Advertisement

ನರೇಗಾದಡಿ ಕೆಲಸ ನೀಡಲು ಮನವಿ

03:21 PM May 01, 2020 | Naveen |

ಚಿಂಚೋಳಿ: ತಾಲೂಕಿನ ವಿವಿಧ ಸಮಸ್ಯೆ ಈಡೇರಿಸುವಂತೆ ತಾಲೂಕು ನಾಗರಿಕ ವೇದಿಕೆ ಮುಖಂಡರು ತಹಶೀಲ್ದಾರ್‌ ಮುಖಾಂತರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅಂತ್ಯೋದಯ ಪಡಿತರ ಚೀಟಿದಾರರಿಗೆ ಉಚಿತವಾಗಿ ಹಾಲು ಕೊಡಲಾಗುತ್ತಿದೆ. ಬಿಪಿಎಲ್‌ ಕಾರ್ಡುದಾರರಿಗೆ ನೀಡುತ್ತಿಲ್ಲ. ವಿವಿಧ ಪ್ರದೇಶಗಳಲ್ಲಿ ಆಗಮಿಸಿದ ಕೂಲಿ ಕಾರ್ಮಿಕರಿಗೆ ಮನರೇಗಾ ಯೋಜನೆ ಅಡಿಯಲ್ಲಿ ಕೆಲಸ ಕೊಡಿಸಬೇಕು. ವಿದ್ಯುತ್‌ ಬಳಕೆದಾರರಿಗೆ ಬಿಲ್‌ ತುಂಬಲು ಎರಡು ತಿಂಗಳ ಕಾಲಾವಕಾಶ ಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

Advertisement

ಮಿರಿಯಾಣ ಕಲ್ಲುಗಣಿ ಕೆಲಸ ಪ್ರಾರಂಭಿಸಿ ಕಾರ್ಮಿಕರಿಗೆ ಉದ್ಯೋಗ ಕೊಡಬೇಕು. ಲೋಕೋಪಯೋಗಿ ಮತ್ತು ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ಇಲಾಖೆ ವ್ಯಾಪ್ತಿಯಲ್ಲಿ ಸ್ಥಗಿತವಾಗಿರುವ
ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಗ್ರೇಡ್‌2 ತಹಶೀಲ್ದಾರ್‌ ಮಾಣಿಕರಾವ್‌ ಘತ್ತರಗಿಗೆ ಮನವಿ ಸಲ್ಲಿಸಿದರು. ಸಂತೋಷ ಗುತ್ತೇದಾರ, ಕೆ.ಎಂ. ಬಾರಿ, ಆರ್‌. ಗಣಪತರಾವ್‌, ಕೃಷ್ಣಾ ಬಿರಾದಾರ, ಪ್ರತಾಪರೆಡ್ಡಿ, ಮತೀತ ಸೌದಾಗರ, ಮಹೇಶ ಗಾಲಿ, ಬಸವರಾಜ ಕಡಬೂರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next