Advertisement
ತಾಲೂಕಿನ ದೇಗಲಮಡಿ, ಗರಗಪಳ್ಳಿ, ಚಿಂಚೋಳಿ ಪಟ್ಟಣದ ಹರಿಜನವಾಡ, ಛೋಟಿದರ್ಗಾ, ಬಡಿದರ್ಗಾ ಬಡಾವಣೆಯ ಅನೇಕ ಮನೆಗಳಲ್ಲಿ ಮುಲ್ಲಾಮಾರಿ ನದಿಯ ಪ್ರವಾಹ ನೀರು ನುಗ್ಗಿದೆ.
Related Articles
Advertisement
ತಾಲೂಕಿನ ಕೆರೋಳಿ, ಬೆನಕನಹಳ್ಳಿ, ಶಿರೋಳಿ, ಕೊರಡಂಪಳ್ಳಿ, ಗರಗಪಳ್ಳಿ, ಇರಗಪಳ್ಳಿ, ಅಣವಾರ, ಪೊಲಕಪಳ್ಳಿ ಗ್ರಾಮಗಳಲ್ಲಿ ನದಿಯ ನೀರು ನುಗ್ಗಿದ್ದರಿಂದ ಜನರು ಭಯಭೀತರಾಗಿದ್ದಾರೆ.
ತಾಲೂಕಿನಲ್ಲಿ ಧಾರಾಕಾರವಾಗಿ ಸುರಿಯುವ ಮಳೆಗೆ ಕೆಳದಂಡೆ ಮುಲ್ಲಾಮಾರಿ ಜಲಾಶಯ ಒಳಹರಿವು ಹೆಚ್ಚಿದ್ದು, ನದಿಗೆ ನಾಲ್ಕು ಗೇಟ್ ಮೂಲಕ ಆರು ಸಾವಿರ ಕ್ಯೂಸೆಕ್ ನೀರು ಬಿಡಲಾಯಿತು.
ನದಿ ದಂಡೆಯ ಚಿಮ್ಮನಚೋಡ, ತಾಜಲಾಪುರ, ಕನಕಪುರ, ಗೌಡನಹಳ್ಳಿ, ನಿಮಾಹೊಸಳ್ಳಿ, ಗರಗಪಳ್ಳಿ, ಇರಗಪಳ್ಳಿ, ಚಂದಾಪುರ ಬ್ಯಾರೇಜ್ ಜಲಾವೃತವಾಗಿರುವುದರಿಂದ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಆಯಿತು.
ಕುಂಚಾವರಂ ವನ್ಯಜೀವಿ ಧಾಮದ ಅರಣ್ಯ ಪ್ರದೇಶದಲ್ಲಿ ಜೋರಾಗಿ ಮಳೆಯಾಗಿರುವ ಕಾರಣ ಚಂದ್ರಂಪಳ್ಳಿ ಜಲಾಶಯದಲ್ಲಿ ಒಳಹರಿವು ಉಂಟಾಗಿದ್ದರಿಂದ 4900 ಕ್ಯೂಸೆಕ್ ನೀರು ಹೊರಗೆ ಬಿಡಲಾಯಿತು ಎಂದು ಎಇಇ ಚೇತನ ಕಳಸ್ಕರ ಹೇಳಿದ್ದಾರೆ.
ಪಟ್ಟಣದಲ್ಲಿ ವ್ಯಾಪಕವಾಗಿ ಮಳೆಗೆ ಮುತ್ತುಲ ನಾಲಾ ಸಂಪೂರ್ಣವಾಗಿ ತುಂಬಿ ಹರಿಯುತ್ತಿದೆ. ಚಂದ್ರಂಪಳ್ಳಿ,ಕೆಳದಂಡೆ ಮುಲ್ಲಾಮಾರಿ ಜಲಾಶಯಗಳಿಂದ ಹರಿದು ಬಿಟ್ಟಿರುವ ನೀರಿನಿಂದ ಪ್ರವಾಹ ಉಂಟಾಗಿ ನದಿಪಾತ್ರದ ಗ್ರಾಮಸ್ಥರು ತೊಂದರೆ ಪಡಬೇಕಾಗಿದೆ.