ನವದೆಹಲಿ: ಲಡಾಖ್‌ನ ಪೂರ್ವ ಭಾಗದ ಆಚೆ ಅಂದರೆ ಚೀನಾದ ಭೂಪ್ರದೇಶದಲ್ಲಿ ಡ್ರ್ಯಾಗನ್ ಸೇನೆಯ ಯುದ್ಧ ವಿಮಾನಗಳು ತಾಲೀಮು ನಡೆಸಿವೆ.
ಇದರ ಜತೆಗೆ ಅಲ್ಲಿ ದೇಶದ ಯುದ್ಧ ವಿಮಾನಗಳೂ ಹೆಚ್ಚಿನ ಪ್ರಮಾಣದಲ್ಲಿವೆ ಎಂದು “ಎಎನ್‌ಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಬೆಳವಣಿಗೆಗಳ ಮೇಲೆ ಭಾರತವು ನಿಗಾ ವಹಿಸಿದೆ ಎಂದೂ ಹೇಳಲಾಗಿದೆ.
ಜೆ-11 ಸೇರಿದಂತೆ 21-22 ಯುದ್ಧ ವಿಮಾನಗಳು ತಾಲೀಮು ನಡೆಸಿವೆ ಎಂದು ಸೇನಾ ಮೂಲಗಳು ತಿಳಿಸಿವೆ. ಭಾರತದ ಗಡಿ ಪ್ರದೇಶದಿಂದ ಆಚೆ ಇರುವ ಹೋಟನ್, ಗರ್ ಗುನ್ಸಾ ಮತ್ತು ಕಶYರ್ ವಾಯುನೆಲೆಗಳಿಂದ ಈ ಸಮರ ತಾಲೀಮು ನಡೆಸಲಾಗಿದೆ. ಇತ್ತೀಚೆಗಷ್ಟೇ ಅವುಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ತಾಲೀಮು ನಡೆಸಿದ ಸಂದರ್ಭದಲ್ಲಿ ವಿಮಾನಗಳು ತಮ್ಮ ದೇಶದ ಬಾಹ್ಯಾಕಾಶದ ಪ್ರದೇಶಕ್ಕೆ ಹಾರಾಟ ಸೀಮಿತಗೊಳಿಸಿದ್ದವು.
ಇದನ್ನೂ ಓದಿ :ತೆರಿಗೆ ವೆಬ್‌ಸೈಟ್‌ಗೆ ತಾಂತ್ರಿಕ ತೊಂದರೆ : ಸರಿಪಡಿಸಲು ಇನ್ಫೋಸಿಸ್‌ಗೆ ಸೂಚನೆ
ಐಎಎಫ್ ವಿಮಾನಗಳು ಕೂಡ ಆಗಾಗ ಭಾರತದ ವಾಯುಪ್ರದೇಶದಲ್ಲಿ ಸಮರ ತಾಲೀಮು ನಡೆಸುತ್ತವೆ.