Advertisement

China: ಚೀನದ ಜನಸಂಖ್ಯೆ ಕುಸಿತ; ಆರ್ಥಿಕತೆ ಶೇ.5.2ರಷ್ಟು ವೃದ್ಧಿ

12:10 AM Jan 18, 2024 | Team Udayavani |

ಬೀಜಿಂಗ್‌: ಜಗತ್ತಿಗೇ ಕೋವಿಡ್‌ ಸೋಂಕು ಹಬ್ಬಿಸಿ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಚೀನ ಜನಸಂಖ್ಯೆ ಕುಸಿತವನ್ನು ಅನುಭವಿಸಿದೆ. ಸತತ ಎರಡನೇ ವರ್ಷ ಕೂಡ ಆ ದೇಶದ ಒಟ್ಟು ಜನಸಂಖ್ಯೆ 20 ಲಕ್ಷ ಕಡಿಮೆಯಾಗಿದೆ. ಆದರೆ 2022ಕ್ಕೆ ಹೋಲಿಸಿದರೆ, ಚೀನ ಆರ್ಥಿಕತೆ ಶೇ.5.2ರಷ್ಟು ವೃದ್ಧಿಯಾಗಿದೆ.

Advertisement

ಕೋವಿಡ್‌ ಹಾವಳಿ ಹೆಚ್ಚಾಗಿದ್ದ ಸಂದರ್ಭದಲ್ಲಿ ಚೀನದಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ವಾಪಸ್‌ ಪಡೆದ ನಂತರವೂ ಜನಸಂಖ್ಯೆ ವೃದ್ಧಿಯಾಗುವಲ್ಲಿ ನೆರವಾಗಿಲ್ಲ. ಜನನ ಪ್ರಮಾಣಕ್ಕಿಂತಲೂ ಸಾವಿನ ಸಂಖ್ಯೆ ಹೆಚ್ಚಾಗಿದೆ. ಚೀನದಲ್ಲಿ ಕಳೆದ ವರ್ಷ 11.1 ಮಿಲಿಯನ್‌ ಮಂದಿ ಜನರು ಅಸುನೀಗಿದ್ದರು. 2022ರಲ್ಲಿ ಜನರ ಸಾವಿನ ಪ್ರಮಾಣ 10.41 ಮಿಲಿಯನ್‌ ಆಗಿತ್ತು. 1961ರ ಬಳಿಕ ಮೊದಲ ಬಾರಿಗೆ 2022ರಿಂದ ಡ್ರ್ಯಾಗನ್‌ ರಾಷ್ಟ್ರದಲ್ಲಿ ಜನಸಂಖ್ಯಾ ಪ್ರಮಾಣ ಕುಸಿತ ಶುರುವಾಗಿತ್ತು.

ಸತತ ಏಳನೇ ವರ್ಷ ಜನನ ಪ್ರಮಾಣ ಕುಸಿತಗೊಂಡಿದೆ. ಸರ್ಕಾರದ ಪ್ರಕಾರ ಕಳೆದ ವರ್ಷ 9 ಮಿಲಿಯನ್‌ ಮಕ್ಕಳು ಜನಿಸಿದ್ದಾರೆ. 2016ಕ್ಕೆ ಹೋಲಿಕೆ ಮಾಡಿದರೆ ಇದು ಅರ್ಧದಷ್ಟಾಗಿದೆ. ಚೀನ ಈಗ ಪ್ರತಿ 1 ಸಾವಿರ ಮಂದಿಗೆ ಶೇ. 6.39 ಫ‌ಲವತ್ತತೆ ಹೊಂದಿದೆ.

ಜಿಡಿಪಿ ಕೂಡ ಚೇತರಿಕೆ: ಚೀನದ ಜಿಡಿಪಿ ಚೇತರಿಕೆ ಕಂಡಿದೆ. 2022-23ರ ನಾಲ್ಕನೇ ತ್ತೈಮಾಸಿಕಕ್ಕೆ ಹೋಲಿಸಿದರೆ 2023-24ರ ನಾಲ್ಕನೇ ತ್ತೈಮಾಸಿಕದಲ್ಲಿ ಜಿಡಿಪಿ ಶೇ.5.2ರಷ್ಟು ಏರಿಕೆಯಾಗಿದೆ. ಚೀನ ಈ ಅವಧಿಯಲ್ಲಿ ಶೇ.5ರಷ್ಟು ಜಿಡಿಪಿ ಏರಿಕೆಯ ಗುರಿ ಹೊಂದಿತ್ತು. ಗುರಿಗೂ ಮೀರಿ ಜಿಡಿಪಿ ಏರಿಕೆ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next