Advertisement
ಅಮೆರಿಕಕ್ಕೆ ಚೀನಾ ರಾಯಭಾರಿ ಆಗಿದ್ದ ಕಿನ್ ಗ್ಯಾಂಗ್ ಅವರನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಚೀನಾ ವಿದೇಶಾಂಗ ಸಚಿವರನ್ನಾಗಿ ನೇಮಿಸಲಾಯಿತು. ಇವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಪ್ತರಾಗಿದ್ದಾರೆ. ಚೀನಾ ಗೂಢಚರ್ಯೆ ಬಲೂನ್ ಕುರಿತು ಅಮೆರಿಕದ ವಿರೋಧವನ್ನು ಕಿನ್ ಸಮರ್ಥವಾಗಿ ಎದುರಿಸಿದ್ದರು.“ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಕಿನ್ ಗ್ಯಾಂಗ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ’ ಎಂದು ಚೀನಾ ಸರ್ಕಾರ ಹೇಳಿದೆ.