ಬೀಜಿಂಗ್: ಪಶ್ಚಿಮ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬರಲ್ಲಿ ಎಚ್ 10ಎನ್ 3 ತಳಿಯ ಹಕ್ಕಿ ಜ್ವರ ಪತ್ತೆಯಾಗುವ ಮೂಲಕದ ಜಗತ್ತಿನ ಮೊದಲ ಪ್ರಕರಣ ಚೀನಾದಲ್ಲಿ ಕಂಡುಬಂದಿರುವುದಾಗಿ ನ್ಯಾಷನಲ್ ಹೆಲ್ತ್ ಕಮಿಷನ್ ಮಂಗಳವಾರ(ಜೂನ್ 01) ತಿಳಿಸಿದೆ.
ಇದನ್ನೂ ಓದಿ:‘ನಾನಲ್ಲ, ಸೋನು ಸೂದ್ ಸೂಪರ್ ಹೀರೋ’ : ತೆಲಂಗಾಣ ಸಚಿವ ಕೆಟಿಆರ್
ಜೆನ್ ಜಿಯಾಗ್ ನಗರದ ನಿವಾಸಿಯಾದ 41 ವರ್ಷದ ಪ್ರಾಯದ ವ್ಯಕ್ತಿಯಲ್ಲಿ ಈ ಎಚ್ 10ಎನ್ 3ತಳಿಯ ಹಕ್ಕಿ ಜ್ವರ ಪತ್ತೆಯಾಗಿದೆ. ಇದು ವಿಶ್ವದ ಮೊದಲ ಮಾನವ ಪ್ರಕರಣವಾಗಿದೆ ಎಂದು ಹೇಳಿದೆ. ಸದ್ಯ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದ್ದು, ಕೂಡಲೇ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಲಾಗುವುದು ಎಂದು ಸಿಜಿಟಿಎನ್ ಟಿವಿ ವರದಿ ಮಾಡಿದೆ.
ಆದರೆ ಇದೊಂದು ಹಕ್ಕಿ ಜ್ವರ ಎಂಬುದನ್ನು ಚೀನಾ ಆರೋಗ್ಯ ಅಧಿಕಾರಿಗಳು ನಿರಾಕರಿಸಿದ್ದು, ಕೋಳಿಯಿಂದ ಮನುಷ್ಯನಿಗೆ ಸೋಂಕು ಹರಡುವ ಮೂಲಕ ಸಾಂಕ್ರಾಮಿಕ ರೋಗ ಉಂಟು ಮಾಡುವ ಅಪಾಯ ಇದರಿಂದ ತೀರಾ ಕಡಿಮೆ ಎಂದು ತಿಳಿಸಿದ್ದಾರೆ.
ಜ್ವರ ಮತ್ತು ಇತರ ರೋಗ ಲಕ್ಷಣಗಳು ಕಂಡು ಬಂದ ಪರಿಣಾಮ ಈ ವ್ಯಕ್ತಿ ಏಪ್ರಿಲ್ 28ರಂದು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ವ್ಯಕ್ತಿಯ ಆರೋಗ್ಯ ತಪಾಸಣೆ ನಡೆಸಿದಾಗ ಎಚ್ 10ಎನ್ 3 ತಳಿಯ ಹಕ್ಕಿ ಜ್ವರದ ಸೋಂಕು ಪತ್ತೆಯಾಗಿತ್ತು. ಆದರೆ ವ್ಯಕ್ತಿಗೆ ಸೋಂಕು ಹೇಗೆ ತಗುಲಿತು ಎಂಬ ವಿವರವನ್ನು ಎನ್ ಎಚ್ ಸಿ ಬಹಿರಂಗಪಡಿಸಿಲ್ಲ.