Advertisement

ಚೀನಾದಲ್ಲಿನ್ನು ಸಿಸೇರಿಯನ್‌ಗೆ ಪತಿಯ ಒಪ್ಪಿಗೆ ಬೇಕಿಲ್ಲ?

08:10 PM Dec 22, 2021 | Team Udayavani |

ಬೀಜಿಂಗ್‌: ಇನ್ನು ಮುಂದೆ ಚೀನಾದಲ್ಲಿ ಸಿಸೇರಿಯನ್‌ ಹೆರಿಗೆಯನ್ನು ಆಯ್ಕೆ ಮಾಡುವ ಅಧಿಕಾರ ಮಹಿಳೆಯರಿಗೆ ಸಿಗಲಿದೆ.

Advertisement

ಮಹಿಳಾ ಹಕ್ಕುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಚೀನಾ ಇಂಥದ್ದೊಂದು ಹೆಜ್ಜೆಯಿಟ್ಟಿದ್ದು, ಪತಿಯ ವಿರೋಧವಿದ್ದರೂ, ಪತ್ನಿಯು ಸಿಸೇರಿಯನ್‌ ಮೂಲಕ ಮಗುವಿಗೆ ಜನ್ಮ ನೀಡಲು ನಿರ್ಧರಿಸಬಹುದಾಗಿದೆ ಎಂದು ವರದಿಗಳು ತಿಳಿಸಿವೆ.

ಮಹಿಳಾ ಹಕ್ಕುಗಳು ಮತ್ತು ಹಿತಾಸಕ್ತಿ ಸಂರಕ್ಷಣೆ ಕಾನೂನಿಗೆ ತರಲಾದ ತಿದ್ದುಪಡಿಯ ಕರಡು ಸೇರಿದಂತೆ ವಿವಿಧ ವಿಧೇಯಕಗಳ ಕುರಿತು ಈ ವಾರ ಚೀನಾ ಸಂಸತ್‌ನ ಸ್ಥಾಯಿ ಸಮಿತಿ ಸಭೆ ನಡೆಸಿ ಚರ್ಚಿಸಲಿದೆ.

ಪ್ರಸ್ತುತ ಇರುವ ಕಾನೂನಿನ ಪ್ರಕಾರ, ಪತಿಯ ಅನುಮತಿ ಇದ್ದರೆ ಮಾತ್ರವೇ ಪತ್ನಿಯು ಸಿಸೇರಿಯನ್‌ ಸೆಕ್ಷನ್‌ ಮೂಲಕ ಮಗುವಿಗೆ ಜನ್ಮ ನೀಡಬಹುದಾಗಿದೆ.

ಇದನ್ನೂ ಓದಿ:ಸ್ಮಾರ್ಟ್‌ಫೋನ್‌ ಖರೀದಿಸಿದ್ದಕ್ಕೆ ಅದ್ಧೂರಿ ಮೆರವಣಿಗೆ, ಭೂರಿ ಭೋಜನ : ವಿಡಿಯೋ ವೈರಲ್‌

Advertisement

2017ರಲ್ಲಿ , ಪತಿಯು ಸಿಸೇರಿಯನ್‌ಗೆ ಒಪ್ಪದ ಕಾರಣ, ನೋವು ತಾಳಲಾರದೆ ಗರ್ಭಿಣಿ ಆಸ್ಪತ್ರೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ಇದಾದ ಬಳಿಕ ಈ ಕಾನೂನಿಗೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next