Advertisement
ಆರ್ಥಿಕತೆಯಲ್ಲಿ ತನಗೆ ಪ್ರತಿಸ್ಪರ್ಧಿ ಯಾಗಿರುವ ಭಾರತವನ್ನು ಹಣಿಯು ವುದು ಚೀನ ತಂತ್ರ. ಪ್ರಮುಖವಾಗಿ ಭಾರತದೊಂದಿಗೆ ಸದಾ ಗಡಿ ಕ್ಯಾತೆ ತೆಗೆ ಯುವ ಚೀನ, ನಮ್ಮ ಶತ್ರು ರಾಷ್ಟ್ರವಾದ ಪಾಕಿಸ್ಥಾನದೊಂದಿಗೆ ತನ್ನ ಮಿತ್ರತ್ವವನ್ನು ಹೆಚ್ಚಿಸಿಕೊಳ್ಳುತ್ತ ಬಂದಿದೆ. ತನ್ನ ಯುದ್ಧ ಸನ್ನದ್ಧತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಸುಲಭ ಸೇನಾ ಸಂಚಾರಕ್ಕಾಗಿ ಗಡಿಯ ಸುತ್ತಲೂ ರಸ್ತೆ ಗಳನ್ನು ನಿರ್ಮಿ ಸಲು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮ್ಮ ಮಹಾತ್ವಾಕಾಂಕ್ಷೆಯ “ಒನ್ ಬೆಲ್ಟ್ ಒನ್ ರೋಡ್’ ಯೋಜನೆ ಯನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಇದರ ಭಾಗವಾಗಿ ಚೀನ-ಪಾಕಿಸ್ಥಾನ ಆರ್ಥಿಕ ಕಾರಿಡಾರ್ ನಿರ್ಮಾಣವಾಗುತ್ತಿದೆ. ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ಚೀನ, ತಾಲಿಬಾನ್ ನೇತೃತ್ವದ ಅಫ್ಘಾ ನಿಸ್ಥಾನಕ್ಕೂ ಈ ಯೋ ಜನೆಯನ್ನು ವಿಸ್ತ ರಿಸಿದೆ. ಈ ಯೋಜನೆಯನ್ನು ಮೊದಲಿ ನಿಂದಲೂ ಭಾರತ ವಿರೋ ಧಿಸುತ್ತಾ ಬಂದಿದೆ.
ಆರ್ಥಿಕವಾಗಿ ಹಿಂದುಳಿದ ಅಫ್ಘಾನಿಸ್ಥಾನದ ತೈಲ ಕ್ಷೇತ್ರದಲ್ಲಿ ಒಂದು ಲಕ್ಷ ಕೋಟಿ ಡಾಲರ್ ಹೂಡಿಕೆ ಮಾಡುವ ಭರವಸೆಯನ್ನು ಚೀನದಿಂದ ತಾಲಿಬಾನ್ ಆಡಳಿತ ಪಡೆದುಕೊಂಡಿದೆ. ಈಗಾಗಲೇ ಅಫ್ಘಾನಿಸ್ಥಾನದ ಉತ್ತರ ಅಮು ದರಿಯಾ ಜಲಾನಯನ ಪ್ರದೇಶ ದಿಂದ ತೈಲವನ್ನು ಹೊರತೆಗೆಯಲು ಚೀನ ನ್ಯಾಶನಲ್ ಪೆಟ್ರೋಲಿಯಂ ಕಾರ್ಪೊರೇಶನ್‌ನ ಅಂಗಸಂಸ್ಥೆ ಯೊಂದಿಗೆ ತಾಲಿಬಾನ್ ಸರಕಾರವು ಜನವರಿಯಲ್ಲಿ ತನ್ನ ಮೊದಲ ಒಪ್ಪಂದಕ್ಕೆ ಸಹಿ ಹಾಕಿದೆ.