Advertisement
ವಾಯುವ್ಯ ಚೀನಾದಲ್ಲಿರುವ ಜುವುಕ್ವಾನ್ ಉಡ್ಡಯನ ಕೇಂದ್ರದಿಂದ ಹೊರಟ ಶೆಂಘೌ-14 ಎಂಬ ರಾಕೆಟ್‌ನಲ್ಲಿ ಚೆಂಗ್ ಡೊಂಗ್, ಲಿಯು ಯಂಗ್, ಕಾಯ್ ಕ್ಸುಝೆ ಎಂಬ ಖಗೋಳ ಯಾತ್ರಿಗಳು ಪ್ರಯಾಣ ಬೆಳೆಸಿದ್ದಾರೆ. ಮುಂದಿನ 6 ತಿಂಗಳವರೆಗೆ ಅವರು ಅಂತರಿಕ್ಷದಲ್ಲೇ ಇರಲಿದ್ದು ಅಲ್ಲಿ ಚೀನದ ಬಾಹ್ಯಾಕಾಶ ನಿಲ್ದಾಣ ನಿರ್ಮಿಸಿದ ನಂತರ ಹಿಂದಿರುಗಲಿದ್ದಾರೆ.
ಸದ್ಯಕ್ಕೆ ಒಂದು ವಿಭಾಗವನ್ನು ಮಾತ್ರ ಹೊಂದಿರುವ ಚೀನದ ಬಾಹ್ಯಾಕಾಶ ನಿಲ್ದಾಣವನ್ನು ಕೋರ್ ಮಾಡ್ನೂಲ್, ಟೆಯಾನ್ಹೆ ಹಾಗೂ ಟು-ಲ್ಯಾಬ್ ಮಾಡ್ನೂಲ್ ಎಂಬ ಮೂರು ವಿಭಾಗಗಳನ್ನಾಗಿ ಪರಿವರ್ತಿಸಲಾಗುತ್ತದೆ. ಈಗ ಗಗನಕ್ಕೆ ಹೋಗಿರುವ ಯಾತ್ರಿಗಳು, ಚೀನದಿಂದ ಕಾರ್ಯನಿರ್ವಹಿಸುವ ಗ್ರೌಂಡ್ ಟೀಂ ಜತೆಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಈ ಪರಿವರ್ತನೆ ಕಾರ್ಯ ಮುಗಿಸಿಕೊಂಡು ಹಿಂದಿರುಗುತ್ತಾರೆ. ಎರಡನೇ ಬಾರಿ
ಚೀನವು ಬಾಹ್ಯಾಕಾಶ ನಿಲ್ದಾಣದ ವಿಚಾರಕ್ಕಾಗಿ ತನ್ನ ಖಗೋಳಯಾತ್ರಿಗಳನ್ನು ಕಳುಹಿಸುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ, ಒಬ್ಬ ಮಹಿಳೆ ಸೇರಿ ಆರು ಖಗೋಳ ಯಾತ್ರಿಕರು ಚೀನದ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ, ದಾಖಲೆಯ ಆರು ತಿಂಗಳವರೆಗೆ ಅಲ್ಲಿಯೇ ಉಳಿದು ನಿಲ್ದಾಣದ ಕೆಲವು ಪ್ರಮುಖ ಭಾಗಗಳನ್ನು ನಿರ್ಮಿಸಿದ್ದರು. ಇದೇ ಏಪ್ರಿಲ್‌ನಲ್ಲಿ ಅವರು ಭೂಮಿಗೆ ವಾಪಸ್ಸಾಗಿದ್ದರು.