ಕ್ಯಾಶ್‌ಪ್ರೀ ಪೇಮೆಂಟ್ಸ್‌ ಮತ್ತು ಪೇಟಿಎಂ ಪೇಮೆಂಟ್‌ ಸರ್ವೀಸಸ್‌ ಲಿ. ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿತ್ತು.

ಭಾರತದಲ್ಲಿ ಚೀನೀ ಪ್ರಜೆಗಳು ಅಕ್ರಮವಾಗಿ ಭಾರತೀಯ ನಿರ್ದೇಶಕರ ಹೆಸರಿನಲ್ಲಿ ಲೋನ್‌, ಬೆಟ್ಟಿಂಗ್‌, ಡೇಟಿಂಗ್‌ ಆ್ಯಪ್‌ ಕಂಪನಿ ತೆರೆಯುತ್ತಾರೆ. ಕೆಲವು ವರ್ಷಗಳ ನಂತರ ಚೀನೀ ಪ್ರಜೆಗಳು ಕಂಪನಿಯ ನಿರ್ದೇಶಕ ಸ್ಥಾನ ವಹಿಸುತ್ತಾರೆ. ನಂತರ ಕಂಪನಿ ಗಳಿಸಿದ ಆದಾಯವನ್ನು ಹಂತ-ಹಂತವಾಗಿ ಚೀನಾಗೆ ವರ್ಗಾಯಿಸುತ್ತಾರೆ ಎಂದು ಇತ್ತೀಚಿಗೆ ಇಡಿ ಅಧಿಕಾರಿಗಳು ಬಹಿರಂಗಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next