Advertisement

ಕೋವಿಡ್ ಹಬ್ಬಿಸಿದ್ದು ನಾವಲ್ಲ: ಚೀನ ಡ್ರಾಮಾ

12:22 AM Oct 10, 2020 | mahesh |

ಬೀಜಿಂಗ್‌: ಕೋವಿಡ್ ವೈರಾಣುವನ್ನು ಜಗತ್ತಿನಾದ್ಯಂತ ಹಬ್ಬಿಸಿದ ಚೀನ ಈಗ ಹೊಸ ನಾಟಕ ಆರಂಭಿಸಿದೆ. ಕೊರೊನಾ ಹಂಚಿದ್ದು ನಾವಲ್ಲ. ಚೀನಕ್ಕೂ ಮೊದಲು ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಕೊರೊನಾ ಹುಟ್ಟಿಕೊಂಡಿತ್ತು ಎಂದು ಹೇಳಿಕೊಂಡಿದೆ.

Advertisement

ಹೌದು! ವುಹಾನ್‌ ಲ್ಯಾಬ್‌ನಿಂದ ಕೋವಿಡ್ ವೈರಾಣು ಹರಡಿದೆ ಎಂದು ಇತ್ತೀಚೆಗೆ ಅಮೆರಿಕ ಆರೋಪಿಸಿದ್ದ ಬೆನ್ನಲ್ಲೇ ಚೀನ ವಿದೇಶಾಂಗ ಇಲಾಖೆ ಈ ಹೇಳಿಕೆ ನೀಡಿದೆ. “ಕಳೆದ ವರ್ಷದ ಅಂತ್ಯದಲ್ಲಿ ಕೋವಿಡ್ ಜಗತ್ತಿನ ಬೇರೆ ಬೇರೆ ಭಾಗದಲ್ಲಿ ದೃಢವಾಗಿತ್ತು. ಯಾರೂ ಈ ಬಗ್ಗೆ ಮಾತಾಡಿರಲಿಲ್ಲ. ಆದರೆ, ಚೀನ ಕೊರೊನಾ ಪತ್ತೆಹಚ್ಚಿ ಮೊದಲ ಬಾರಿಗೆ ವರದಿ ಮಾಡಿತು. ವೈರಾಣುವಿನ ಜೀನೋಮ್‌ ಅನುಕ್ರಮವನ್ನು ಜಗತ್ತಿನೊಂದಿಗೆ ಹಂಚಿ ಕೊಂಡಿತ್ತು’ ಎಂದು ಇಲಾಖೆ ವಕ್ತಾರ ಹುವಾ ಚುನ್ಯಿಂಗ್‌ ಹೇಳಿದ್ದಾರೆ.

“ಕೋವಿಡ್ ಒಂದು ಬಗೆಯ ಹೊಸ ವೈರಾಣು. ಅಮೆರಿಕ ಆಪಾದಿಸಿದಂತೆ ಇದು ವುಹಾನ್‌ನ ಲ್ಯಾಬ್‌ನಿಂದಾಗಲೀ, ಕೇಂದ್ರ ಚೀನದ ಮಾಂಸ ಮಾರುಕಟ್ಟೆಯ ಬಾವಲಿ ಅಥವಾ ಪ್ಯಾಂಗೊಲಿನ್‌ ಸಸ್ತನಿಯಿಂದಾಗಲೀ ಹಬ್ಬಿದ್ದಲ್ಲ’ ಎಂದು ಯುಎಸ್‌ನ ಆರೋಪವನ್ನು ಅಲ್ಲಗಳೆದಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪೊಂಪ್ಯೂ ಇತ್ತೀಚೆಗಷ್ಟೇ ಟೋಕಿಯೊದ ಕ್ವಾಡ್‌ ಸಭೆಯಲ್ಲಿ ಚೀನದ ಮೇಲೆ ತೀವ್ರ ವಾಗ್ಧಾಳಿ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next