ಚಿಂಚೋಳಿ : ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಅನೇಕ ಗ್ರಾಮಗಳಲ್ಲಿ ರಸ್ತೆಗಳು ಹದಗೆಟ್ಟಿರುವುದರಿಂದ ವಾಹನಗಳ ಸಂಚಾರಕ್ಕೆ ಭಾರಿ ಅಡ್ಡಿಯಾಗುತ್ತಿದೆ.
ತಾಲೂಕಿನಲ್ಲಿ ಆರ್ಭಟ ದಿಂದ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ರೈತರ ಹೊಲದಲ್ಲಿ ಬೆಳೆದು ನಿಂದ ಉದ್ದು, ಹೆಸರು, ತೊಗರಿ, ಸೋಯಾ, ಸಜ್ಜೆ, ಮೆಕ್ಕೆಜೋಳ ಅಲ್ಲದೆ ತರಕಾರಿ ಬೆಳೆಗಳು ಟೊಮ್ಯಾಟೊ, ಉಳ್ಳಾಗಡ್ಡಿ, ಅರಶಿಣ, ಶುಂಠಿ ಬೆಳೆಗಳು ನೀರಿನಲ್ಲಿ ಕೊಳೆಯುತ್ತಿವೆ.
ಅನೇಕ ಗ್ರಾಮದಲ್ಲಿ ಹೆಸರು ಬೆಳೆ ಹೂವು ಕಾಯಿ ಆಗುತ್ತಿದೆ. ಆದರೆ ಮಳೆಯ ಬಿರುಸಾದ ಹನಿಗಳಿಂದ ಹೂವು ಉದುರಿ ಹೋಗುತ್ತಿದೆ ಇದರಿಂದಾಗಿ ಕೈಗೆ ಬಂದ ಬಾಯಿಗೆ ಬಾರದಂತೆ ಆಗಿದೆ ರೈತರ ಪರಿಸ್ಥಿತಿ.
ರವಿವಾರ ಮತ್ತು ಸೋಮವಾರ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕೆಳದಂಡೆ ಮುಲ್ಲಾಮಾರಿ ಜಲಾಶಯ ಮತ್ತು ಚಂದ್ರಂಪಳ್ಳಿ ಜಲಾಶಯ ಸಂಪೂರ್ಣವಾಗಿ ತುಂಬಿ ತುಳುಕುತ್ತಿವೆ ಹೆಚ್ಚಿನ ಪ್ರಮಾಣದಲ್ಲಿ ನೀರು ಮುಲ್ಲಾಮಾರಿ ನದಿಗೆ ಹರಿದು ಬಿಡಲಾಗುತ್ತಿದೆ.
ತಾಲೂಕಿನಲ್ಲಿ ಮಳೆ ಅಬ್ಬರಕೆ ರೈತರ ಕಂಗಾಲಾಗಿ ಹೋಗಿದ್ದಾರೆ ಜನಜೀವನ ಅಸ್ತವ್ಯಸ್ಥವಾಗಿದೆ. ಅಲ್ಲದೆ ಸಣ್ಣ ನೀರಾವರಿ ಕೆರೆಗಳು ಭರ್ತಿಯಾಗಿ ಕೋಡಿಗಳ ಮೂಲಕ ನೀರು ಹರಿಯುತ್ತಿದೆ.
ಇದನ್ನೂ ಓದಿ : ಮಂಗಳೂರು : ಮಕ್ಕಳಲ್ಲಿ ವೈರಲ್ ಜ್ವರ, ಜಾಗ್ರತಾ ಕ್ರಮಕ್ಕೆ ಸೂಚನೆ