Advertisement

Chincholi: ಎಲ್ಲೆಡೆ ಭಾರೀ ಮಳೆ; ತುಂಬಿ ಹರಿಯುತ್ತಿರುವ ಜಲಪಾತಗಳು

12:16 PM Jul 21, 2023 | Team Udayavani |

ಚಿಂಚೋಳಿ: ತಾಲೂಕಿನ ಕುಂಚಾವರಂ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವುದರಿಂದ ಕುಂಚಾವರಂ ಎತ್ತಪೋತ‌ಜಲಧಾರೆ ಧುಮ್ಮಿಕ್ಕಿ‌ ಮೈದುಂಬಿ‌‌ ಹರಿಯುತ್ತಿದೆ.

Advertisement

ಕುಂಚಾವರಂ ಗಡಿಪ್ರದೇಶ‌ ವನ್ಯಜೀವಿ ಅರಣ್ಯ ಪ್ರದೇಶದ ವೆಂಕಟಾಪುರ, ಸಂಗಾಪುರ, ಕುಸರಂಪಳ್ಳಿ, ಚುನ್ನಾಭಟ್ಟಿ ತಾಂಡಾ, ಕೊಹಿರ, ಮೊಗಡಮಪಳ್ಳಿ, ಗೊಟ್ಟಂಗೊಟ್ಟ ಗ್ರಾಮಗಳಲ್ಲಿ ಜಿಟಿಜಿಟಿಯಾಗಿ‌ ಬಿರುಸಿನ ‌ಮಳೆ ಆಗಿದೆ.

ಸೋಮವಾರ 80 ಮಿಮಿ ಮತ್ತು ಮಂಗಳವಾರ 70 ಮಿಮಿ ಮಳೆಯಾಗಿದೆ. ಕುಂಚಾವರಂ ವನ್ಯಜೀವಿ ಧಾಮ ಹಚ್ಚ ಹಸುರಿನ ಗಿಡಮರಗಳ ಮಧ್ಯೆ ಹರಿಯುವ ಎತ್ತಪೋತ ಜಲಪಾತ ಪ್ರವಾಸಿಗರಿಗೆ ಕೈ ಬೀಸಿ‌ ಕರೆಯುತ್ತಿದೆ.

ಬುಧವಾರ ಮೋಡ ಕವಿದ ವಾತಾವರಣ ಮುಂದುವರೆದಿತ್ತು. ತಾಲೂಕಿನ ಕೆಳದಂಡೆ ‌ಮುಲ್ಲಾಮಾರಿ ಜಲಾಶಯ ‌ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕವಾಗಿ ‌ಮಳೆ ಬೀಳುತ್ತಿದೆ. ಜಲಾಶಯದಲ್ಲಿ ಒಳ ಹರಿವು ಉಂಟಾಗುತ್ತಿರುವ ‌ಕಾರಣ ಬುಧವಾರ ರಾತ್ರಿಯಲ್ಲಿ ಮುಲ್ಲಾಮಾರಿ ನದಿಗೆ‌ ನೀರು ಹರಿ‌ಬಿಡಲಾಗುತ್ತಿದೆ ಎಂದು ಎ.ಇ.ಇ. ಅರುಣಕುಮಾರ ತಿಳಿಸಿದ್ದಾರೆ.

Advertisement

ನದಿಯ ಪಾತ್ರದಲ್ಲಿ ‌ಇರುವ‌ ಚಿಮ್ಮನಚೋಡ, ತಾಜಲಾಪುರ, ಕನಕಪುರ, ಗಾರಂಪಳ್ಳಿ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ, ಅಣವಾರ, ಪೊಲಕಪಳ್ಳಿ, ಗರಗಪಳ್ಳಿ, ಇರಗಪಳ್ಳಿ, ಕರ್ಚಖೇಡ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು. ನದಿಗೆ‌ ಜಾನುವಾರು ಬಿಡಬಾರದು ಮತ್ತು ಬಟ್ಟೆಗಳನ್ನು ತೊಳೆಯುವುದಕ್ಕಾಗಿ ಹೋಗಬಾರದು ಎಂದು ಗ್ರಾಮಸ್ಥರಿಗೆ ಡಂಗೂರ ಮೂಲಕ ಸೂಚನೆ ನೀಡಲಾಯಿತು. ಈ ಕುರಿತು ಕೆಳದಂಡೆ ಮುಲ್ಲಾಮಾರಿ ಯೋಜನೆ ಎಇಇ ಅರುಣ‌ ಸಾರ್ವಜನಿಕರಿಗೆ ‌ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next