Advertisement

ಮಣಿಪುರದಲ್ಲಿ ಬಂಧಿತ ಚೀನೀ ಪ್ರಜೆಯ ಮಾಹಿತಿ ಕೋರಿದ ಚೀನ

04:48 PM Dec 29, 2017 | Team Udayavani |

ಬೀಜಿಂಗ್‌ : ಮ್ಯಾನ್‌ಮಾರ್‌ಗೆ ತಾಗಿಕೊಂಡಿರುವ ಮಣಿಪುರ ಗಡಿಯಲ್ಲಿ ಈಚೆಗೆ ಬಂಧಿಸಲ್ಪಟ್ಟ ಚೀನೀ ಪ್ರಜೆಯ ವಿವರಗಳನ್ನು ಕೊಡುವಂತೆ ತಾನು ಭಾರತವನ್ನು ಕೇಳಿಕೊಂಡಿದ್ದೇನೆ ಎಂಬುದಾಗಿ ಚೀನ ಇಂದು ಹೇಳಿದೆ.

Advertisement

“ನಮಗೆ ದೊರಕಿರುವ ಮಾಹಿತಿಗಳ ಪ್ರಕಾರ ಭಾರತದಲ್ಲಿನ ಚೀನೀ ದೂತಾವಾಸವು ಮಣಿಪುರ ಗಡಿಯಲ್ಲಿ ಈಚೆಗೆ ಬಂಧಿಸಲ್ಪಟ್ಟ ಚೀನೀ ಪ್ರಜೆಯ ವಿವರಗಳನ್ನು ನೀಡುವಂತೆ ಭಾರತ ಸರಕಾರವನ್ನು ಕೇಳಿಕೊಂಡಿದೆ’ ಎಂದು ಚೀನದ ವಿದೇಶ ಸಚಿವಾಲಯ ಮಾಧ್ಯಮಕ್ಕೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. 

ಈ ಘಟನೆಯನ್ನು ನಾವು ಎಚ್ಚರಿಕೆಯಿಂದ ಮತ್ತು ನಿಕಟವಾಗಿ ಬೆನ್ನು ಹತ್ತುತ್ತಿದ್ದೇವೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ. 

ಚೀನೀ ಮಾಧ್ಯಮಗಳ ಪ್ರಕಾರ ಚೀನದ ಫ‌ುಜಿಯಾನ್‌ ಪ್ರಾಂತ್ಯದ 55ರ ಹರೆಯದ ನಿವಾಸಿ ಕಿನ್‌ ಮಿನ್‌ ಕ್ಸಿವ್‌ ಕ್ಸಿಯಾಂಗ್‌ ಎಂಬಾತನನ್ನು ಅಸ್ಸಾಂ ರೈಫ‌ಲ್ಸ್‌ನವರು ಮಣಿಪುರದ ತೆಂಗ್ನೊàಪಾಲ್‌ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಬಂಧಿಸಿದ್ದಾರೆ.  ಆತನ ಬಳಿ ಚೀನ, ವಿಯೆಟ್ನಾಂ ಮತ್ತು ಮ್ಯಾನ್‌ಮಾರ್‌ ಕೆಲ ದಾಖಲೆ ಪತ್ರಗಳು, ವಿದೇಶೀ ಕರೆನ್ಸಿಗಳು ಮತ್ತು ಪೆನ್‌ ಡ್ರೈವ್‌ ಹಾಗೂ ಕಂಪಾಸ್‌ ಇತ್ತೆಂದು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next