ಬೀಜಿಂಗ್: ಚೀನಾದ ಕೆಲ ನಗರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಬೆನ್ನಲ್ಲೇ ಅಲ್ಲಿನ ಮೂರು ಪ್ರಮುಖ ನಗರಗಳನ್ನು ಲಾಕ್‌ಡೌನ್ ಮಾಡಲಾಗಿದೆ.
ಅಲ್ಲಿ ಕೊರೊನಾ ಸೋಂಕು ದೃಢವಾಗಿರುವ ಸೋಂಕಿತರನ್ನು ಮೆಟಲ್ ಬಾಕ್ಸ್‌ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ ಎನ್ನುವ ಸುದ್ದಿ ಇದೀಗ ಹರಿದಾಡಿದೆ.
ಬಿಬಿಸಿ ವರದಿ ಪ್ರಕಾರ, ಪ್ರಮುಖ ನಗರಗಳಲ್ಲಿ ಕ್ವಾರಂಟೈನ್ ಕ್ಯಾಂಪ್ ಮಾಡಲಾಗಿದ್ದು, ಅಲ್ಲಿ ಸಾವಿರಾರು ಮೆಟಲ್ ಬಾಕ್ಸ್‌ಗಳನ್ನು ಇಡಲಾಗಿದೆ.
ಇದನ್ನೂ ಓದಿ:ಯೋಗಿ ಆದಿತ್ಯನಾಥ್ ರನ್ನು ಅಯೋಧ್ಯೆಯಿಂದ ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ?
ಬಾತ್‌ರೂಂ, ಎಸಿ ಸೇರಿ ಅನೇಕ ಸೌಲಭ್ಯವಿರುವ ಮೆಟಲ್ ಬಾಕ್ಸ್‌ನಲ್ಲಿ ಸೋಂಕಿತರನ್ನು 2 ವಾರಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತಿದೆ ಎನ್ನಲಾಗಿದೆ. ಸಾಲಾಗಿ ಇಡಲಾಗಿರುವ ಮೆಟಲ್ ಬಾಕ್ಸ್‌ಗಳ ವಿಡಿಯೋ ಕೂಡ ಹರಿದಾಡಿದೆ.