Advertisement
ದೇಶದ ಸೇನಾಪಡೆ ಹೈ ಅಲರ್ಟ್ ಆಗಿದ್ದು, ನಿಮ್ಮೆಲ್ಲಾ ಮನಸ್ಸು ಮತ್ತು ಶಕ್ತಿಯನ್ನು ಯುದ್ಧದ ಸಿದ್ಧತೆಗೆ ವಿನಿಯೋಗಿಸಬೇಕು ಎಂದು ಕ್ಸಿ ನಿರ್ದೇಶನ ನೀಡಿರುವುದಾಗಿ ವರದಿ ವಿವರಿಸಿದೆ.
Related Articles
Advertisement
ಅಮೆರಿಕ ಗುರಿ?
ಅಮೆರಿಕದ ಯುದ್ಧ ನೌಕೆ ತೈವಾನ್ ಜಲಸಂಧಿಯಲ್ಲಿ ಸಂಚರಿಸಿದ್ದು, ಅಮೆರಿಕ ಮತ್ತು ಚೀನಾ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ ಎಂದು ವರದಿ ಹೇಳಿದೆ. ಅಮೆರಿಕದ ಕ್ಷಿಪಣಿ ನಾಶಕ ಯುಎಸ್ ಎಸ್ ಅಕ್ಟೋಬರ್ 14ರಂದು ತೈವಾನ್ ಜಲಸಂಧಿ ಮೂಲಕ ಹಾದು ಹೋಗಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಚೀನಾ, ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ ಎಂದು ವರದಿ ಹೇಳಿದೆ.
ತೈವಾನ್ ನಲ್ಲಿ ಅಮೆರಿಕ ಯುದ್ಧ ನೌಕೆ ಸಂಚರಿಸಿರುವ ಘಟನೆ ಕಾಕತಾಳೀಯ ಎಂಬಂತೆ ಕ್ಸಿ ಜಿನ್ ಪಿಂಗ್ ಯುದ್ಧಕ್ಕೆ ಸಿದ್ದರಾಗಿ ಎಂಬ ಹೇಳಿಕೆ ನೀಡಿರುವುದು ಮೂರನೇ ಜಾಗತಿಕ ಯುದ್ಧದ ಮುನ್ಸೂಚನೆಯೇ ಎಂಬ ಬಗ್ಗೆ ವಿಶ್ಲೇಷಿಸಲಾಗುತ್ತಿದೆ.
ಲಡಾಖ್ ನಲ್ಲಿಯೂ ನಿಲ್ಲದ ಜಟಾಪಟಿ:
ಲಡಾಖ್ ಗಡಿಯಲ್ಲಿಯೂ ಸತತವಾಗಿ ಕಳೆದ ಮೂರು ತಿಂಗಳಿನಿಂದ ಭಾರತ ಮತ್ತು ಚೀನಾ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಅಷ್ಟೇ ಅಲ್ಲ ಗಡಿ ಪ್ರದೇಶದಲ್ಲಿ ಭಾರತ ಸೇನೆಯನ್ನು ಭಾರೀ ಪ್ರಮಾಣದಲ್ಲಿ ರವಾನಿಸಿದೆ. ಚೀನಾ ಕೂಡಾ ಸೇನೆಯನ್ನು ನಿಯೋಜಿಸಿದೆ. ಯುದ್ಧ ವಿಮಾನ, ಯುದ್ಧ ಟ್ಯಾಂಕ್, ರಫೇಲ್ ನಿಯೋಜನೆ ಯುದ್ಧದ ಭೀತಿಯನ್ನು ಮೂಡಿಸಿದೆ ಎಂದು ವರದಿ ತಿಳಿಸಿದೆ.