Advertisement

ಪ್ರೀತಿ, ಪ್ರೇಮಕ್ಕೆಂದೇ ಒಂದು ವಾರ ರಜೆ! ಚೀನದಲ್ಲಿ ಹೊಸ ನಿಯಮ ಜಾರಿ

11:54 PM Apr 02, 2023 | Team Udayavani |

ಬೀಜಿಂಗ್‌: ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವೆನ್ನಿಸಿಕೊಂಡಿರುವ ಚೀನದಲ್ಲಿ, ಈಗ ಜನನಪ್ರಮಾಣವೇ ಕುಸಿಯುತ್ತಿದೆ. ಇದರಿಂದ ಆ ದೇಶದಲ್ಲಿ ವೃದ್ಧರ ಪ್ರಮಾಣ ಏರಿ, ಯುವಕರ ಸಂಖ್ಯೆ ಇಳಿಕೆಯಾಗಿದೆ. ಇದರಿಂದ ಅಲ್ಲಿನ ಆಡಳಿತ ಮಾತ್ರವಲ್ಲ, ಶಿಕ್ಷಣ ಸಂಸ್ಥೆಗಳು ತಲೆಕೆಡಿಸಿಕೊಂಡು ಹಲವು ಯೋಜನೆಗಳನ್ನು ರೂಪಿಸುತ್ತಿವೆ. ಇದರಲ್ಲೊಂದು ಅತ್ಯಂತ ವಿಶೇಷವಾಗಿದೆ.

Advertisement

ಫ್ಯಾನ್‌ ಮೀ ಶೈಕ್ಷಣಿಕ ಸಮೂಹದಡಿಯಲ್ಲಿ ಬರುವ 9 ಕಾಲೇಜುಗಳು ಎ .1ರಿಂದ ಎ .7ರ ವರೆಗೆ ರಜೆಯನ್ನೇ ಘೋಷಿಸಿವೆ. ತಮ್ಮ ವಿದ್ಯಾರ್ಥಿಗಳಿಗೆ ಪ್ರಕೃತಿಯ ಸನಿಹ ಹೋಗಿ, ನಿಮ್ಮ ಜೀವನವನ್ನು ಆನಂದಿಸಿ ಎಂದು ಪರೋಕ್ಷವಾಗಿ ಸೂಚಿಸಿವೆ.

ಈ ಮೂಲಕ ವಿದ್ಯಾರ್ಥಿಗಳು ದೇಶದ ಜನಸಂಖ್ಯೆ ವೃದ್ಧಿಸಲು ಕೊಡುಗೆ ನೀಡಬೇಕೆಂದು ಅದರ ಆಶಯ. ಇದರಿಂದ ಎಷ್ಟು ಉಪಯೋಗವಾಗುತ್ತದೆ ಎಂದು ಕಾದು ನೋಡಬೇಕು. ಇನ್ನು ಸ್ಥಳೀಯ ಕಂಪನಿಗಳು, ಪ್ರಾಂತ್ಯಗಳು, ನಗರಗಳು ತಮ್ಮ ಉದ್ಯೋಗಿಗಳಿಗೆ ವಿವಾಹಕ್ಕೆಂದೇ 1 ತಿಂಗಳು ರಜೆ ನೀಡುತ್ತಿವೆ. ನಗರದ ಹುಡುಗಿಯರು ಹಳ್ಳಿಯ ವಯಸ್ಸಾದ ಹುಡುಗರನ್ನು ವಿವಾಹವಾಗುವಂತೆ ಪ್ರಚೋದಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next