Advertisement

ಕೋವಿಡ್ ನಾಲ್ಕನೇ ಅಲೆ : ನೈರುತ್ಯ ಚೀನಾ ಸಂಪೂರ್ಣ ಲಾಕ್ ಡೌನ್

05:29 PM Jul 07, 2021 | Team Udayavani |

ಯುನ್ನಾನ್ : ಮ್ಯಾನ್ಮಾರ್ ನೊಂದಿಗೆ ಡಿಯನ್ನು ಹಂಚಿಕೊಂಡಿರುವ ನೈರುತ್ಯ ಚೀನಾವು ಕೋವಿಡ್ ಸೋಂಕಿನ ನಾಲ್ಕನೇ ಅಲೆಯ ಕಾರಣದಿಂದಾಗಿ ಇಂದು (ಬುಧವಾರ, ಜುಲೈ 7) ಸಂಪೂರ್ಣ ಲಾಕ್ ಡೌನ್ ಗೆ ಮೊರೆ ಹೋಗಿದೆ.

Advertisement

ಯುನ್ನಾನ್ ಪ್ರಾಂತ್ಯದ ರುಯಿಲಿ ನಗರದಲ್ಲಿ ಕೆಲವು ಅಗತ್ಯ ವಸ್ತುಗಳ ಮಾರುಕಟ್ಟೆಗಳು, ಆಸ್ಪತ್ರೆಗಳು, ಔಷಧಾಲಯಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನು ಮುಚ್ಚಲಾಗಿದೆ. ಸೊಂಕು ಇಳಿಮುಖವಾಗುವ ತನಕ ಹೋಮ್ ಕ್ವಾರಂಟೈನ್ ಕಡ್ಡಾಯ ಎಂದು ಅಲ್ಲಿನ ಸರ್ಕಾರ ಆದೇಶಿಸಿರುವುದಾಗಿ ಅಲ್ಲಿನ ಸುದ್ದಿ ಸಂಸ್ಥೆ  ಕ್ಸಿನ್ಹುವಾ ವರದಿ ಮಾಡಿದೆ.

ಇದನ್ನೂ ಓದಿ : ಕೋವಿಡ್ ಸೋಂಕು ಹೆಚ್ಚಳ: ಮಹಾರಾಷ್ಟ್ರ ಸತಾರಾ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್

ಕಳೆದ ಎರಡು ಮೂರು ದಿನಗಳಿಂದ ಸ್ಥಳೀಯವಾಗಿ ನಾಲ್ಕನೇ ಅಲೆಯ ಕಾರಣದಿಂದಾಗಿ ಸೋಂಕುಗಳು ನಿರಂತರವಾಗಿ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿದೆ.

ಕಳೆದ ರಾತ್ರಿ (ಮಂಗಳವಾರ, ಜುಲೈ 6) 15 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಕೋವಿಡ್ ಸೋಂಕಿನ ಡೆಲ್ಟಾ ರೂಪಾಂತರವು ರುಯಿಲಿ ಪ್ರಾಂತ್ಯಗಳಲ್ಲಿ ಪತ್ತೆಯಾಗಿದ್ದು,

Advertisement

ಚೀನಾ ಮತ್ತು ಮ್ಯಾನ್ಮಾರ್‌ ನ ನಿವಾಸಿಗಳ ನಡುವಿನ ವ್ಯಾಪಾರ ವಹಿವಾಟುಗಳು ಹಾಗೂ ವಸ್ತುಗಳ ವಿನಿಮಯ, ಸಂಚಾರ ಕೂಡ ಆಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಕಾಣಿಸಿಕೊಳ್ಳುವುದಕ್ಕೆ ಕಾರಣವಾಗಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ :  ಸಂಪುಟ ಸರ್ಜರಿ :  ರಮೇಶ ಪೊಕ್ರಿಯಾಲ್, ಸದಾನಂದ ಗೌಡ ಸೇರಿ 12 ಮಂದಿ ರಾಜಿನಾಮೆ..!

Advertisement

Udayavani is now on Telegram. Click here to join our channel and stay updated with the latest news.

Next