Advertisement

China ಹೊಸ ಸಾಹಸ; ಭೂಮಿಗೆ ಕಾಣದ ಚಂದ್ರನ ಭಾಗದ ಮಾದರಿ ಸಂಗ್ರಹ

02:18 AM May 04, 2024 | Team Udayavani |

ಬೀಜಿಂಗ್‌: ಚಂದ್ರನ ಬಗ್ಗೆ ಮತ್ತಷ್ಟು ವೈಜ್ಞಾನಿಕ ಅಧ್ಯ ಯನ ನಡೆಸುವ ಸಲುವಾಗಿ ಚಂದ್ರನ ಮತ್ತೂಂದು ಭಾಗದಿಂದ ಮಾದರಿ ಸಂಗ್ರಹಿಸುವ ಸಾಹಸಕ್ಕೆ ಚೀನ ಮುಂದಾಗಿದೆ. ಇದಕ್ಕಾಗಿ ಶುಕ್ರವಾರ “ಚಾಂಗ್‌ ಇ-6′ ಎಂದು ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

Advertisement

ಭೂಮಿಗೆ ಕಾಣದ ಚಂದ್ರನ ಭಾಗದಿಂದ ಮಾದರಿ ಸಂಗ್ರಹಿಸುವ ಕಾರ್ಯ ಕೈಗೊಳ್ಳುತ್ತಿರುವುದು ಇದೇ ಮೊದಲಾಗಿದೆ. ಚಾಂಗ್‌ ಇ-6 ನೌಕೆಯಲ್ಲಿ ಆರ್ಬಿಟರ್‌, ಲ್ಯಾಂಡರ್‌, ಅಸೆಂಡರ್‌ (ಮತ್ತೆ ಉಡಾವಣೆಗೊಳ್ಳುವ ಯಂತ್ರ) ಮತ್ತು ಭೂಮಿಯನ್ನು ಪ್ರವೇಶಿಸುವ ಘಟಕವನ್ನು ಹೊಂದಿದೆ. ಇದು ಚಂದ್ರನ ಮೇಲೆ ಇಳಿಯುತ್ತಿದ್ದಂತೆ ಅಲ್ಲಿನ ಧೂಳು ಮತ್ತು ಕಲ್ಲಿನಂತಹ ಗಟ್ಟಿ ಪದಾರ್ಥಗಳನ್ನು ಸಂಗ್ರಹಿಸಿ ಅದನ್ನು ಭೂಮಿಗೆ ತರ ಲಿದೆ. ಇದನ್ನು ಆಧಾರವಾಗಿಟ್ಟುಕೊಂಡು ಚಂದ್ರನ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಳ್ಳಲಾಗುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next