Advertisement

ತಂಟೆಗೆ ಬಂದರೆ ಯುದ್ಧ!: ಅಮೆರಿಕಕ್ಕೆ ಚೀನ ಎಚ್ಚರಿಕೆ

09:48 AM Jan 14, 2017 | Team Udayavani |

ಬೀಜಿಂಗ್‌: ದಕ್ಷಿಣ ಚೀನ ಸಮುದ್ರ ವಲಯದಲ್ಲಿನ ತನ್ನ ಆಧಿಪತ್ಯಕ್ಕೆ ಅಮೆರಿಕ ಅಡ್ಡಿಪಡಿಸಲು ಮುಂದಾಗಿದ್ದೇ ಆದಲ್ಲಿ ಭಾರೀ ಯುದ್ಧವೇ ನಡೆದೀತು ಎಂದು ಚೀನ ಎಚ್ಚರಿಕೆ ನೀಡಿದೆ. ದಕ್ಷಿಣ ಚೀನ ಸಮುದ್ರದಲ್ಲಿ ದ್ವೀಪ ನಿರ್ಮಾಣ ಮಾಡುವ ಮೂಲಕ ಅದರ ಮೇಲೆ ಹಕ್ಕು ಸಾಧಿಸುವ ಯತ್ನವು, ಕಪ್ಪುಸಮುದ್ರದಲ್ಲಿನ ಕ್ರೆಮಿಯಾ ದ್ವೀಪಪ್ರದೇಶದ ಮೇಲೆ ರಷ್ಯಾದ ಹಕ್ಕು ಸಾಧನೆಯ ಯತ್ನದಂತಿದೆ. ಇಂಥ ಯತ್ನವನ್ನು ಚೀನ ಕೈಬಿಡಬೇಕು ಎಂದು ಅಮೆರಿಕದ ನಿಯೋಜಿತ ವಿದೇಶಾಂಗ ಸಚಿವ ಟಿಲ್ಲರ್‌ಸನ್‌ ಗುಡುಗಿದ್ದರು.

Advertisement

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೀನ ಸರಕಾರದ ಮುಖವಾಣಿಯಾದ ಗ್ಲೋಬಲ್‌ ಟೈಮ್ಸ್‌ ದಿನಪತ್ರಿಕೆ, “ನಮ್ಮ ಭಾವನೆಗಳನ್ನು ಕೆರಳಿಸುವಂಥವರನ್ನು ಎದುರಿಸುವ ದೃಢನಿಶ್ಚಯ ಮತ್ತು ಸಾಮರ್ಥ್ಯ ನಮಗಿದೆ. ದಕ್ಷಿಣ ಚೀನ ಸಮದ್ರದಲ್ಲಿ ಭಾರೀ ಯುದ್ಧ ಮಾಡುವ ಉತ್ಸಾಹದ ಹೊರತಾಗಿ ಬೇರೆ ಯಾವುದೇ ಉದ್ದೇಶದಿಂದ ನಮ್ಮನ್ನು ದ್ವೀಪಕ್ಕೆ ತೆರಳದಂತೆ ತಡೆಯುವ ಕ್ರಮ ಮೂರ್ಖತನವಾದೀತು’ ಎಂದು ಪತ್ರಿಕೆ ಕಟುವಾಗಿ ಎಚ್ಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next