Advertisement

ಚೀನಾದ ಮತ್ತೂಂದು ರೈಲು ಸಾಹಸ

03:45 AM Jul 06, 2017 | Team Udayavani |

ಬೀಜಿಂಗ್‌:  ರೈಲ್ವೇ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಚೀನಾ ಇದೀಗ ಮತ್ತೂಂದು ಅತಿ ವೆಚ್ಚದಾಯಕ, ಅತಿ ಸವಾಲಿನ ರೈಲು ಮಾರ್ಗ ನಿರ್ಮಾಣಕ್ಕೆ ಮುಂದಾಗಿದೆ. 

Advertisement

ಚೀನಾದ ಸಿಚುವಾನ್‌ನಿಂದ ಟಿಬೆಟ್‌ಗೆ ಸಂಪರ್ಕ ಕಲ್ಪಿಸುವ ರೈಲ್ವೇ ಮಾರ್ಗ ಇದು. ಈ ಮೂಲಕ ಟಿಬೆಟ್‌ಗೆ ಎರಡನೇ ರೈಲು ಮಾರ್ಗ ನಿರ್ಮಿಸಲು ಚೀನಾ ಮುಂದಾಗಿದೆ. ಈಗಾಗಲೇ ಕ್ವಿಂಘೈ-ಟಿಬೆಟ್‌ ಪ್ಲೇಟು ಮಧ್ಯೆ ರೈಲ್ವೇ ಸಂಪರ್ಕವಿದ್ದು, ಅತಿ ಅಪಾಯಕಾರಿ ಭೂ ಪ್ರದೇಶದಲ್ಲಿ ಇದು ಹಾದು ಹೋಗುತ್ತದೆ. ಈ ರೈಲ್ವೇ ಮಾರ್ಗ ಚೀನಾದ ತಾಂತ್ರಿಕ ಪರಿಣತಿಗೆ ಸಾಕ್ಷಿಯಾಗಿದೆ. 

ಸಿಚುವಾನ್‌-ಟಿಬೆಟ್‌ ರೈಲ್ವೇ ಮಾರ್ಗ ಜಗತ್ತಿನಲ್ಲೇ ಅತಿ ಸವಾಲಿನ ನಿರ್ಮಾಣ ಕಾಮಗಾರಿಯಾಗಿರಲಿದೆ. ಇದಕ್ಕಾಗಿ ಚೀನಾ ಬರೋಬ್ಬರಿ 2.30 ಲಕ್ಷ ಕೋಟಿ ರೂ.ಗಳನ್ನು ವ್ಯಯಿಸಲು ಸಿದ್ಧವಾಗಿದೆ. 1,700 ಕಿ.ಮೀ. ದೂರದ ರೈಲ್ವೇ ಮಾರ್ಗ ಇದಾಗಿದ್ದು, ಜಗತ್ತಿನಲ್ಲೇ ಅತಿ ದುರ್ಗಮ ಎನಿಸಿಕೊಂಡ ಪ್ರದೇಶಗಳನ್ನು ಹಾದು ಹೋಗಿ, ಸಿಚುವಾನ್‌ನ ಚೆಂಗುxವಿನಿಂದ ಟಿಬೆಟ್‌ನ ಲಾಸಾವನ್ನು ಸಂಪಕಿಸಲಿದೆ. 

ಚೀನಾದ ಎಯೂìನ್‌ ಎಂಜಿನಿಯರಿಂಗ್‌ ಗಈ ರೈಲ್ವೇ ಮಾರ್ಗ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲಿದೆ. ಮಾರ್ಗದಲ್ಲಿ ಶೇ.80  ರಷ್ಟು ಸುರಂಗ ಮತ್ತು ಸೇತುವೆಗಳು ಇರಲಿವೆ. 4 ಸಾವಿರ ಅಡಿಗೂ ಹೆಚ್ಚು ಎತ್ತರದ ಪರ್ವತಗಳನ್ನು, 13 ಪ್ರಮುಖ ನದಿಗಳನ್ನು ರೈಲ್ವೇ ಮಾರ್ಗ ಹಾದುಹೋಗಲಿದೆ ಎಂದು ಕಂಪನಿ ಇಂಜಿನಿಯರ್‌ಗಳು ಹೇಳಿದ್ದಾರೆ.  ಇದು ಟಿಬೆಟ್‌ ಮಧ್ಯ ಚೀನಾವನ್ನು ಸಂಪರ್ಕಿ ಸಲು ನೆರವಾಗಲಿದೆ. ಚೆಂಗುx-ಲಾಸಾ ನಡು ವಿನ 48 ಗಂಟೆಗಳ ದಾರಿಯನ್ನು ಇದು 13 ಗಂಟೆಗೆ ಇಳಿಸಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next