Advertisement

ದೇಶೀಯ ಲಸಿಕೆ ಬಳಕೆಗೆ ಚೀನ ಸಮ್ಮತಿ

09:51 AM Aug 29, 2020 | Nagendra Trasi |

ಬೀಜಿಂಗ್‌: ದೇಶೀಯವಾಗಿ ಸಂಶೋಧಿಸುತ್ತಿರುವ ಕೆಲವು ಕೊರೊನಾ ಲಸಿಕೆಗಳನ್ನು ತುರ್ತು ಬಳಕೆ ಘೋಷಣೆಯಡಿ ನಾಗರಿಕರಿಗೆ ನೀಡಲು ಚೀನ ಮುಂದಾಗಿದೆ. ಕೆಲವು ಆಯ್ದ ದೇಶೀಯ ಕಂಪನಿಗಳು ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಗಳ ತುರ್ತು ಬಳಕೆಯನ್ನು ಚೀನ ಅಧಿಕೃತಗೊಳಿಸಿದೆ ಎಂದು ಚೀನದ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಚೀನದ ಲಸಿಕೆ ನಿರ್ವಹಣಾ ಕಾನೂನನ್ನು ಆಧರಿಸಿದ ತುರ್ತು ಬಳಕೆಯ ಘೋಷಣೆಯಡಿ, ಸೀಮಿತ ಅವಧಿಯಲ್ಲಿ ಸೋಂಕಿಗೆ ತುತ್ತಾಗಿರುವ ಜನರು ಬಳಕೆ ಮಾಡಲು ಅನುಮತಿ ನೀಡಲಾಗಿದೆ.

ತುರ್ತು ಬಳಕೆಯನ್ನು ಉತ್ತಮವಾಗಿ ನಿಯಂತ್ರಿಸಲಾಗಿದೆಯೆ ಮತ್ತು ಮೇಲ್ವಿಚಾರಣೆ  ಡೆಸಲಾಗುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸಮಿತಿ ಕೂಡ ರಚಿಸಲಾಗಿದ್ದು, ಪರಿಹಾರ ಯೋಜನೆಯೂ ಸೇರಿದಂತೆ ಹಲವಾರು ಪ್ಯಾಕೇಜ್‌ಗಳನ್ನು ಒಳಗೊಂಡ ತುರ್ತು ಬಳಕೆ ಘೋಷಣೆ ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಚೀನದ ಕೊರೊನಾ ವೈರಸ್‌ ಅಭಿವೃದ್ಧಿ ಕಾರ್ಯಪಡೆ ಮುಖ್ಯಸ್ಥ ಜೆನ್‌ ಜಾಂಗ್ವಿ, ತುರ್ತು ಬಳಕೆ ಆದೇಶದನ್ವಯ ಕೇವಲ ಸೀಮಿತ ಸೋಂಕಿತರಿಗೆ ಮಾತ್ರ ಲಸಿಕೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ಜುಲೈ 22ರಂದೇ ಚೀನ ಕೊರೊನಾ ಲಸಿಕೆಗಳ ಬಳಕೆಯನ್ನು ಅಧಿಕೃತಗೊಳಿಸಿದೆ. ಆದರೆ ಈ ಎಲ್ಲ ಲಸಿಕೆಗಳು ಸಂಶೋಧನಾ ಹಂತದಲ್ಲಿದ್ದು, ಅವುಗಳಲ್ಲಿ ಕೆಲವು ಆಯ್ದ ಲಸಿಕೆಗಳನ್ನು ಮಾತ್ರ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಲಸಿಕೆ ನಿರ್ವಹಣೆಯ ಚೀನದ ಕಾನೂನಿನ ಪ್ರಕಾರ, ತೀವ್ರವಾದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಸಂಭವಿಸಿದಾಗ, ವೈದ್ಯಕೀಯ ಮತ್ತು ಸಾಂಕ್ರಾಮಿಕ ತಡೆಗಟ್ಟುವ ಸಿಬಂದಿ, ಯೋಧರು ಹಾಗೂ ಸ್ಥಿರ ನಗರ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡುವ ಇತರ ಜನರನ್ನು ರಕ್ಷಿಸಲು ಕ್ಲಿನಿಕಲ್‌ ಪ್ರಯೋಗಗಳಲ್ಲಿನ ಲಸಿಕೆಗಳನ್ನು ಸೀಮಿತ ವ್ಯಾಪ್ತಿಯಲ್ಲಿ ಬಳಸಬಹುದು ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next