Advertisement

VIRAL: ಅಮ್ಮನ ಬಗ್ಗೆ ದೂರು ಹೇಳಲು 130 ಕಿ.ಮೀ ದೂರ ಸೈಕಲ್‌ ತುಳಿದುಕೊಂಡೇ ಹೋದ 11ರ ಬಾಲಕ.!

11:00 AM Apr 12, 2023 | Team Udayavani |

ಬೀಜಿಂಗ್:‌ ಕೆಲವೊಮ್ಮೆ ಮನೆಯಲ್ಲಿ ಏನೋ ಸಣ್ಣಪುಟ್ಟ ವಿಚಾರದಲ್ಲಿ ಮನಸ್ತಾಪ ಉಂಟಾಗಿ ಮನೆ ಬಿಟ್ಟು ಆಚೆ ಹೋಗುತ್ತೇವೆ. ರಾತ್ರಿಯಾದ ಬಳಿಕ ಅಪ್ಪ – ಅಮ್ಮನ ನೆನಪಾಗಿ ಮನೆ ಕಡೆ ಹೋಗುತ್ತೇವೆ. ಬಾಲ್ಯದಲ್ಲಿ ಎಷ್ಟೋ ಸಲಿ ಈ ರೀತಿ ಮಾಡಿದ್ದೇವೆ ಅಲ್ವಾ?  ಇಂಥದ್ದೇ ಒಂದು ಘಟನೆ ಚೀನದಲ್ಲಿ ನಡೆದಿದೆ.

Advertisement

11 ವರ್ಷದ ಬಾಲಕನೊಬ್ಬ ತನ್ನ ಅಮ್ಮನ ಬಳಿ ಮನೆಯಲ್ಲಿ ಯಾವುದೋ ಒಂದು ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾನೆ. ಮಗನ ಮೇಲೆ ಅಮ್ಮ ಸಿಟ್ಟಾಗಿದ್ದಾರೆ. ಇದೇ ಸಿಟ್ಟಿನಲ್ಲಿ ಮಗ ಅಮ್ಮನ ಬಗ್ಗೆ ದೂರು ಹೇಳಲು ಅಜ್ಜಿ ಮನೆಗೆ ಹೊರಟ್ಟಿದ್ದಾನೆ. ಆತನ ಅಜ್ಜಿ ಮನೆ ಇರುವುದು 130 ಕಿ.ಮೀ ದೂರದಲ್ಲಿರುವ ಝೆಜಿಯಾಂಗ್‌ನ ಕೌಂಟಿಯಾದ ಮೀಜಿಯಾಂಗ್‌ನಲ್ಲಿ. ನಾವು ನೀವು ಆಗಿದ್ದರೆ ಬಸ್ಸಿನಲ್ಲೂ ಅಷ್ಟು ದೂರ ಹೋಗುವುದಕ್ಕೆ ಯೋಚನೆ ಮಾಡ್ತಾ ಇದ್ದಿವಿ. ಆದರೆ 11 ವರ್ಷದ ಈ ಬಾಲಕ ಅಮ್ಮನ ವಿರುದ್ಧ ದೂರನ್ನು ಹೇಳಲು ತನ್ನ ಸೈಕಲ್‌ ತುಳಿದುಕೊಂಡು 130 ಕಿ.ಮೀ ಸಾಗಿದ್ದಾನೆ.!

ಇದನ್ನೂ ಓದಿ: Raghupati Bhat: ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಬಗ್ಗೆ ರಘುಪತಿ ಭಟ್ ಹೇಳಿದ್ದೇನು?

ದೂರದ ಅಜ್ಜಿ ಮನೆಗೆ ಹೋಗಲು ಈತನಿಗೆ ಸರಿಯಾದ ದಾರಿಯೂ ಗೊತ್ತಿಲ್ಲ. ರಸ್ತೆಯಲ್ಲಿನ ಊರಿನ ಹೆಸರಿನ ಸೂಚನಾ ಫಲಕವನ್ನು ನೋಡಿ ಹೋಗಿದ್ದಾನೆ. ಈ ವೇಳೆ ಒಮ್ಮೆ ತಪ್ಪು ಮಾರ್ಗದಲ್ಲಿ ಸಾಗಿದ್ದಾನೆ. ಮನೆಯಿಂದ ತಂದಿದ್ದ ಬ್ರೆಡ್‌ , ನೀರನ್ನು ಕುಡಿದು ರಾತ್ರಿಯೂ ಪಯಣ ಬೆಳೆಸಿದ್ದಾನೆ.

ಪೊಲೀಸರು ಈತನನ್ನು ಪತ್ತೆ ಹಚ್ಚಿ ಹತ್ತಿರದ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆ ಬಳಿಕ ಆತನನ್ನು ವಿಚಾರಿಸಿದಾಗ ಪೊಲೀಸರಿಗೂ ಆತ ಸೈಕಲ್‌ ನಲ್ಲಿ ಅಮ್ಮನ ವಿರುದ್ಧ ಅಜ್ಜಿಗೆ ದೂರು ಹೇಳಲು ಬಂದಿದ್ದಾನೆ ಎನ್ನುವುದನ್ನು ಕೇಳಿ ಅಚ್ಚರಿ ಆಗಿದೆ.

Advertisement

ಸಂಜೆಯ ವೇಳೆಗೆ ಪೊಲೀಸರು ಠಾಣೆಗೆ ಬಾಲಕನ ತಾಯಿ ಹಾಗೂ ಅಜ್ಜಿಯನ್ನು ಕರೆದಿದ್ದಾರೆ.ಈ ಬಗ್ಗೆ ಮಾತನಾಡುವ ಬಾಲಕನ ತಾಯಿ, ಆತ ನನ್ನ ಬಳಿ ಅಜ್ಜಿ ಮನೆಗೆ ಹೋಗುತ್ತೇನೆ ಎಂದು ಬೆದರಿಸುತ್ತಿದ್ದ, ಆತ ಸುಮ್ಮನೆ ಹೇಳುತ್ತಿದ್ದಾನೆ ಅಂದುಕೊಂಡಿದ್ದೆ. ಆದರೆ ಈತ ಹೀಗೆ ಮಾಡುತ್ತಾನೆ ಅಂದುಕೊಂಡಿರಲಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next