Advertisement

ಚೀನಾ: ಹೆಲ್ಮೆಟ್‌ ಧರಿಸಿ ಶಾಲೆಗೆ ಹೋಗ್ಬೇಕು

10:07 AM Apr 28, 2020 | sudhir |

ಕೋವಿಡ್ ಹುಟ್ಟಿಗೆ ಕಾರಣವಾಗಿರುವ ಚೀನಾ ಇದೀಗ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮೊದಲ ಹಂತವಾಗಿ ಚೀನಾದ ಹ್ಯಾಂಗ್‌ಝೌ ನಲ್ಲಿ ಸಣ್ಣ ಮಕ್ಕಳಿಗೆ ಶಾಲೆ ಆರಂಭಿಸಲಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳುವ ಸಲುವಾಗಿ ವಿಶೇಷವಾಗಿ ರೂಪಿಸಲಾಗಿರುವ ಹೆಲ್ಮೆಟ್‌, ಮುಖಕ್ಕೆ ಮಾಸ್ಕ್ ಅನ್ನು ಮಕ್ಕಳು ಹಾಕಿಕೊಂಡು ತರಗತಿಗೆ ಬರುವುದು ಕಡ್ಡಾಯವಾಗಿದೆ. ಹೆಲ್ಮೆಟ್‌ ಅನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ 1 ಮೀ. ಅಂತರವಿರುವಂತೆ ವಿಶೇಷವಾಗಿ ರೂಪಿಸಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಶಾಲೆಯ ಮಕ್ಕಳ ಫೋಟೊಗಳು ವೈರಲ್‌ ಆಗಿದೆ. ಮಕ್ಕಳಿಗಾಗಿ ಹಾಂಕಾಂಗ್‌ನಿಂದ ವಿಶೇಷ ಮಾಸ್ಕ್ ಗಳನ್ನು ತರಿಸಲಾಗಿದೆ.

Advertisement

ಇದೇ ವೇಳೆ ಕೋವಿಡ್ ಮೊದಲು ಕಾಣಿಸಿಕೊಂಡಿದ್ದ ವುಹಾನ್‌ ನಗರದ ಕೊನೆಯ ಕೋವಿಡ್ ಸೋಂಕಿತ ವ್ಯಕ್ತಿಯು ಇದೀಗ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ವುಹಾನ್‌ ನಗರದಲ್ಲಿ ಕೋವಿಡ್ ವೈರಸ್‌ ಹೊಸ ಪ್ರಕರಣಗಳು ಸದ್ಯ ಕಂಡು ಬಂದಿಲ್ಲ ಎನ್ನುವುದು ಸಮಾಧಾನಕರ ವಿಷಯವಾಗಿದೆ. ಕಳೆದ 3 ತಿಂಗಳಿನಿಂದ ಚೀನಾ ಕೋವಿಡ್ ದಿಂದ ನಡುಗಿ ಹೋಗಿತ್ತು. 80 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿತ್ತು, ಸಾವಿರಾರು ಮಂದಿ ಪ್ರಾಣ ತೆತ್ತಿದ್ದರು. ಮಾತ್ರವಲ್ಲ ಅಲ್ಲಿಂದಲೇ ವಿಶ್ವದ ಎಲ್ಲ ಕಡೆಗೆ ಕೋವಿಡ್ ವ್ಯಾಪ್ತಿಸಿ ಜನರ ಬದುಕು ಹೈರಾಣಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next