ಮಣಿಪಾಲ: ಒಂದೆಡೆ ಚೀನಾ ದೇಶದ ಮೇಲೆ ವ್ಯಾವಹಾರಿಕ ನಿರ್ಬಂಧ ವಿಧಿಸಿ ಇನ್ನೊಂದೆಡೆ ಈ ಬಾರಿಯ ಐಪಿಎಲ್ ಕೂಟದ ಪ್ರಮುಖ ಪ್ರಾಯೋಜಕರನ್ನಾಗಿ ವಿವೋ ಕಂಪೆನಿಯನ್ನು ಮುಂದುವರಿಸಿರುವ ಬಿಸಿಸಿಐ ಮತ್ತು ಇದಕ್ಕೆ ಒಪ್ಪಿಗೆ ಸೂಚಿಸಿರುವ ಕೇಂದ್ರ ಸರಕಾರದ ದ್ವಂದ್ವ ನಿಲುವಿಗೆ ನೀವು ಏನನ್ನುತ್ತೀರಿ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ದವೂದ್ ಕೂರ್ಗ್: ಬಿಸಿಸಿಐ ಸೆಕ್ರೆಟರಿ ಯಾರು ಅಂತ ಗೊತ್ತು ತಾನೇ. ದೇಶದ ಘನತೆ ಇವರಿಗೆ ಮುಖ್ಯ ಆಗೋಲ್ಲ. ದುಡ್ಡು ಬಂದ್ರೆ ಸಾಕು. ಬಹಳಷ್ಟು ಭಕ್ತರು ಕೇಳುತ್ತಾರೆ ಅವರು ಪ್ರಾಯೋಜಕತ್ವ ಮಾಡಿದ್ರೆ ಅವರ ದುಡ್ಡು ನಮಗೆ ಬರುತ್ತೆ ಅಂತ. ಅಂಧ ಭಕ್ತರೇ ಕೇಳಿ, ಅವರ ದುಡ್ಡು ತಾತ್ಕಾಲಿಕವಾಗಿ ನಮಗೆ ಬಂದ್ರೂ ಇದರ 1000 ಪಟ್ಟು ಲಾಭ ಆ ಕಂಪನಿ ಮೊಬೈಲ್ ಮಾರಿ ನಮ್ಮ ದೇಶದ ಜನರಿಂದ ಲಾಭ ಮಾಡ್ಕೊತಾರೆ.ಏನೂ ಗೊತ್ತಿಲ್ದೆ, ಏನೂ ಲಾಭ ಇಲ್ದೆ ಅವರು ಪ್ರಯೋಜಕತ್ವ ಪಡೆದಿರೋದಿಲ್ಲ.
ವಿನಯ ಮೂರ್ತಿ: ನಮ್ಮ ಹಣದ ಹರಿವನ್ನು ನಿಲ್ಲಿಸಿ ಅವರ ಹಣದ ಹರಿವನ್ನು ಸ್ವಾಗತಿಸುವುದು ಬುದ್ಧಿವಂತಿಕೆ
ಗಿರೀಶ್ ಎನ್ ಎಸ್: ಮೊದಲು ನಮ್ಮ ಭಾರತದ ಪ್ರಜೆಗಳು ದೇಶಕ್ಕಾಗಿ ದೇಶಾಭಿಮಾನದಿಂದ ಐ.ಪಿ. ಎಲ್ ನೋಡುವುದನ್ನು ನಿಲ್ಲಿಸಲಿ ಇಂತಹ ವಿಷಯಗಳಿಗೆ .
ಸುರೇಶ್ ಕೆ ಸಿ: ಅವರ ಹಣವನ್ನು ಸದುಪಯೋಗ ಪಡಿಸಿಕೋಂಡರೇ ತಪ್ಪಿಲ್ಲ. ಪರವಾಗಿಲ್ಲ ಬಿಡಿ.