Advertisement

ಭಾರತ, ಪಾಕ್‌ ಅಣುರಾಷ್ಟಗಳೆಂದು ನಾವೆಂದೂ ಮಾನ್ಯ ಮಾಡಿಲ್ಲ: ಚೀನ

11:39 AM Mar 01, 2019 | udayavani editorial |

ಬೀಜಿಂಗ್‌ : ಭಾರತ ಮತ್ತು ಪಾಕಿಸ್ಥಾನವನ್ನು ಚೀನ ಎಂದಿಗೂ ಅಣುರಾಷ್ಟಗಳೆಂದು ಪರಿಗಣಿಸಿಲ್ಲ; ಹಾಗೆಯೇ ಟ್ರಂಪ್‌ – ಕಿಮ್‌ ನಡುವಿದ ಎರಡನೇ ಶೃಂಗ ವಿಫ‌ಲವಾಗಿರುವ ಕಾರಣ ಉತ್ತರ ಕೊರಿಯಕ್ಕೂ ಅಂತಹ ಸ್ಥಾನಮಾನವನ್ನು ಕೊಡುವುದಿಲ್ಲ ಎಂದು ಚೀನ ಇಂದು ಶುಕ್ರವಾರ ಹೇಳಿದೆ. 

Advertisement

ಭಾರತ ಮತ್ತು ಪಾಕಿಸ್ಥಾನಕ್ಕೆ ಅಣ್ವಸ್ತ್ರ ಶಕ್ತ ರಾಷ್ಟ್ರಗಳೆಂಬ ಸ್ಥಾನಮಾನವನ್ನು ಕೊಡದಿರುವ ತನ್ನ ನಿಲುವಿನಲ್ಲಿ ಈಗಲೂ ಯಾವುದೇ ಬದಲಾವಣೆ ಇಲ್ಲ ಎಂದು ಚೀನದ ವಿದೇಶ ಸಚಿವಾಲಯದ ವಕ್ತಾರ ಲೂ ಕಾಂಗ್‌ ಇಂದು ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು. 

ತನ್ನ ಎರಡು ಅಣು ಸಂಸ್ಕರಣ ಘಟಕಗಳನ್ನು ಮುಚ್ಚುವುದಕ್ಕೆ ಪ್ಯಾಂಗ್‌ ಯಾಂಗ್‌ ನಿರಾಕರಿಸಿರುವ ಕಾರಣ ಅಮೆರಿಕ ಅಧ್ಯಕ್ಷ ಟ್ರಂಪ್‌ ಮತ್ತು ಉತ್ತರ ಕೊರಿಯ ಮುಖ್ಯಸ್ಥ ಕಿಮ್‌ ಅವರೊಳಗೆ ಹೆನಾಯ್‌ ನಲ್ಲಿ ನಡೆದಿದ್ದ ಎರಡನೇ ಶೃಂಗವು ಯಾವುದೇ ಒಪ್ಪಂದವನ್ನು ಸಾಧಿಸಲಾಗದೆ ಮುರಿದು ಬಿದ್ದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next